ಡೈರೆಕ್ಟರ್ ರಾಜಮೌಳಿ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜೆನಿಲಿಯಾ. ಕಿರೀಟಿ ಸಿನಿಮಾದಲ್ಲಿ ಸ್ಟಾರ್‌ಗಳ ಬಳಗ....
ಜನಾರ್ದನ ರೆಡ್ಡಿ ಅವರ ಕಿರಿಯ ಪುತ್ರ ಕಿರೀಟಿ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಜರ್ನಿ ಆರಂಭಿಸಲು ಮುಂದಾಗಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಚಿತ್ರ ಮೂಹೂರ್ತ ನಡೆಯಿತು. ಬಾಹುಬಲಿ ನಿರ್ದೇಶಕ ರಾಜಮೌಳಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಆಗಮಿಸಿ ಇಡೀ ಚಿತ್ರರಂಗಕ್ಕೆ ಶುಭ ಹಾರೈಸಿದ್ದರು. ಚಿತ್ರದಲ್ಲಿ ಕಿರೀಟಿಗೆ ನಾಯಕಿಯಾಗಿ 'ಕಿಸ್' ಚಿತ್ರದ ನಟಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಲವು ವರ್ಷಗಳ ನಂತರ ನಟಿ ಜೆನಿಲಿಯಾ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಜೆನಿಲಿಯಾ ಮಾತು:
'ನಾನು ನಟನೆಗೆ ಮರಳದೇ 10 ವರ್ಷಗಳೇ ಕಳೆದಿದೆ . ಇದೊಂದು ಸ್ಪೆಷಲ್ ಪ್ರಾಜೆಕ್ಟ್. ಇದರಲ್ಲಿ ಭಾಗಿಯಾಗುವುದಕ್ಕೆ ನನಗೆ ಸಂತೋಷವಿದೆ. ಕಿರೀಟಿ ಇದು ನಿಮ್ಮ ಡೆಬ್ಯೂ ಸಿನಿಮಾ. ನಿಮಗೆ ಒಳ್ಳೆಯದಾಗಲಿ ನಿಮ್ಮ ಜರ್ನಿಯಲ್ಲಿ ನಾವು ಜೊತೆಯಾಗಿರುತ್ತೇವೆ. ಈ ಚಿತ್ರಕ್ಕೆ ಗ್ರೇಟ್ ನಿರ್ಮಾಪಕರು ಮತ್ತು ಗ್ರೇಟ್ ತಂಡವಿದೆ. ನೀವು ನನ್ನನ್ನೇ ಆಯ್ಕೆ ಮಾಡಿರುವುದಕ್ಕೆ ಹೇಳಕೊಳ್ಳಲಾಗದಷ್ಟು ಸಂತೋಷ ಆಗ್ತಾ ಇದೆ. ನನ್ನ ಕಮ್‌ಬ್ಯಾಕ್ ಹೇಗಿದೆ ಅಂದ್ರೆ ನಿನ್ನ ಜೊತೆ ನಾನೂ ಕೂಡ ಈಗ ನ್ಯೂಕಮರ್' ಎಂದು ಜೆನಿಲಿಯಾ ಮಾತನಾಡಿದ್ದಾರೆ.

'ಶಿವರಾಜ್ ಅಣ್ಣ ಜೊತೆ ಸಿನಿಮಾ ಮಾಡಿದ ಮೇಲೆ ನಂತರ ಈಗಲೇ ಸಿನಿಮಾ ಮಾಡುತ್ತಿರುವುದು. ನಾನು ಮೂಲತಃ ಕರ್ನಾಟಕದವಳು. ನನ್ನ ತಾತ ಮುತ್ತಾತರು ವಾಸಿಸಿದ ಸ್ಥಳ ಇದು. 10 ವರ್ಷಗಳ ನಂತರ ನಾನು ಕಮ್‌ಬ್ಯಾಕ್ ಮಾಡುತ್ತಿರುವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನನಗೆ ಬೇಕಿದೆ. ಕಿರೀಟಿ ಜೊತೆ ನಟಿಸುವುದಕ್ಕೆ ಸಂತೋಷವಾಗುತ್ತಿದೆ. ಈಗಷ್ಟೆ ಟ್ರೈಲರ್ ನೋಡಿದೆ ಅದ್ಭುತವಾಗಿ ನಟಿಸಿದ್ದಾನೆ. ನಮ್ಮ ಪ್ರೀತಿ ಮತ್ತು ಸಪೋರ್ಟ್ ಅವರಿಗೆ ಇರುತ್ತದೆ. ಈ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಕಾರಣ ಏನೆಂದರೆ ಅಣ್ಣ ತಂಗಿ ನಡುವಿನ ಸಂಬಂಧ ಸದಾ ಕ್ಲಿಕ್ ಆಗುತ್ತದೆ. ಈ ಪಾತ್ರ ಒಂದು ರೀತಿ ಚಾಲೆಂಜಿಂಗ್ ಆಗಿರುತ್ತದೆ. ಪಾತ್ರಕ್ಕೆ ಪ್ರಾಮುಖ್ಯತೆ ಆದರೆ ಲುಕ್ ರಿವೀಲ್ ನೋಡಲು ಕಾಯಬೇಕಿದೆ ಆದರೆ ಒಂದು ರೀತಿ ಹಳ್ಳಿ ಮತ್ತು ಸಿಟಿ ಹುಡುಗಿ ಪಾತ್ರವಿದು. ನಾನು ಕಿರೀಟಿಗೆ ಯಾವ ಸಲಹೆ ಕೊಡುವುದು ಬೇಡ, ಇನ್ನೂ ತರಬೇತಿ ಪಡೆದಿರುವುದಕ್ಕೆ ಅವರೇ ನನಗೆ ಸಲಹೆ ನೀಡಬೇಕಿದೆ. ನನ್ನ ಎರಡನೇ ಇನ್ನಿಂಗ್ಸ್ ಚೆನ್ನಾಗಿರುತ್ತೆ ಅಂತ ನಿಮಗೆ ಅನಿಸಿದ್ದರೆ ನನಗೆ ಅದು ಸಪೋರ್ಟ್' ಎಂದು ಜೆನಿಲಿಯಾ ಹೇಳಿದ್ದಾರೆ.
ರಿತೇಶ್ -ಜೆನಿಲಿಯಾ ಲವ್ ಸ್ಟೋರಿ ಪ್ರಾರಂಭವಾಗಿದ್ದು ಹೀಗೆ.. 8 ಸಾರಿ ಪಾದ ಮುಟ್ಟಿದ್ದ ನಟ!
ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಜೆನಿಲಿಯಾ ತೊಡಗಿಸಿಕೊಂಡಿದ್ದಾರೆ. 'ತುಜೆ ಮೇರಿ ಕಸಮ್' ಸಿನಿಮಾದಲ್ಲಿ ಅಂಜಲಿಯಾಗಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು ಆದರೆ 2003ರಲ್ಲಿ ಬಿಡುಗಡೆಯಾದ ಬಾಯ್ಸ್ ಸಿನಿಮಾ ಮೂಲಕ ತಮಿಳು ಸಿನಿಮಾದಲ್ಲಿ ಜನಪ್ರಿಯತೆ ಪಡೆದುಕೊಂಡರು. 2008ರಲ್ಲಿ ಸತ್ಯ ಇನ್ ಲವ್ ಸಿನಿಮಾದಲ್ಲಿ ವೇದ ಆಗಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೇ ಕೊನೆ ಕನ್ನಡ ಸಿನಿಮಾ ಆಗಿದ್ದು ಆದರೀಗ ಕಿರೀಟಿ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 2011ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಈ ವರ್ಷ ವೇದ್ ಚಿತ್ರದ ಮೂಲಕ ಮರಾಟಿ ಚಿತ್ರಕ್ಕೆ ಎಂಟ್ರಿ ಕೊಟ್ಟರು.
Salman Khan Genelia DSouza Dance: ಸಲ್ಲು ಜೊತೆ ರಿತೇಶ್ ಹೆಂಡ್ತಿಯ ಸಖತ್ ಡ್ಯಾನ್ಸ್
2012 ಫೆಬ್ರವರಿಯಲ್ಲಿ ಬಾಲಿವುಡ್ ನಟ ರಿತೇಷ್ ಜೊತೆ ಜೆನಿಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2014ರಲ್ಲಿ ಮೊದನೇ ಪುತ್ರ 2016ರಲ್ಲಿ ಎರಡನೇ ಪುತ್ರನನ್ನು ಬರ ಮಾಡಿಕೊಂಡು ಪರ್ಸನಲ್ ಲೈಫ್‌ನಲ್ಲಿ ಸಖತ್ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಬಣ್ಣ ಹಚ್ಚುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
