Asianet Suvarna News Asianet Suvarna News

ಪಾಸಿಟಿವ್ ಅಥವಾ ನೆಗೆಟಿವ್ ಒಟ್ಟಾರೆ ಸುದ್ದಿಯಲ್ಲಿರುವೆ: ಟ್ರೋಲ್‌ ಮತ್ತು ಮದುವೆ ಬಗ್ಗೆ ರಚಿತಾ ರಾಮ್ ಉತ್ತರ

ದಿನಕ್ಕೊಂದು ವಿಚಾರಕ್ಕೆ ಟ್ರೋಲ್ ಆಗುವ ರಚಿತಾ ರಾಮ್. ದೇವಸ್ಥಾನ ಅಥವಾ ಮನೆಯಲ್ಲಿ ಮದುವೆ ಆಗಬೇಕು...
 

Actress Dimple Rachita Ram talks about Trolls negative comment fans marriage and family vcs
Author
First Published Jan 17, 2023, 12:32 PM IST

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಸ್ಟಾರ್ ನಟರ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಸಹಿ ಮಾಡುವ ಮೂಲಕ ಚಿತ್ರರಂಗದ ಮೋಸ್ಟ್‌ ಬ್ಯುಸಿ ನಟಿಯಾಗಿದ್ದಾರೆ. ಸಿನಿ ಜರ್ನಿ ಅರಂಭಿಸಿ 10 ವರ್ಷಗಳು ಕಳೆದಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ರಚ್ಚು ಮದುವೆ ಮತ್ತು ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. 

ಫ್ಯಾನ್ಸ್‌ ಬಗ್ಗೆ:

'ಬುಲ್ ಬುಲ್ ಸಿನಿಮಾ ಆದ್ಮೇಲೆ 10-15 ಜನ ಹೆಚ್ಚಾದರು, ರನ್ನ ಆದ್ಮೇಲೆ ನಂಬರ್ ಹೆಚ್ಚಾಯ್ತು ಚಕ್ರವ್ಯೂಹ, ಭರ್ಜರಿ, ಆಯುಷ್ಮಾನ್‌ಭವ ಆದ್ಮೇಲೆ ನಂಬರ್‌ಗಳು ಹೆಚ್ಚಾಗುತ್ತಲೇ ಇದೆ. ನಾನು ನೋಡಿರುವ ಹಾಗೆ ಎಲ್ಲಾ ಹೀರೋಗಳ ಮನೆ ಮುಂದೆ ಭರ್ಜರಿ ಬರ್ತಡೇ ಸೆಲೆಬ್ರೇಷನ್ ನಡೆಯುತ್ತದೆ. ರಾತ್ರಿ ಪೂರ್ತಿ ಅಭಿಮಾನಿಗಳ ಜೊತೆಗಿರುತ್ತಾರೆ. ಉತ್ಪ್ರೇಕ್ಷೆ ಮಾಡಿ ಹೇಳುತ್ತಿಲ್ಲ ರಾತ್ರಿ 12 ಗಂಟೆಯಿಂದ 2.30ವರೆಗೂ ಅಲ್ಲೇ ಇದ್ದೀನಿ. ಇದೆಲ್ಲಾ ನಿಜವಾಗಲೂ ನಡೆಯುತ್ತಿದ್ಯಾ ಅನ್ನೋ ಭಯ ಶುರುವಾಯ್ತು. ದೇವರಿಗೆ ಲೆಕ್ಕವಿಲ್ಲದಷ್ಟು ಸಲ ಧನ್ಯವಾದಗಳ್ನು ತಿಳಿಸಿರುವೆ. ಅಭಿಮಾನಿಗಳಿಗೆ ನೋವು ಮಾಡಬಾರದು, ಏನೋ ಒಂದು ರೀತಿ ರಿಯಾಕ್ಟ್‌ ಮಾಡಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ. ನಮ್ಮನೆಯವರು ಅನ್ನೋ ರೀತಿ ನಮ್ಮನ್ನು ಒಪ್ಪಿಕೊಂಡಿದ್ದಾರೆ. ಬರ್ತಡೇ ದಿನ ಬೆಳಗ್ಗೆ 10 ಗಂಟೆಗೆ ನಿಂತುಕೊಂಡು ರಾತ್ರಿ 9ವರೆಗೂ ಇದ್ದೆ. ಕೆಲವರು ನನ್ನ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಅಪ್ಪು ಸರ್ ಫೋಟೋ ತಂದ್ರು ಗಾಡಿ ಮೇಲೆ ನನ್ನ ಫೋಟೋ ಇತ್ತು. ನನ್ನದು ಚಿಕ್ಕ ವಯಸ್ಸು ಇದೆಲ್ಲಾ ದೊಡ್ಡ ಮಟ್ಟಕ್ಕೆ ಆಗುತ್ತಿದೆ ಜೀವನ ಪೂರ್ತಿ ಇವರನ್ನು ಉಳಿಸಿಕೊಳ್ಳಬೇಕು ಅನಿಸುತ್ತಿದೆ' ಎಂದು ರಚಿತಾ ರಾಮ್ ಕನ್ನಡ ಪಿಚ್ಚರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Rachita Ram ದಪ್ಪ ಆಗಿದ್ದಕ್ಕೆ ಗೀತಾ ವರ್ಕೌಟ್ ನೋಡಿ ನಮ್ಮಮ್ಮ ಬೈತಾವ್ರೆ: ರಚಿತಾ ರಾಮ್

ಟ್ರೋಲ್‌ಗಳ ಬಗ್ಗೆ: 

'ನಾನು ಕನ್ನಡದ ಹುಡುಗಿ ಎಲ್ಲರನ್ನು ಪ್ರೀತಿ ಮಾಡೋಣ ಎಲ್ಲರಿಗೂ ಒಂದೇ ರೀತಿ ಪ್ರೀತಿ ಕೊಡೋಣ. ಆರಂಭದಿಂದಲೂ ನಾನು ಹೇಳುತ್ತಿರುವುದು ಒಂದೇ.... ಇಷ್ಟವಿಲ್ಲ ಅಂದ್ರೆ ಮಾತನಾಡಲು ಹೋಗಬಾರದು ಎಲ್ಲರಿಗೂ ಮನಸ್ಸಿರುತ್ತೆ. ನಮ್ಮ ಮಾತಿನಿಂದ ಮತ್ತೊಬ್ಬರಿಗೆ ನೋವು ಮಾಡೋದು ಬೇಡ. ಕಾಮೆಂಟ್‌ನಲ್ಲಿ ನಿಂದಿಸುವುದು ಬೇಡ. ಕಾಮೆಂಟ್ ಮಾಡುವುದಕ್ಕೆ ತುಂಬಾ ಸುಲಭ ಆದರೆ ಕ್ಯಾಮೆರಾ ಮುಂದೆ ಆಕ್ಟ್‌ ಮಾಡುವುದು ಸುಲಭವಲ್ಲ. ಯಾರದ್ದೋ ದೇಹಕ್ಕೆ ನಮ್ಮ ಮುಖ ಹಾಕಿ ಫೋಟೋ ಮಾರ್ಫ್‌ ಮಾಡುತ್ತಾರೆ ಅಷ್ಟು ಸುಲಭನಾ ಹೆಣ್ಣುಮಕ್ಕಳು? ನಮಗೂ ಒಂದು ಫ್ಯಾಮಿಲಿ ಇರುತ್ತೆ ಅವರಿಗೂ ಬೇಸರ ಆಗುತ್ತೆ ಹಾಗೆ ಮಾಡಬೇಡಿ. ಕೆಲವೊಂದು ಟ್ರೋಲ್ ಮತ್ತು ಮೀಮ್‌ಗಳನ್ನು ನಾನು ಎಂಜಾಯ್ ಮಾಡಿದ್ದೀವಿ ಆದರೆ ವ್ಯಕ್ತಿಗಳ ಮೇಲೆ ಮಾಡುವುದು ಅವರಿಗೆ ಅವಮಾನ ಆಗುತ್ತದೆ. ಪಾಸಿಟಿವ್ ರೀತಿಯಲ್ಲಿ ಖುಷಿ ಹಂಚೋಣ. ನೆಗೆಟಿವ್ ಕಾಮೆಂಟ್ ಬರ್ಲಿ ಪಾಸಿಟಿವ್ ಕಾಮೆಂಟ್ ಬರ್ಲಿ ಮಾರ್ಕೆಟ್‌ನಲ್ಲಿ ಹೆಸರು ಓಡುತ್ತಿದೆ ಅನ್ನೋದು ಎಲ್ಲರಿಗೂ ಇರುತ್ತೆ ಆದರೆ ಮನಸ್ಸಿಗೆ ನೋವಾಗುತ್ತದೆ. ಮನೋರಂಜನೆಗೆ ಮಾಡಿ ಆದರೆ ನೆಗೆಟಿವ್ ಬೇಡ' ಎಂದು ರಚಿತಾ ರಾಮ್ ಹೇಳಿದ್ದಾರೆ. 

Actress Dimple Rachita Ram talks about Trolls negative comment fans marriage and family vcs

ಮದುವೆ ಬಗ್ಗೆ: 

ಮದುವೆ ಅನ್ನೋದು ಒಂದು ಸುಂದರವಾದ ಕ್ಷಣ ನನಗೆ. ಮದುವೆ ಯಾವಾಗ ಆಗ್ತೀನಿ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಆಗೋ ಪ್ಲ್ಯಾನ್ ಮಾಡಿಲ್ಲ. ಮದುವೆ ಆಗ್ತೀದ್ದೀನಿ ಅನ್ನೋ ವಿಚಾರವನ್ನು ಖುಷಿಯಾಗಿ ಹಂಚಿಕೊಳ್ಳುತ್ತೀನಿ. ದೇವಸ್ಥಾನದಲ್ಲಿ ಮದುವೆ ಆಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆ ಆಗಬೇಕು...ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ. ಆಡಂಬರದಲ್ಲಿ ಮದುವೆ ಮಾಡ್ಕೊಂಡು ಆಮೇಲೆ ಲೈಫ್ ಅಯ್ಯಯ್ಯೋ ಅನ್ನುವ ಹಾಗೆ ಆದರೆ ಏನ್ ಮಾಡೋದು. ಹಣೆ ಬರಹ ಏನು ಮಾಡಲು ಆಗುವುದಿಲ್ಲ. ನಮ್ಮ ಮದುವೆ...ನಾನು ಮದುವೆಯಾಗಿ ಜೀವನ ಶುರು ಮಾಡುತ್ತಿರುವುದು ನನ್ನ ಪಾರ್ಟನರ್‌ ಜೊತೆ ಹೀಗಾಗಿ ಮದುವೆ ಇಷ್ಟದ ಪ್ರಕಾರ ನಡೆಯಬೇಕು ಅಷ್ಟೆ. 

Follow Us:
Download App:
  • android
  • ios