ಟಾಲಿವುಡ್‌ ಲೋಕದಲ್ಲಿ ಮಿಂಚುವುದು ಅಂದ್ರೆ ಸುಮ್ನೇನಾ? ಅದರಲ್ಲೂ 41 ಆದರೂ ಕೈ ತುಂಬಾ ಸಿನಿಮಾ ಇಟ್ಕೊಂಡಿರುವ ಮೋಸ್ಟ್ ಡಿಮ್ಯಾಂಡಬಲ್ ನಟಿ ಭೂಮಿಕಾ ಚಾವ್ಲಾ.  

ರಚ್ಚುಗೂ ಇದ್ಯಂತೆ ಲವ್ ಫೆಲ್ಯೂರ್; ರಿವೀಲ್ ಮಾಡೋಕೆ ಪ್ರೇಮ್ ಬರ್ಬೇಕಾಯ್ತು!

ಹೌದು! ಕನ್ನಡ ಚಿತ್ರ 'ಗಾಡ್‌ಫಾದರ್‌'ನಲ್ಲಿ ಸ್ಪೆಷಲ್ ಗೆಸ್ಟ್‌ ಆಗಿ ಕಾಣಿಸಿಕೊಂಡು ಆ ನಂತರ ಇಂದ್ರಜಿತ್ ಲಂಕೇಶ್ ನಿರ್ದೇಶಕನ 'ಲವ್ ಯೂ ಆಲಿಯಾ' ಚಿತ್ರದಲ್ಲಿ ಮಿಂಚಿರುವ ಭೂಮಿಕಾ ಚಾವ್ಲಾ ಇದೇ ಮೊದಲು ವೆಬ್‌ ಸೀರಿಸ್‌ ಮೂಲಕ ಪ್ರೇಕ್ಷಕರನ್ನು ರಂಜಿಸಲು ಇನ್ನು ಹೆಚ್ಚು ಹತ್ತಿರವಾಗಲು ನಿರ್ಧರಿಸಿದ್ದಾರೆ.  'ಕಥೆ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನೋಡೋಣ 'ಎಂದು ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ್ದಾರೆ. 

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಭೂಮಿಕಾ ಚಾವ್ಲಾ 2007 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗಂಡು ಮಗುವಿಗೆ ಜನ್ಮ ನೀಡಿದ ನಂತರ ಮದರ್‌ಹುಡ್‌ ಎಂಜಾಯ್ ಮಾಡಬೇಕೆಂದು ಸಿನಿ ಜರ್ನಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಈಗ ಬ್ರೇಕ್ ಮುಗಿಯಿತು, ಕಮ್ ಬ್ಯಾಕ್ ಮಾಡಲು ಸಿದ್ಧ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.