ಸ್ಯಾಂಡಲ್‌ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಯಾಕೆ ಮದುವೆಯಾಗ್ತಾ ಇಲ್ಲ ಅನ್ನೋದಕ್ಕೆ ಜೋಗಿ ಪ್ರೇಮ್ ಉತ್ತರ ಕೊಟ್ಟಿದ್ದಾರೆ.  ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಮೋಸ್ಟ್ ಸಕ್ಸಸ್ ಫುಲ್ ನಟಿ ಎನಿಸಿಕೊಂಡಿದ್ದಾರೆ.

ಸಿನಿ ಕರಿಯರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಎಂಥವರೂ ಬಿದ್ದು ಹೋಗುವ ಸೌಂದರ್ಯ, ಅದ್ಭುತ ನಟನೆ, ಭಾಷೆ ಮೇಲೆ ಒಳ್ಳೆಯ ಹಿಡಿತ ಎಲ್ಲವನ್ನೂ ನೋಡಿದ್ರೆ ಇಂತಹ ಬೇಕೆಂಬುದು ಎಲ್ಲಾ ಬ್ಯಾಚುಲರ್‌ಗಳ ಕನಸು. ಆದರೆ ರಚಿತಾ ಮಾತ್ರ ಮದುವೆಗೆ ಒಪ್ತಾಯಿಲ್ಲ! 

ಗಣ್ಯರ ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್!

ರಚಿತಾ ರಾಮ್ ಯಾಕೆ ಮದುವೆಯಾಗ್ತಾ ಇಲ್ಲ ಎನ್ನುವುದನ್ನು ನಿರ್ದೇಶಕ ಜೋಗಿ ಪ್ರೇಮ್ ರಿವೀಲ್ ಮಾಡಿದ್ದಾರೆ. ರಚ್ಚುಗೆ ಲವ್ ಫೆಲ್ಯೂರ್ ಆಗಿದೆಯಂತೆ! ಆದರೆ ಇದನ್ನು ರಚ್ಚು ಎಲ್ಲಿಯೂ ಹೇಳಿಕೊಂಡಿಲ್ವಂತೆ! 

 

ಅದೇನು ಕಥೆ? ಲವ್ ಫೆಲ್ಯೂರ್ ಆಗದ್ದೇಕೆ? ಎಂದು ಜೋಗಿ ಪ್ರೇಮ್ ಹೇಳಬೇಕು. ಈ ಸತ್ಯ ಅವರಿಗೆ ಮಾತ್ರ ಗೊತ್ತಿದೆ! 

ಏನಪ್ಪಾ ಇದು? ಎಂದು ಯೋಚಿಸ್ತಾ ಇದೀರಾ? ರಚಿತಾ, ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಲವ್ ಫೆಲ್ಯೂರ್ ಹಾಡೊಂದನ್ನು ಸದ್ಯದಲ್ಲೇ ರಿಲೀಸ್ ಮಾಡಲಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ಹುಡುಗರ ಲವ್ ಫೆಲ್ಯೂರ್‌ ಹಾಡುಗಳೇ ಹೆಚ್ಚಾಗಿರುತ್ತದೆ. ಆದರೆ ಜೋಗಿ ಪ್ರೇಮ್ ತಮ್ಮ ಸಿನಿಮಾದಲ್ಲಿ ಲವ್ ಫೆಲ್ಯೂರ್ ಆದ ಹೆಣ್ಣು ಮಕ್ಕಳಿಗಾಗಿಯೇ ಹಾಡೊಂದನ್ನು ಮಾಡಿದ್ದಾರೆ. ರಚಿತಾ ರಾಮ್ ಆ ಹಾಡಿನಲ್ಲಿ ನಟಿಸಿದ್ದಾರೆ. ಇದನ್ನೇ ಇಟ್ಟುಕೊಂಡು ಪ್ರೇಮ್, ರಚಿತಾಗೆ ತಮಾಷೆ ಮಾಡಿದ್ದಾರೆ.