ಮುದ್ದು ಮುದ್ದಾಗಿ ಮಾತನಾಡುತ್ತಾ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ಬೇಬಿ ಶಾಮಿಲಿ ಚಂದನವನದ ಸುಂದರ ಚೆಲುವೆ. ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಮಿಂಚುತ್ತಾ ಸ್ಟಾರ್ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕೆ ಈ ನಟಿಯದ್ದು. ಶಾಮಿಲಿಗೆ ಚಿತ್ರ ನೋಡುತ್ತಿದ್ದ ಮಂದಿ ಅದೆಷ್ಟೋ. ಅಬ್ಬಾ, ಒಂದು ಕಾಲದಲ್ಲಿ ಈ ನಟಿ ಎಲ್ಲ ಚಿತ್ರ ರಸಿಕರನ್ನೂ ಮೋಡಿ ಮಾಡಿ, ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.

ಗಗನಸಖಿಯಾಗಬೇಕಿದ್ದ ಟಿಕ್‌ಟಾಕ್‌ ಹುಡ್ಗಿ ಕಿರುತೆರೆ ನಟಿಯಾದ ಕಥೆ ಇದು!

ಆಕೆ ಅಭಿನಯಕ್ಕೆ ಬೋಲ್ಡ್‌ ಆಗದವರೇ ಇರಲಿಲ್ಲ. ಚೆಲುವು ಒಂದೇ ಅಲ್ಲ, ಅಭಿನಯವೂ ಎಂಥವರನ್ನಾದರೂ ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಬಾಲ್ಯದಲ್ಲಿಯೇ ಇಷ್ಟು ಪ್ರತಿಭೆ ಪ್ರದರ್ಶಿಸಿದ ನಟಿ ಬಗ್ಗೆ ಸಹಜವಾಗಿಯೇ ಚಿತ್ರ ರಸಿಕರು ದೊಡ್ಡವಳಾದ ಮೇಲೂ ದೊಡ್ಡ ಕಲಾವಿದೆ ಆಗುತ್ತಾಳೆಂಬ ನಂಬಿಕೆ ಇಟ್ಟುಕೊಂಡಿದ್ದರು. ಆದರೆ, ಎಲ್ಲವೂ ಉಲ್ಟಾ ಹೊಡೆಯಿತು. ಯಾವು ಚಿತ್ರವೂ ಈಕೆ ಕೈ ಹಿಡೀಲಿಲ್ಲ. ಒಂದು ಕಾಲದಲ್ಲಿ ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭವಾನೆ ಪಡೆಯುತ್ತಿದ್ದ ಬಾಲ ಪ್ರತಿಭೆ ದೊಡ್ಡ ಹೀರೋಯಿನ್ ಆಗಲೇ ಇಲ್ಲ. ಮುಣಿರತ್ನಂ ನಿರ್ದೇಶನದ ಅಂಜಲಿ ಚಿತ್ರದಲ್ಲಿ ವಿಕಲಚೇತನ ಪಾತ್ರಕ್ಕೆ ತಮ್ಮ ಎರಡನೇ ವಯಸ್ಸಿಗೆ ಅತ್ಯತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದ, ಮಲಯಾಳಂ ಚಿತ್ರಗಳಿಗೆ ಕೇರಳ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಶಾಮಿಲಿ ಹೇಳ ಹೆಸರಿಲ್ಲದಂತಾಗಿದ್ದಾರೆ. 

White-Black ಜೋಡಿ ಫುಲ್ ಟ್ರೋಲ್‌; ನೀವ್ ಕೇಳಿ ಇವ್ರ ಲವ್‌ ಸ್ಟೋರಿ!

ಬೇಬಿ ಶಾಮಿಲಿ ದೊಡ್ಡವಳಾಗುತ್ತಾ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಿದರು. ನಂತರ ಟಾಲಿವುಡ್‌ 'ಓಯ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ರೀ ಎಂಟ್ರಿಯೂ ಕೊಟ್ಟಿದ್ದರು. ಆದರೆ, ಜಯಲಕ್ಷ್ಮಿ ಇವರಿಗೆ ಒಲಿಯಲೇ ಇಲ್ಲ. ಸಿನಿಮಾಗಳ ಆಫರ್‌ಗಳು ಇವರ ಹತ್ತಿರ ಸುಳಿಯಲೂ ಇಲ್ಲ. ನಾಟಿ ಆ್ಯಂಡ್ ಬ್ಯೂಟಿ ಬೇಬಿ ಶಾಮಿಲಿಗೆ ಕರ ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಶಿವರಾಜ್‌ಕುಮಾರ್‌ ಜೊತೆ ಅಭಿನಯಿಸುವ ಅವಕಾಶವೂ ಒಲಿದು ಬಂದಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ತಿರಸ್ಕರಿಸಿದ್ದರು. ಈ ಕಾರಣಕ್ಕೋ, ಕನ್ನಡ ಚಿತ್ರರಂಗವೂ ಇವರ ಕೈ ಹಿಡೀಲಿಲ್ಲ. ಅಷ್ಟೇ ಅಲ್ಲದೆ ಶೂಟಿಂಗ್ ಸೆಟ್‌ಗೆ ತಡವಾಗಿ ಬರುತ್ತಾರೆ. ಪಾತ್ರಕ್ಕಿರುವ ಡಿಮ್ಯಾಂಡ್‌ ಅರ್ಥ ಮಾಡಿಕೊಳ್ಳುವುದಿಲ್ಲ. ಅವರೊಟ್ಟಿಗೆ ಸಿನಿಮಾ ಮಾಡುವುದು ಕಷ್ಟ ಎಂದು ಪರ ಭಾಷಾ ನಿರ್ದೇಶಕರ ಆರೋಪವೂ ಶಾಮಿಲಿಗೆ ಮುಳ್ಳಾಯಿತು. 

ಒಟ್ಟಿನಲ್ಲಿ ಬಾಲ್ಯದಲ್ಲಿಯೇ ಸಿಕ್ಕ ಫೇಮ್, ಶಾಮಿಲಿಗೆ ಸಿಂಪ್ಲಿಸಿಟಿ ಹಾಗೂ ಬದ್ಧತೆಯಿಂದ ದೂರು ಉಳಿಯುವಂತೆ ಮಾಡಿದವು ಎನಿಸುತ್ತೆ. ಸೌಂದರ್ಯ ಹಾಗೂ ಪ್ರತಿಭೆ ಇದ್ದರೂ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸುವಲ್ಲಿ ಶಾಮಿಲಿ ವಿಫಲವಾಗಿದ್ದಂತೂ ಸುಳ್ಳಲ್ಲ.

ರಾಮ್ ಚರಣ್ - ಉಪಾಸನಾ ಲವ್‌ ಸ್ಟೋರಿಯಲ್ಲೊಂದು ಟ್ವಿಸ್ಟ್‌! ಕ್ಯೂಟ್‌ ಕಪಲ್‌ ನೋಡಿ

ಬಾಲನಟಿಯಾಗಿ ಮೆರೆದ ಶಾಮಿಲಿ ನಿರೀಕ್ಷಿಸಿದಂತೆ ದೊಡ್ಡ ನಟಿಯಾಗಲೇ ಇಲ್ಲ. ಶಾಮಿಲಿಯಂತೆ ಈಕೆಯ ಸಹೋದರಿ ಶಾಲಿನಿಯೂ ಚಿಕ್ಕವಳಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಅವರು ನಟಿಸಿದ ಕೆಲವು ಮಲಯಾಳಂ ಚಿತ್ರಗಳು ಹಿಟ್ ಆದವು. ಆದರೆ, ಖ್ಯಾತ ನಟ ಅಜಿತ್ ಅವರನ್ನು ಕೈ ಹಿಡಿದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ಮಕ್ಕಳು, ಮನೆಗೆ ಸೀಮಿತರಾದರು.