ನಟಿ ಆರಾಧನಾ ರಾಮ್, ಕಾಟೇರ ಚಿತ್ರದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಹಾಡಿಗೆ ನೃತ್ಯ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತವಾದರೂ, ಹಾಡಿನ ಆಯ್ಕೆಗೆ ಕೆಲ ನೆಟ್ಟಿಗರು ಟೀಕಿಸಿದ್ದಾರೆ. ಕನ್ನಡ ಹಾಡಿಗೆ ನೃತ್ಯ ಮಾಡದಿದ್ದಕ್ಕೆ ಮತ್ತು ಕನ್ನಡ ಮರೆತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕಾಟೇರ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಬೆಡಗಿ ಆರಾಧನಾ ರಾಮ್ (Aradhana Ram). ಹೊಸ ನಟಿ ಅನ್ನೋದಕ್ಕಿಂತ ಕನ್ನಡದ ಜನಪ್ರಿಯ ನಟಿ ಮಾಲಾಶ್ರೀಯವರ (Malashree Ram) ಪುತ್ರಿ ಇವರು ಅಂತಾನೆ ಹೇಳಬಹುದು. ಕಾಟೇರ ಬಳಿಕ ಆರಾಧನಾ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಯಾವ ಸಿನಿಮಾದಲ್ಲಿ ನಟಿಸುವ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಆರಾಧನಾ ಹೆಚ್ಚಾಗಿ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೊ ಶೂಟ್ ಗಳಿಂದ ಸುದ್ದಿ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಟಿ ವ್ಯಾಲೆಂಟೈನ್ಸ್ ಡೇಯಂದು ಕೆಂಪು ಡ್ರೆಸ್ ಧರಿಸಿ, ಕೈಯಲ್ಲಿ ಕೆಂಪು ರೋಸ್ ಹಿಡಿದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ ಆರಾಧನಾ.
ಪ್ರೇಮಿಗಳ ದಿನ ರೆಡ್ ಡ್ರೆಸ್, ಕೆಂಪು ರೋಜಾ ಹಿಡಿದು ನಿಂತ ಕಾಟೇರ ಬೆಡಗಿ
ಆರಾಧನಾ ರಾಮ್ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿ, ಜೊತೆಗೆ ನೀಲಿ ಬಣ್ಣದ ದುಪಟ್ಟಾವೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದು, ಬಾಲಿವುಡ್ (danced for bollywood song) ನ ಜನಪ್ರಿಯ ಹಾಡು, ಕಂಗನಾ ಕಂಗನಾ ಕಂಗನಾ…. ಜುಮ್ಕಾ. ಜುಮ್ಕಾ ಜುಮ್ಕಾ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. A little Jhumka, a little Thumka ಎಂದು ಕ್ಯಾಪ್ಶನ್ ಕೊಟ್ಟು ವಿಡೀಯೋ ಪೋಸ್ಟ್ ಮಾಡಿದ್ದು, ಡ್ಯಾನ್ಸ್ ಸಖತ್ತಾಗಿ ಮಾಡಿದ್ದಾರೆ ಆರಾಧನಾ. ಇವರ ನೃತ್ಯ ನೋಡಿದ್ರೆ, ನಿಜವಾಗಿಯೂ ಇವರೊಬ್ಬ ಅದ್ಭುತ ನೃತ್ಯಗಾರ್ತಿ ಎನ್ನಬಹುದು. ನಟಿಯ ನೃತ್ಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವು ಕನ್ನದ ಅಭಿಮಾನಿಗಳಿಗೆ ಮಾತ್ರ ಆರಾಧನಾ ನೃತ್ಯ ಇಷ್ಟವಾದರೂ ಅವರು ಆಯ್ಕೆ ಮಾಡಿಕೊಂಡ ಹಾಡು ಇಷ್ಟವಾಗಿಲ್ಲ ಅನಿಸುತ್ತೆ. ಹಾಗಾಗಿ ಕಾಮೆಂಟ್ ಗಳ ಮೂಲಕ ಹಲವು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
ನೀನು ಕನ್ನಡ ಹೀರೋಯಿನ್ ಅಂತ ನಾವು ಹೇಳ ಬೇಕಾ? ಕನ್ನಡ ಸಾಂಗ್ಸ್ ಇಲ್ಲ ಬಿಡಿ ಡ್ಯಾನ್ಸ್ ಮಾಡೋದಕ್ಕೆ, ಕನ್ನಡ ಸರಿಯಾಗಿ ಕಲಿರಿ, ನೀವು ನಿಮ್ಮ ಅಮ್ಮನ ತರ ಆಗಲ್ಲ ಅದಂತು ನಿಜ 100%, ಕೇವಲ ಒಂದು ಸಿನಿಮಾಗೆ ಕನ್ನಡ ಮರೆತುಹೋದಂಗ್ ಇದೆ , ಕನ್ನಡದವರು ಯಾರೂ ಮೂಸಿಲ್ಲ ಅಂತ ಹಿಂದಿ ಕಡೆ ಹೋಗೋಕೆ ready ಆಗ್ತಾ ಇದಾಳೆ ಅನ್ಸುತ್ತೆ, ನಮ್ಮ ಹುಡುಗಿ ಮಗಳು ಆದ್ರು ಅವರ ಹಾಗೆ ಆಗೋದಿಲ್ಲ ಅಂತಾನೂ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ಗೆ ಟ್ರೈ ಮಾಡ್ತಿದ್ದೀರಾ? ಅದಕ್ಕೇನಾ ಹೀಗೆ? ಅಮ್ತಾನೂ ಹೇಳಿದ್ದಾರೆ.
20ನೇ ವರ್ಷಕ್ಕೆ ಕಾಲಿಟ್ಟ ಮಾಲಾಶ್ರೀ ಪುತ್ರ ಆರ್ಯನ್... ಅಕ್ಕ, ಅಮ್ಮನಿಂದ ಪ್ರೀತಿಯ ಶುಭಾಶಯ
ಇನ್ನು ಕೆಲವರು ಕಾಮೆಂಟ್ ಮಾಡಿ ಅಪ್ರತಿಮ ಸುಂದರಿ, ಅದ್ಭುತವಾಗಿ ಡ್ಯಾನ್ಸ್ ಮಾಡಿದ್ರಿ, ಮೇಡಂ ನೀವು ನಿಮ್ಮ ಅಮ್ಮ ಮಾಲಾಶ್ರೀ ಹಾಡಿಗೆ ಡ್ಯಾನ್ಸ್ ಮಾಡಿ ಅಂತನೂ ಕೇಳಿಕೊಂಡಿದ್ದಾರೆ. ಇನ್ನೂ ಒಂದಷ್ಟು ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತು ಬೇರೆ ಭಾಷೆ ಹಾಡೂ ಹಾಕಿದ್ರೆ, ಕನ್ನಡ ಮರೆತ್ತಿದ್ದಾರೆ ಅಂತ ಅರ್ಥಾನ? ಹಾಡಿಗೆ ಯಾವ ಭಾಷೆ ಕೂಡ ಇಲ್ಲ. ನಿಜವಾದ ಕನ್ನಡಿಗರು ಆಗಿದ್ರೆ, ಇನ್ಸ್ಟಾಗ್ರಾಂನಲ್ಲೂ ಕನ್ನಡವನ್ನೇ ಬಳಸಿ, ಬೇರೆ ಭಾಷೆಗೂ ಮರ್ಯಾದೆ ಕೊಡಿ ಎಂದು ಕೇಳಿಕೊಂಡಿದ್ದಾರೆ.
