ಸ್ಟೇಟ್ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ತಮ್ಮ ಕೆರಿಯರ್‌ ಉತ್ತುಂಗದಲ್ಲಿ ಬಹಳಷ್ಟು ಮಿಂಚಿದ್ದಾರೆ. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಜಡ್ಜ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಜತೆಗೆ, ತಮಗೆ ಒಪ್ಪುವ ಪಾತ್ರ ಸಿಕ್ಕಾಗ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. 

ದಶಕಗಳ ಹಿಂದೆ ನಾಯಕಿ ನಟಿಯಾಗಿ ಮಿಂಚಿದ್ದ ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ನಟನೆಯ 'ಹಗ್ಗ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇಂದು (ನವೆಂಬರ್ 9) ರಂದು ನಟಿ ಅನು ಪ್ರಭಾಕರ್ ಹುಟ್ಟುಹಬ್ಬದ ದಿನದಂದು ಹಗ್ಗ ಚಿತ್ರತಂಡ ತಮ್ಮ ಚಿತ್ರದ ನಾಯಕಿ ಅನು ಪ್ರಭಾಕರ್ ಅವರ ಫಸ್ಟ್‌ ಲುಕ್ ಬಿಡುಗಡೆ ಮಾಡಿ ಅವರಿಗೆ ಈ ಮೂಲಕ ಶುಭಾಶಯ ಕೋರಿದೆ. ಅನು ಪ್ರಭಾಕರ್ ಅಭಿಮಾನಿಗಳು ಹಗ್ಗ ಪೋಸ್ಟರ್ ನೋಡಿ ಪುಳಕಿತರಾಗಿರಬಹುದು. 

ನಟಿ ಅನು ಪ್ರಭಾಕರ್ ಅವರು ಟೈಟಾನಿಕ್, ಶಾಫ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದವರು. ರಮೇಶ್ ಅರವಿಂದ್ ಜತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದ ನಟಿ ಅನು ಪ್ರಭಾಕರ್ ಅವರು, ಶಿವ ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ ಜತೆ ಜಮೀನ್ದಾರ, ವರ್ಷ, ಸಾಹುಕಾರ, ಸೂರಪ್ಪ ಹಾಗೂ ಹೃದಯವಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಿನ ಹಲವು ನಾಯಕನಟರ ಜತೆ ತೆರೆ ಹಂಚಿಕೊಂಡು ಕರ್ನಾಟಕದ ಮನೆಮಾತಾಗಿರುವ ನಟಿ ಅನು ಪ್ರಭಾಕರ್.

ರಾಷ್ಟ್ರವಾದಿ, ದೂರದೃಷ್ಟಿಯುಳ್ಳ ಶಂಕರ್‌ನಾಗ್ ಹುಟ್ಟುಹಬ್ಬ: ಆಟೋರಾಜನ ಸ್ಮರಿಸಿದ ಫ್ಯಾನ್ಸ್!

ಸ್ಟೇಟ್ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ತಮ್ಮ ಕೆರಿಯರ್‌ ಉತ್ತುಂಗದಲ್ಲಿ ಬಹಳಷ್ಟು ಮಿಂಚಿದ್ದಾರೆ. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಜಡ್ಜ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಜತೆಗೆ, ತಮಗೆ ಒಪ್ಪುವ ಪಾತ್ರ ಸಿಕ್ಕಾಗ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಹಗ್ಗ ಚಿತ್ರದ ಬಿಡುಗಡೆ ಬಗ್ಗೆ ಸದ್ಯವೇ ಘೋಷಣೆ ಹೊರಬೀಳಲಿದ್ದು, ಮತ್ತೊಮ್ಮೆ ಸಿನಿಮಾಪ್ರಿಯರು ಅನು ಪ್ರಭಾಕರ್ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್‌ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?

ಅವಿನಾಶ್ ನಿರ್ದೇಶನದ ಹಗ್ಗ ಚಿತ್ರವು ಶೂಟಿಂಗ್ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಅನು ಪ್ರಭಾಕರ್ ಸಿನಿಮಾ ಪಯಣದಲ್ಲಿ ವಿಭಿನ್ನ ಸಿನಿಮಾ ಎನಿಸಿಕೊಳ್ಳಲಿದೆ. ಇಂದು ಅನು ಪ್ರಭಾಕರ್ ಜನುಮದಿನದ ಪ್ರಯುಕ್ತ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹಗ್ಗ ಸಿನಿಮಾದ ಪ್ರಮೋಶನ್ ಶುರುವಾಗಿದೆ ಎನ್ನಬಹುದು. 

View post on Instagram