ಮಮ್ಮಿ ಆದ ನಂತರ ಮೊದಲ ರೀಲ್ಸ್ ಮಾಡಿದ ನಟಿ ಅಮೂಲ್ಯ. ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಲು ಡಿಮ್ಯಾಂಡ್ ಮಾಡಿದ ನೆಟ್ಟಿಗರು...
ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಪತಿ ಜಗದೀಶ್ ಪೇರೆಂಟಿಂಗ್ ಫೇಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡ ಗೋಲ್ಡನ್ ಕಪಲ್ ಮಕ್ಕಳ ಫೋಟೋ ರಿವೀಲ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಚಿತ್ರರಂಗದಿಂದ ದೂರ ಉಳಿದುಕೊಂಡಿರುವ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಅಲ್ಲದೆ ಅಮೂಲ್ಯ ಇತ್ತೀಚಿಗೆ ಹಂಚಿಕೊಂಡ ಫೋಟೋ ಮತ್ತು ರೀಲ್ಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಶರಣ್ ಮತ್ತು ನಿಶ್ವಿಕಾ ನಾಯ್ಡು ಅಭಿನಯಿಸಿರುವ ಗುರು ಶಿಷ್ಯರು ಚಿತ್ರದ ಆಣೆ ಮಾಡಿ ಹೇಳುತ್ತೀನಿ ಹಾಡಿಗೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. 'ನನ್ನ ಫೇವರೆಟ್ ಹಾಡಿದು ಅಲ್ಲದೆ ಇದು ನನ್ನ ಮೊದಲ ರೀಲ್ಸ್. ಆಣೆ ಮಾಡಿ ಹೇಳುತ್ತೀನಿ ಹಾಡಿದು. ನಮ್ಮ ನಿರ್ಮಾಪಕರಾದ ತರುಣ್ ಸುಧೀರ್ ಮತ್ತು ಇಡೀ ಗುರು ಶಿಷ್ಯರು ತಂಡಕ್ಕೆ ನನ್ನ ಶುಭಾಶಯಗಳು' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ. 'ಎಷ್ಟು ಲವ್ಲಿ ಸರ್ಪ್ರೈಸ್ ಕೊಟ್ಟಿದ್ದೀರಾ ನೀವು. ನೀವು ನೇಲ್ಡ್ ಇಟ್. ನಿಮ್ಮನ್ನು ನೋಡಿ ಖುಷಿ ಆಯ್ತು. ಗೊಂಬೆ ತರ ಕಾಣಿಸುತ್ತಿದ್ದೀರಾ ಥ್ಯಾಂಕ್ಯೂ'ಎಂದು ನಟಿ ನಿಶ್ವಿಕಾ ನಾಯ್ಡು ಕಾಮೆಂಟ್ ಮಾಡಿದ್ದಾರೆ.

ಮಕ್ಕಳ ಆಗಮನದ ನಂತರ ಅಮೂಲ್ಯ ಹೇಗಾಗಿದ್ದಾರೆ, ಏನ್ ಮಾಡ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದರು. ಆಗ ಗ್ರೀನ್ ಬಾಡಿಫಿಟ್ ಮ್ಯಾಕ್ಸಿ ಧರಿಸಿ ಮದರ್‌ವುಡ್ ಬಗ್ಗೆ ಮಾತನಾಡಿದ್ದರು. ಇದಾದ ನಂತರ ವೈಟ್ ಟೀ-ಶರ್ಟ್ ಧರಿಸಿರುವ ಫೋಟೋ ಅಪ್ಲೋಡ್ ಮಾಡಿ ಎಲ್ಲರಿಗೂ ಬಿಗ್ ಶಾಕ್ ಕೊಟ್ಟಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ಅಮೂಲ್ಯ ಎಷ್ಟು ಸಣ್ಣಗಿದ್ದರು ಅಷ್ಟೇ ಸಣ್ಣ ಈಗ ಆಗಿದ್ದಾರೆ. ಕೇಲವ 5 ತಿಂಗಳಿನಲ್ಲಿ ಇಷ್ಟು ತೂಕ ಕಡಿಮೆ ಮಾಡಿಕೊಂಡಿರುವುದಕ್ಕೆ ಕಾಮೆಂಟ್ಸ್‌ನಲ್ಲಿ ಪ್ರಶ್ನೆಗಳು ಹೆಚ್ಚಾಗುತ್ತಿದೆ.
ಅವಳಿ ಮಕ್ಕಳ ಜೊತೆ ಅಮೂಲ್ಯ ಕ್ಯೂಟ್ ಪೋಸ್; ಫೋಟೋ ವೈರಲ್!
ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿ, ನೀವು ಇಷ್ಟು ಸಣ್ಣ ಆಗಲು ಕಾರಣ ಏನು? ನೀವು ಯೂಟ್ಯೂಬ್ ಶುರು ಮಾಡಿ, ನಿಮ್ಮ ಬಾಣಂತನ ಹೇಗೆ ನಡೆಯುತ್ತಿದೆ ಎಂದೆಲ್ಲಾ ಪ್ರಶ್ನೆ ಕೇಳಿದ್ದಾರೆ. ಮದರ್‌ವುಡ್ ಎಂಜಾಯ್ ಮಾಡುತ್ತಿರುವ ಅಮೂಲ್ಯ ಇಬ್ಬರು ಮಕ್ಕಳನ್ನು ನೋಡಿಕೊಂಡು ನಿದ್ರೆ ಇಲ್ಲದೆ ಇಷ್ಟು ಸಣ್ಣ ಆಗಿರಬಹುದು ಎಂದು ಕೆಲವರು ಅಮೂಲ್ಯ ಪರ ಉತ್ತರಿಸಿದ್ದಾರೆ.
ತಾಯ್ತನದ ಸಂಭ್ರಮಕ್ಕೆ 2 ತಿಂಗಳು; ಅವಳಿ ಮಕ್ಕಳೆಂದು ಗೊತ್ತಾದಾಗ ನಟಿ ಅಮೂಲ್ಯ ರಿಯಾಕ್ಷನ್ ಇದು!
ಅಣ್ಣಮ್ಮ ದೇಗುಲಕ್ಕೆ ಭೇಟಿ:
ರಾಜಕೀಯಲ್ಲಿ ಬ್ಯುಸಿಯಾಗಿರುವ ಜಗದೀಶ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದು, ದೇಗುಲಕ್ಕೆ ಭೇಟಿ ಕೊಟ್ಟ ವಿಚಾರವನ್ನು ಹಂಚಿಕೊಂಡಿದ್ದಾರೆ. 'ಇಂದು ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪಿಸುತ್ತಿರುವ ಶುಭ ಸಂದರ್ಭದಲ್ಲಿ, ಗಾಂಧಿನಗರದ ಮೆಜೆಸ್ಟಿಕ್‌ನಲ್ಲಿರುವ ನಗರ ದೇವತೆ, ಬೆಂಗಳೂರು ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವಿಯ ಅಶೀರ್ವಾದ ಪಡೆಯಲಾಯಿತ್ತು' ಎಂದು ಜಗದೀಶ್ ಬರೆದುಕೊಂಡಿದ್ದಾರೆ. ಒಂದು ಫೋಟೋದಲ್ಲಿ ಮಾತ್ರ ಜಗದೀಶ್ ಮಗುವನ್ನು ಎತ್ತುಕೊಂಡಿರುವುದು ಕಾಣಿಸುತ್ತದೆ ಆದರೆ ಗೋಲ್ಡನ್ ದಂಪತಿಗಳು ಸ್ಪೆಷಲ್ ದಿನದಂದು ಫೋಟೋ ರಿವೀಲ್ ಮಾಡಲಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಅಮೂಲ್ಯ ಅಣ್ಣಮ್ಮ ದೇವಿಗೆ ನೀಲಿ ಮತ್ತು ಹಸಿರು ಬಣ್ಣದ ಸೀರೆ ಕೊಟ್ಟು ಮಡಿಲು ತುಂಬಿಸಿದ್ದಾರೆ.
