ಇಬ್ಬರಿಂದಲೂ ಡಿವೋರ್ಸ್ ಪಡೆದು ಒಂಟಿಯಾದ್ರು ಅಂಬಿಕಾ; ನಿಜ ಜೀವನ ಯಾಕೆ 'ಚಕ್ರವ್ಯೂಹ'ವಾಯ್ತು?
ಹಲವಾರು ನಟಿಯರಂತೆ ಈ ಅಂಬಿಕಾ ಕೂಡ ನಟಿಯಾಗಿ ವೃತ್ತಿ ಜೀವನದಲ್ಲಿ ಸಾಕಷ್ಟು ಮಿಂಚು ಹರಿಸಿದ್ದರೂ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಯಡವಟ್ಟು ಮಾಡಿಕೊಂಡು ಜೀವನದಲ್ಲಿ ನೋವು ಉಂಡಿದ್ದಾರೆ...
ಕನ್ನಡ ಚಿತ್ರರಂಗದ 80ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ (Sandalwood) ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸಿದ ಬ್ಯೂಟಿಗಳಲ್ಲಿ ಒಬ್ಬರು ನಟಿ ಅಂಬಿಕಾ. ಅಂಬರೀಷ್-ಅಂಬಿಕಾ (Ambika)ಜೋಡಿಯಂತೂ ಸಖತ್ ಫೇಮಸ್ ಎಂಬಂತಾಗಿತ್ತು. ಚಕ್ರವ್ಯೂಹ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮೈ ಛಳಿ ಬಿಟ್ಟು ನಟಿಸಿದ್ದ ಅಂಬಿಕಾ ಹಲವು ಯುವಕರ ನಿದ್ದೆ ಕದ್ದಿರುವ ನಟಿ ಎನ್ನಬಹುದು. ಡಾ ರಾಜ್‌ಕುಮಾರ್ ಸೇರಿದಂತೆ ಕನ್ನಡ, ತಮಿಳು ಹಾಗು ತೆಲುಗಿನಲ್ಲಿ ಹಲವು ಸ್ಟಾರ್ ನಟರೊಡನೆ ನಟಿಸಿದ್ದ ಅಂಬಿಕಾ ಬಳಿಕ ಬಣ್ಣದ ಲೋಕದಿಂದ ಮರೆಯಾದವರು.
ಹಲವಾರು ನಟಿಯರಂತೆ ಈ ಅಂಬಿಕಾ ಕೂಡ ನಟಿಯಾಗಿ ವೃತ್ತಿ ಜೀವನದಲ್ಲಿ ಸಾಕಷ್ಟು ಮಿಂಚು ಹರಿಸಿದ್ದರೂ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಯಡವಟ್ಟು ಮಾಡಿಕೊಂಡು ಜೀವನದಲ್ಲಿ ನೋವು ಉಂಡಿದ್ದಾರೆ. ತಮ್ಮ 25ನೆಯ ವಯಸ್ಸಿನಲ್ಲಿ, 1988ರಲ್ಲಿ ಪ್ರೇಮ್‌ಕುಮಾರ್ ಮೆನನ್ (Premkumar Menon) ಜತೆ ಮದುವೆಯಾಗಿದ್ದ ನಟಿ ಅಂಬಿಕಾ, ಅವರೊಂದಿಗೆ ಅಮೆರಿಕಾಕ್ಕೆ ಹಾರಿ, ವಿದೇಶಿ ಜೀವನದ ಹೊಸ ಅನುಭವವನ್ನು ಕೂಡ ಹೊಂದಿದವರು. ಆದರೆ, ವೈಭವದ ಜೀವನ ಸಾಕಾಯ್ತೋ ಅಥವಾ ಸುಸ್ತಾಯ್ತೋ ಏನೋ ಎಂಬಂತೆ ಗಂಡನೊಂದಿಗೆ 1996ರಲ್ಲಿ ಡಿವೋರ್ಸ್ ಆಗಿ ಒಂಟಿ ಜೀವನಕ್ಕೆ ಮರಳಿದರು. ಅದಾಗಲೇ ಹುಟ್ಟಿದ್ದ ಇಬ್ಬರು ಮಕ್ಕಳು ಅಪ್ಪನಿಲ್ಲದ ಅನಾಥ ಕಂದಮ್ಮಗಳಾಗಬೇಕಾಯ್ತು.
ಸೇಲ್ಸ್‌ಮ್ಯಾನ್, ಕ್ಯಾಷಿಯರ್ ಆಗಿದ್ರು ವಿಜಯ್ ಸೇತುಪತಿ; ಕೋಟ್ಯಾಧಿಪತಿಯ ಹಿಂದಿನ ಕಥೆ ರೋಚಕ!
ಬಳಿಕ ನಟಿ ಅಂಬಿಕಾ ಅವರು ನಟ ರವಿಕಾಂತ್ (Ravikanth)ಅವರೊಂದಿಗೆ ಹೊಸ ಪ್ರೇಮ ಪುರಾಣ ಶುರುವಿಟ್ಟುಕೊಂಡರು. 2000ನೇ ಇಸ್ವಿಯಲ್ಲಿ ರವಿಕಾಂತ್ ಅವರನ್ನು ಮದುವೆಯಾಗಿದ್ದ ಅಂಬಿಕಾ ಅವರು ಕೇವಲ ಎರಡೇ ವರ್ಷಗಳಲ್ಲಿ ಅವರಿಂದಲೂ ದೂರವಾದರು. ಗಂಡನಿಲ್ಲದೇ ಕೇವಲ ಮಕ್ಕಳೊಂದಿಗೆ ಈಗಲೂ ನಟಿ ಅಂಬಿಕಾ ಅವರು ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. ವೃತ್ತಿಜೀವನದಲ್ಲಿ ಸ್ಟಾರ್ ನಟಿಯಾಗಿ ಮೆರೆದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದ್ದಾರೆ ನಟಿ ಅಂಬಿಕಾ.
ಭಾರತಿಯನ್ನು ಹೆಸರು ಹೇಳಿ ಕರೆಯುತ್ತಿರಲಿಲ್ಲ ವಿಷ್ಣುವರ್ಧನ್; ಮಾಹಿ ಅಂತ ಯಾಕೆ ಕರೀತಿದ್ರು?
ಚಕ್ರವ್ಯೂಹ ಸೇರಿದಂತೆ ಕನ್ನಡದಲ್ಲಿ ಚಲಿಸುವ ಮೋಡಗಳು, ಅವಳ ನೆರಳು, ಗರುಡ ರೇಖೆ, ಗಾಯತ್ರಿ ಮದುವೆ, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಹಸಿದ ಹೆಬ್ಬುಲಿ, ನಾನೇ ರಾಜ, ಮೂರು ಜನ್ಮ, ಪ್ರಳಯಾಂತಕ, ಅಪೂರ್ವ ಸಂಗಮ, ಇಂದಿನ ಭಾರತ, ಚದುರಂಗ, ಅಸಂಭವ, ದಿಗ್ವಿಜಯ, ಶುಭಮಿಲನ, ಬೇಟೆ, ಸತ್ಕಾರ, ಬಝಾರ್ ಭೀಮ, ಜೀವನ ಜ್ಯೋತಿ, ಅತಿರಥ ಮಹಾರಥ, ಪೂರ್ಣಚಂದ್ರ, ನ್ಯಾಯಕ್ಕೆ ಶಿಕ್ಷೆ, ಆಪದ್ಭಾಂಧವ, ಧರ್ಮಾತ್ಮ, ಕಿರಾತಕ, ವಿಜಯ ಖಡ್ಗ, ಸಿಂಹದ ಮರಿ, ಜನುಮದಾತ, ಕನಸುಗಾರ, ನಾಗರಹಾವು, ನಂದಿ, ಮನಸೆಲ್ಲಾ ನೀನೇ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಂಬಿಕಾ.
ಫೋಟೋ ಜೊತೆ ನಿಂತ ಪ್ರಕಾಶ್ ರಾಜ್; ನಿರ್ದಿಗಂತ ಮೂಲಕ ಎಂಥ ಕಥೆಯನ್ನು ಪ್ರೆಸೆಂಟ್ ಮಾಡ್ತಿದ್ದಾರೆ ನೋಡ್ರಿ!