ಆರು ತಿಂಗಳ ಕಂದನ ಮುದ್ದು ಫೋಟೋ ಶೇರ್ ಮಾಡಿದ ನಟಿ ಅದಿತಿ ಪ್ರಭುದೇವ: ನಗುವಿಗೆ ಫ್ಯಾನ್ಸ್ ಫಿದಾ
ಆರು ತಿಂಗಳ ಕಂದನ ಮುದ್ದು ಫೋಟೋ ಶೇರ್ ಮಾಡಿದ ನಟಿ ಅದಿತಿ ಪ್ರಭುದೇವ: ನಗುವಿಗೆ ಫ್ಯಾನ್ಸ್ ಫಿದಾ
‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ ಈಗ ಆರು ತಿಂಗಳ ಪುಟಾಣಿ ಮಗಳ ಅಮ್ಮ ಆಗಿದ್ದಾರೆ. ಕಳೆದ ಏಪ್ರಿಲ್ 4ರಂದು ಇವರಿಗೆ ಮಗಳು ಹುಟ್ಟಿದ್ದು ಅದರ ನೇಸರ ಎಂದು ಹೆಸರು ಇಟ್ಟಿದ್ದಾರೆ. ಅದಿತಿ ಅವರು, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದಾರೆ, ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್ ಆಗಿದ್ದಾರೆ.
ಇದೀಗ ನಟಿ ತಮ್ಮ ಪುತ್ರಿಯ ಫೋಟೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಾಗಲೇ ಹಿಂದೊಮ್ಮೆ ನಟಿ ಮಗಳ ಫೋಟೋ ರಿವೀಲ್ ಮಾಡಿದ್ದರು. ಆದರೆ ಬಹಳ ದಿನಗಳ ಬಳಿಕ ಈಗ ಮತ್ತೊಮ್ಮೆ ಪುತ್ರಿಯ ಕ್ಯೂಟ್ ಫೋಟೋ ಶೇರ್ ಮಾಡಿದ್ದು, ಮಗಳ ಕ್ಯೂಟ್ನೆಸ್ಗೆ ನೆಟ್ಟಿಗರಿಂದ ಲವ್ ಇಮೋಜಿಗಳ ಸುರಿಮಳೆಯಾಗುತ್ತಿದೆ. ಈಚೆಗಷ್ಟೆ ಮಗಳ ಆರನೇ ತಿಂಗಳಿನ ಹುಟ್ಟುಹಬ್ಬವನ್ನು ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಪಾಟ್ಲಾ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಅವರು, ನಮ್ಮಮ್ಮ ಎಂದು ಕ್ಯಾಪ್ಶನ್ ಹಾಕಿ ವಿಡಿಯೋ ಶೇರ್ ಮಾಡಿದ್ದಾರೆ ಅದಿತಿ. ಮಗುವನ್ನು ಎತ್ತಿ ಮುದ್ದಾಡುವ, ಎದೆಗಪ್ಪಿಕೊಳ್ಳುವ, ಮುದ್ದಾಗಿ ಆಡುವ ಎರಡೂ ಫ್ಯಾಮಿಲಿಯವರು ಜೊತೆಯಾಗಿ ನಿಂತು ಕೇಕ್ ಕತ್ತರಿಸಿ ಸಂಭ್ರಮಿಸುವ ವಿಡಿಯೋ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದರು.
ಬಿಗ್ಬಾಸ್ ಮನೆಯೊಳಕ್ಕೆ ಗೌತಮಿ ಎಂಟ್ರಿಗೆ ಸತ್ಯ ಸೀರಿಯಲ್ ತಾರೆಯರು ಏನೆಂದ್ರು? ಖುದ್ದು ನಟಿಯೇ ಹೇಳಿದ್ರು ಕೇಳಿ...
ಇದಾಗಲೇ ರಿಯಾಲಿಟಿ ಷೋನಲ್ಲಿ ಅವರು ಪಾಲ್ಗೊಂಡಿದ್ದಾಗ, ಚಿಕ್ಕಮಗುವನ್ನು ಬಿಟ್ಟು ಬಂದು ಕೆಲಸ ಮಾಡುವ ಅವಶ್ಯಕತೆ ಏನಿತ್ತು ಎನ್ನುವುದು ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಉತ್ತರಿಸಿದ್ದ ನಟಿ, ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಯಾಕೋ ಸಮಾಧಾನ ಆಗುತ್ತಿಲ್ಲ. ಅಮ್ಮನ ಕೆಲಸ ಎಂದರೆ ಎರಡು ಗಂಟೆಗೊಮ್ಮೆ ಎದೆಹಾಲು ಕುಡಿಸುವುದು ಮಾತ್ರವಲ್ಲ. ಅಮ್ಮನಾಗಿ ಜವಾಬ್ದಾರಿ ಹೆಚ್ಚಿದೆ. ಮಗುವಿನ ಜೊತೆ ಅಮ್ಮ ಆದವಳು ಇರಬೇಕೇ ವಿನಾ, ಅಜ್ಜಿಯಾದವಳು ಅಲ್ಲ ಎಂದೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅದಿತಿ ಅವರು, ರ್ಯಾಪಿಡ್ ರಶ್ಮಿ ನಡೆಸಿಕೊಡುವ ಷೋನಲ್ಲಿ ಕಾಣಿಸಿಕೊಂಡಿದ್ದು, ಬದುಕಿನ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಉದ್ಯಮಿ ಯಶಸ್ ಜೊತೆಗಿನ ಮದುವೆಯ ರೋಚಕ ಘಟನೆಯನ್ನು ಅವರು ಹಂಚಿಕೊಂಡಿದ್ದರು. ಕೈಯಲ್ಲಿ ನಾಲ್ಕೈದು ಚಿತ್ರಗಳು ಇದ್ದ ಟೈಮ್ ಅದು. ಮದುವೆ-ಗಿದುವೆ ಅಂತೆಲ್ಲಾ ಯೋಚನೇನೆ ಮಾಡಿರಲಿಲ್ಲ. ಆದರೆ ಯಶಸ್ ಮನೆಯವರ ಕಡೆಯಿಂದ ಹುಡುಗಿ ನೋಡಬೇಕು ಎಂದು ಬಂದರು. ನಮ್ಮ ಮನೆಯಲ್ಲಿಯೂ ಓಕೆ ನೋಡು ಎಂದರು. ನಾನು ಕೂಡ ಓಕೆ ಎಂದೆ. ಅಲ್ಲಿಯವರೆಗೂ ನನ್ನ ಹುಡುಗನ ಕಲ್ಪನೆ ಬೇರೆಯದ್ದೇ ರೀತಿ ಇತ್ತು. ಉದ್ಯಮಿ ಎಲ್ಲಾ ನನಗೆ ಇಷ್ಟ ಇರಲಿಲ್ಲ. 9-6 ಜಾಬ್ ಆಗಿರಬೇಕು ಎಂದು ಏನೇನೋ ಕಲ್ಪನೆ ಇತ್ತು. ಯಶಸ್ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ ಓಕೆ ಎಂದು ಒಪ್ಪಿಕೊಂಡೆ ಎಂದು ಹೆಣ್ಣು ನೋಡುವ ಶಾಸ್ತ್ರದ ಕುರಿತು ಮಾತನಾಡಿದ್ದರು.
ಹಣೆಗೆ ತಿಲಕವಿಡುವಾಗ ಈ ತಪ್ಪು ಮಾಡಬೇಡಿ ಎಚ್ಚರ! ಯಾವ ಬೆರಳು ಏನನ್ನು ಸೂಚಿಸುತ್ತದೆ ಗೊತ್ತಾ?