ಬಿಗ್​ಬಾಸ್​ಗೆ ಸತ್ಯ ಸೀರಿಯಲ್​ ಗೌತಮಿ ಜಾಧವ್​ ಎಂಟ್ರಿ ಕೊಟ್ಟಿದ್ದು, ಆಡುತ್ತಿದ್ದಾರೆ. ಇದರ ನಡುವೆಯೇ, ಸತ್ಯ ಸೀರಿಯಲ್​ ತಾರೆಯರು ಏನು ಹೇಳಿದ್ರು ನೋಡಿ... 

ಸೀರಿಯಲ್​ ಅಂದ್ರೆ ಹಾಗೇ ಅಲ್ವಾ? ನಟ-ನಟಿಯರಿಗೆ ಅದೊಂದು ರೀತಿಯಲ್ಲಿ ಮನೆಯೇ ಆಗಿಬಿಡುತ್ತದೆ. ಐದಾರು ವರ್ಷಗಳು ಒಂದು ಸೀರಿಯಲ್​ ಮಾಡುತ್ತಾ ಅಲ್ಲಿರುವ ಸದಸ್ಯರೇ ಅವರ ಸ್ನೇಹಿತರು, ಕುಟುಂಬಸ್ಥರು ಆಗಿಬಿಡುತ್ತಾರೆ. ರಿಯಲ್​ ಲೈಫ್​ಗಿಂತಲೂ ಈ ರೀಲ್​ ಲೈಫ್​ ಮಂದಿನೇ ಹೆಚ್ಚು ಆಪ್ತರಾಗಿ ಬಿಡುತ್ತಾರೆ. ಇದೀಗ ಸತ್ಯ ಸೀರಿಯಲ್​ ತಂಡ ಗೌತಮಿ ಜಾಧವ್​ ಅವರ ಬಗ್ಗೆ ಏನು ಹೇಳಿದೆ ನೋಡಿ. ಈ ವಿಡಿಯೋ ಅನ್ನು ಖುದ್ದು ಗೌತಮಿ ಅವರೇ ತಮ್ಮ ಯುಟ್ಯೂಬ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬಿಗ್​ಬಾಸ್​ಗೆ ಹೋಗುವ ಸ್ಪರ್ಧಿಗಳು ತಮ್ಮ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ಮಾಡಲು ಯಾರಿಗಾದರೂ ಹೇಳಿರುತ್ತಾರೆ. ಇದರಿಂದಾಗಿ ತಮಗೆ ವೋಟ್​ ಮಾಡುವಂತೆ ಹಾಗೂ ಇತ್ಯಾದಿ ವಿಷಯಗಳನ್ನು ಅವರ ಸೋಷಿಯಲ್​ ಮೀಡಿಯಾದಲ್ಲಿ ಅವರ ಮನೆಯವರು, ಸ್ನೇಹಿತರು ಪೋಸ್ಟ್​ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಸತ್ಯ ಸೀರಿಯಲ್​ ಗೌತಮಿ ಅವರ ಯೂಟ್ಯೂಬ್​ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.

ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಹಿಂದಿನ ದಿನ ಈ ಶೂಟಿಂಗ್​ ಮಾಡಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಅಂದಹಾಗೆ, ಕೆಲ ದಿನಗಳ ಹಿಂದಷ್ಟೇ ಸತ್ಯಾ ಸೀರಿಯಲ್​ ಸತ್ಯ ಎಂದಾಕ್ಷಣ ಎಲ್ಲರ ಗಮನ ಧಾರಾವಾಹಿಯ ರಗಡ್​ ಪಾತ್ರಧಾರಿಯ ನೆನಪಾಗುತ್ತಿತ್ತು. ಗಂಡುಬೀರಿಯಿಂದ ಶುರುವಾದ ಸತ್ಯಳ ಪಯಣ, ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುವ ಸೊಸೆಯಾಗಿ ನಂತರ ಎಲ್ಲರಿಂದಲೂ ಇದ್ದರೆ ಇಂಥ ಸೊಸೆ ಇರಬೇಕು ಎಂದು ಹೊಗಳಿಸಿಕೊಳ್ಳುವ ಹೆಣ್ಣಾದವಳದ್ದೇ ನೆನಪಾಗುತ್ತಿತ್ತು. ಆದರೆ ಇಂದು ಸತ್ಯಾ ಹೆಸರು ಬಿಗ್​ಬಾಸ್​ನಲ್ಲಿ ಕೇಳಿಬರುತ್ತಿದೆ. ಆದರೆ ಇಲ್ಲಿ ಸತ್ಯಾ ತಮ್ಮ ನಿಜ ರೂಪದ ಗೌತಮಿ ಜಾಧವ್​ ಆಗಿ ರೂಪು ಪಡೆದು ಆಟವಾಡುತ್ತಿದ್ದಾರೆ. ರಗಡ್​ ಗಂಡುಬೀರಿಯ ಲುಕ್ಕಿನಿಂದ ಸುರಸುಂದರಿ ಉದ್ದ ಕೂದಲ ಬೆಡಗಿ ಎಂದು ಹಲವರ ಕ್ರಷ್​ ಕೂಡ ಆಗಿದ್ದಾರೆ.

ಬಿಗ್​ಬಾಸ್​ ಗೌತಮಿ ಜಾಧವ್​ ಮದ್ವೆಯಾಗಿ ಐದು ವರ್ಷ: ಸಿನೆಮಾ ಸೆಟ್​ನಲ್ಲಿ ಶುರುವಾದ ಲವ್​ ಸ್ಟೋರಿ ಕೇಳಿ...

ಈ ವಿಡಿಯೋದಲ್ಲಿ ಸತ್ಯಳ ಅತ್ತೆಯಾಗಿದ್ದ ಸೀತಾ, ಚಿಕ್ಕತ್ತೆ ಸೇರಿದಂತೆ ಇತರ ನಟಿಯರನ್ನು ನೋಡಬಹುದು. ಅದರಲ್ಲಿಯೂ ಸೀತಾ ಪಾತ್ರಧಾರಿಯಾಗಿದ್ದ ಮಾಲತಿ ಸರ್​ದೇಶ್​ಪಾಂಡೆಯವರು ತಮ್ಮ ಸೀರಿಯಲ್​ ಸೊಸೆಯನ್ನು ಹಾಡಿ ಕೊಂಡಾಡಿದ್ದಾರೆ. ನೀನು ಎಲ್ಲಿ ಹೋದರೂ ಸಕ್ಸಸ್​ ಕಾಣುತ್ತೀ ಎನ್ನುವುದು ತಿಳಿದಿದೆ. ಅದೇ ರೀತಿಯ ಸಕ್ಸಸ್​ ಪಡೆದುಕೊಂಡು ವಿಜಯಶಾಲಿಯಾಗಿ ಬಾ ಎಂದು ಹೇಳಿದ್ದಾರೆ. ಸತ್ಯಳ ನಾದಿನಿಯಾಗಿದ್ದ ರಕ್ಷಿತಾ ಭಾಸ್ಕರ್​ ಹಾಗೂ ಚಿಕ್ಕತ್ತೆಯಾಗಿದ್ದ ಊರ್ಮಿಳಾ ಪಾತ್ರಧಾರಿ ಶಾಲಿನಿ ಎಸ್​.ರಾವ್​ ಕೂಡ ಮಾತನಾಡಿದ್ದು, ಗೌತಮಿ ಅವರಿಗೆ ಶುಭ ಕೋರಿದ್ದಾರೆ. ಬಿಗ್​ಬಾಸ್​ಗೆ ಹೋಗುವ ವಿಷಯ ತಿಳಿಯದ ಕಾರಣ, ಯಾವುದೋ ಫಿಲ್ಮ್​ ಆಫರ್​ ಬಂದಿದೆ ಎಂದು ಅಂದುಕೊಂಡ್ವಿ ಎಂದು ರಕ್ಷಿತಾ ಹೇಳಿದರು. 

ಅಂದಹಾಗೆ ಬಿಗ್​ಬಾಸ್​ನಲ್ಲಿ ಗೌತಮಿ ಅವರ ಪರವಾಗಿ ವೀಕ್ಷಕರು ನಿಂತಿದ್ದು, ಅವರ ಗುಣಕ್ಕೆ ಮನಸೋತಿದ್ದಾರೆ. ಇನ್ನು ಸತ್ಯ ಉರ್ಫ್​ ಗೌತಮಿ ಅವರ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಇವರ ಪತಿ ಅಭಿಷೇಕ್​ ಕಾಸರಗೋಡು ಕ್ಯಾಮರಾಮನ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ನಟಿಯಾಗಿದ್ದೆ, ಅವರು ಕ್ಯಾಮೆರಾಮನ್​ ಆಗಿದ್ರು... ಅಲ್ಲಿಂದಲೇ ಶುರುವಾಯ್ತು ನಮ್ಮ ಲವ್​ ಪಯಣ ಎಂದು ಗೌತಮಿ ಜೋರಾಗಿ ನಗುತ್ತಾರೆ. ಅಂದಹಾಗೆ, ಇವರ ಲವ್​ ಶುರುವಾಗಿದ್ದು ಕಿನಾರೆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ. ಗೌತಮಿ ಅವರಿಗೆ ಕಿರುತೆರೆಯಂತೆಯೇ ಸಿನಿಮಾ ಕೂಡ ಹೊಸತಲ್ಲ. 2021 ರ ಫೇಮಸ್ ಸೀರಿಯಲ್ 'ನಾಗರ ಪಂಚಮಿ'ಯಲ್ಲಿ ಈಕೆ ನಟಿಸಿದ್ರು. ಆ ಬಳಿಕ ಸಿನಿಮಾ ಫೀಲ್ಡ್ ಗೆ ಹೋದ ಗೌತಮಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಸತ್ಯಾ ಮೂಲಕ ಸಕತ್​ ಮಿಂಚಿದರು.

ಕುಡಿಯೋದರಿಂದ ಹಿಡಿದು ಕ್ಲೀನ್ ಮಾಡುವವರೆಗೆ... ಎಲ್ಲವೂ ನಕಲಿ? ಬಿಗ್​ಬಾಸ್​ ಮನೆಯ ಅಸಲಿಯತ್ತಿನ ವಿಡಿಯೋ ವೈರಲ್​

YouTube video player