ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ಈಗಾಗಲೇ ಹಲವರು ಭೇಟಿ ನೀಡಿದ್ದರು.‌ ಇದೀಗ ದರ್ಶನ್‌ ಭೇಟಿಯಾಗಿ ಹಿರಿಯ ನಟ ವಿನೋದ್‌ ರಾಜ್ ವಾಪಾಸ್ ಆಗಿದ್ದಾರೆ. 

ಬೆಂಗಳೂರು (ಜು.22): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್‌ರನ್ನು ಈಗಾಗಲೇ ಹಲವರು ಭೇಟಿ ನೀಡಿದ್ದರು.‌ ಇದೀಗ ದರ್ಶನ್‌ ಭೇಟಿಯಾಗಿ ಹಿರಿಯ ನಟ ವಿನೋದ್‌ ರಾಜ್ ವಾಪಾಸ್ ಆಗಿದ್ದಾರೆ. ಬಳಿಕ ಮಾಧ್ಯಮಕ್ಕೆ ದರ್ಶನ್ ಪ್ರಕರಣದ ಬಗ್ಗೆ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ. 

ಎರಡು ಒಳ್ಳೆ ಮಾತು ಹೇಳಬೇಕು ಅನಿಸಿತು. ನಮ್ಮ ತಾಯಿ ಜೊತೆ ದರ್ಶನ್ ತಂದೆ ಸಾಕಷ್ಟು ಸಿನಿಮಾದಲ್ಲಿ‌ ನಟಿಸಿದ್ದಾರೆ. ನಮ್ಮ ತಾಯಿ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು ನಮ್ಮ ಕಲಾವಿದನ ಮಗ ದರ್ಶನ್ ನ ಬಿಟ್ಟು ಕೊಡಬೇಡ ಕಂದ ಎಂದು ತಾಯಿ ಹೇಳಿದ್ರು ಕಷ್ಟ ಸುಖ ಎಲ್ಲ ಸೇರಿ ಬಂದಿರುತ್ತದೆ ಕೆಲವು ಸಮಯ ಕೆಟ್ಟ ಗಳಿಗೆ ನಮಗೆ ಆಶ್ಚರ್ಯ ಆಗಿದೆ. ಒಂದು ಕಡೆ ಪ್ರಾಣ ಕಳೆದುಕೊಂಡ ಕುಟುಂಬದ ನೋವು, ಇನ್ನೊಂದು ಕಡೆ ಅಭಿಮಾನಿಗಳ ಜೊತೆ ನಿರ್ಮಾಪಕರ ಜೊತೆ ಸಂತೋಷವಾಗಿದ್ದರು. 

5ನೇ ಬಾರಿ ದರ್ಶನ್ ಕಾಣಲು ಜೈಲಿಗೆ ಬಂದ ಮಡದಿ ವಿಜಯಲಕ್ಷ್ಮಿ, ದಿನಕರ್ ತೂಗುದೀಪ್ ಸಾಥ್!

ಹೇಗಿದ್ದವರು ಯಾವ ರೀತಿ ಬದಲಾವಣೆ ಆಗಿದೆ ಈ ರೀತಿ ಆಗ್ಬಾರ್ದಿತ್ತು. ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ ೫ ನೇ ತಾರೀಕು ಮೀಟ್ ಮಾಡಿದ್ವಿ. ತೋಟದ ಮನೆಗೆ ಹೋಗಿ ಕೆಲ ಮರಗಳನ್ನು ಊಣಿಸಿ‌ ಬರೋಣ ಅಂತ ಅನ್ಕೊಂಡಿದ್ವಿ. ಅಷ್ಟರಲ್ಲಿ ನಾನು ಅಡ್ಮಿಟ್ ಆಗಿಬಿಟ್ಟೆ. ನಾನು ಅಡ್ಮಿಟ್ ಆಗಿದ್ದರಿಂದ ಮೀಟ್ ಮಾಡೋಕೆ ಆಗಿರ್ಲಿಲ್ಲ. ಎರಡನೆ ಬಾರಿ ಜೈಲಿಗೆ ಹೋಗಿರೋದು ಈಗ ಮತ್ತೆ ಯಾಕಾಯಿತು ಇದು ನಮಗೆ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ ಎಂದು ವಿನೋದ್ ರಾಜ್ ಹೇಳಿದರು.