ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಎಂದೇ ಖ್ಯಾತಿ ಪಡೆದಿರುವ ನಟ ವಿನೋದ್ ರಾಜ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದೂ 'ಮುಖವಾಡ' ಚಿತ್ರದ ಮೂಲಕ. 

ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ವಿನೋದ್ ರಾಜ್ ರನ್ನು ಕಡೆಗಣಿಸುತ್ತಿದ್ದಾರಾ?

ಎಸ್ ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ  ಸಸ್ಪೆನ್ಸ್‌ ಥ್ರಿಲ್ಲರ್ ಫಿಲ್ಮ್ 'ಮುಖವಾಡ' ದಲ್ಲಿ ನಾಯಕನಟ ಪವನ್ ತೇಜ್‌ಗೆ  ಶಿಲ್ಪಾ ಮಂಜುನಾಥ್  ಜೋಡಿಯಾಗಿ ಮಿಂಚಲಿದ್ದಾರೆ. ಹಾಗೂ ಸಹದೇವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಚಿತ್ರದ ಮುಖ್ಯ ಪಾತ್ರದಲ್ಲಿ ವಿನೋದ್ ರಾಜ್ ಕಾಣಿಸಿಕೊಳ್ಳಬೇಕು ಎನ್ನುವುದು ಚಿತ್ರತಂಡ ಆಸೆಯಾಗಿದ್ದು ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು ಅವರ ನಿರ್ಧಾರಕ್ಕೆ ಕಾಯುತ್ತಿದ್ದಾರೆ. 

ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!

ಇನ್ನು ವಿನೋದ್ ರಾಜ್‌ ಅವರ ಪ್ರತಿಭೆ ಅಪಾರ.  2009 ರಲ್ಲಿ 'ಯಾರದು' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.  ಕಿರುತೆರೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಅವರನ್ನು ತೆರೆ ಮೇಲೆ ಕಂಡು 10 ವರ್ಷಗಳೇ ಆಗಿ ಹೋಗಿದೆ.  ಅಭಿಮಾನಿಗಳ ಆಸೆಯಂತೆ ವಿನೋದ್ ಮತ್ತೆ ಬಣ್ಣದ ಲೋಕಕ್ಕೆ ಬರಲಿ ಎಂಬುದು ನಮ್ಮ ಆಶಯವೂ  ಹೌದು.