ಚಿನ್ನಾರಿ ಮುತ್ತನ ಹೊಸ ಪ್ರಯೋಗ; ಸೋಲೋ Actor ಆಗಿ ಬರ್ತಿದ್ದಾರೆ ವಿಜಯ್ ರಾಘವೇಂದ್ರ, ಮಾಸ್ ಲುಕ್ ವೈರಲ್
ವಿಜಯ್ ರಾಘವೇಂದ್ರ ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಸ್ಯಾಂಡಲ್ ವುಡ್‌ನ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಗಳಿಸಿರುವ ನಟ ವಿಜಯ್ ರಾಘವೇಂದ್ರ ಇದೀಗ ವಿಭಿನ್ನ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮಾಸ್ ಲುಕ್ ನಲ್ಲಿ ಎಂಟ್ರಿ ಕೊಡುತ್ತಿರುವ ವಿಜಯ್ ರಾಘವೇಂದ್ರ ಅವರ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ವಿಜಯ್ ರಾಘವೇಂದ್ರ ರಾಘು ಎನ್ನುವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.ಯುವ ನಿರ್ದೇಶಕ ಎಂ. ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ರಾಘು. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರೋ ಈ ಚಿತ್ರ ವಿಜಯ ರಾಘವೇಂದ್ರ ಸಿನಿ ಕೆರಿಯರ್ ನ ವಿಭಿನ್ನ ಸಿನಿಮಾ ಅನ್ನೋದನ್ನ ಚಿತ್ರತಂಡ ಆರಂಭದಿಂದ ಹೇಳಿಕೊಂಡು ಬಂದಿತ್ತು. ಇದೀಗ ಅದಕ್ಕೆ ಸಾಕ್ಷಿ ಎನ್ನುವಂತೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಮೂಡಿಸಿದೆ.
‘ರಾಘು’ ಸಿನಿಮಾ ಮೂಲಕ ತಮ್ಮ ಸಿನಿ ಕೆರಿಯರ್ ನಲ್ಲೇ ಹೊಸದೊಂದು ಪ್ರಯೋಗಕ್ಕೆ ವಿಜಯ್ ರಾಘವೇಂದ್ರ ಒಡ್ಡಿಕೊಂಡಿದ್ದಾರೆ. ಆ ಸಿಕ್ರೇಟ್ ಮೋಷನ್ ಪೋಸ್ಟರ್ ಮೂಲಕ ರಿವೀಲ್ ಆಗಿದೆ. ‘ರಾಘು’ ಸಿನಿಮಾ ಸೋಲೋ ಆಕ್ಟಿಂಗ್ ಸಿನಿಮಾವಾಗಿದ್ದು ಇಂಟ್ರಸ್ಟಿಂಗ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ.
ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯೋಗವಾಗಿದ್ದು, ಅಷ್ಟೇ ವಿಭಿನ್ನತೆಯನ್ನು ಸಿನಿಮಾ ಒಳಗೊಂಡಿದೆ. ಹೊಸ ರೀತಿಯ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಪೂರ್ತಿ ಸಿನಿಮಾ ವಿಜಯ ರಾಘವೇಂದ್ರ ಒಬ್ಬರೇ ನಟಿಸಿದ್ದಾರೆ. ‘ಆನ’ ಹಾಗೂ ‘ಬ್ಯಾಂಗ್’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಇರುವ ಎಂ. ಆನಂದ್ ರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಹೊಸತನದಿಂದ ಕೂಡಿರುವ ಈ ಸಿನಿಮಾ ಕನ್ನಡದಲ್ಲಿ ಹೊಸ ಪ್ರಯೋಗ. ವಿಜಯ ರಾಘವೇಂದ್ರ ಸಿನಿ ಕೆರಿಯರ್ ನ ಡಿಫ್ರೆಂಟ್ ಸಿನಿಮಾ ಇದಾಗಿದ್ದು, ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಶೇಡ್ ನಲ್ಲಿ ತೆರೆ ಮೇಲೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಎಂ. ಆನಂದ್ ರಾಜ್.
ಆ ತರ ಸಿನಿಮಾಗಳನ್ನು ಯಾಕೆ ಮಾಡೋಲ್ಲ ಎಂದು ಜನರು ಕೇಳುತ್ತಾರೆ: ವಿಜಯ್ ರಾಘವೇಂದ್ರ
ತಾಂತ್ರಿಕವಾಗಿ ಹಾಗೂ ಕ್ವಾಲಿಟಿ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಆಗದೇ ಶ್ರೀಮಂತವಾಗಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಅದಕ್ಕೆಂದೇ ಹೊಸ ಟೆಕ್ನಾಲಜಿ ಇರುವ ಕ್ಯಾಮೆರಾಗಳು, ಅದ್ದೂರಿ ಸೆಟ್ ನಿರ್ಮಾಣ ಮಾಡಿ ‘ರಾಘು’ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಸೌಂಡ್ ಡಿಸೈನಿಂಗ್ ನಲ್ಲಿ ಹೊಸ ರೀತಿಯ ಪ್ರಯೋಗವನ್ನು ಮಾಡಲಾಗಿದ್ದು, ಬಿ.ಆರ್.ನವೀನ್ ಕುಮಾರ್ ಡಿಫ್ರೆಂಟ್ ಇನ್ಸ್ ಟ್ರುಮೆಂಟ್ ಬಳಸಿ ಚಿತ್ರಕ್ಕೆ ಹೊಸ ರೀತಿಯ ಸೌಂಡ್ ಎಫೆಕ್ಟ್ ನೀಡಿದ್ದಾರೆ.
ಲಕ್ಷ್ಮಣ ಸವದಿಗೆ ಸಿಎಂ ಆಗುವ ಸಾಮರ್ಥ್ಯವಿದೆ: ನಟ ವಿಜಯ ರಾಘವೇಂದ್ರ
ರಾಘು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ. ಡಿ ಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ರಣ್ವಿತ್ ಶಿವಕುಮಾರ್, ಅಭಿಷೇಕ್ ಕೋಟ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ಉದಯ್ ಲೀಲಾ ಕ್ಯಾಮೆರಾ ವರ್ಕ್, ಹಾಡುಗಳಿಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.