Asianet Suvarna News Asianet Suvarna News

ರೌಡಿ ಅಂದ್ಕೊಳಿ, ಲವರ್​ಬಾಯ್​, ಸೈಕೋಪಾಥ್ ಏನೇ ಅಂದ್ಕೊಳಿ... ವಸಿಷ್ಠ ಸಿಂಹ ಸೀಕ್ರೇಟ್​ ರಿವೀಲ್

ರೌಡಿ ಅಂದ್ಕೊಳಿ, ಲವರ್​ಬಾಯ್​, ಸೈಕೋಪಾಥ್ ಏನೇ ಅಂದ್ಕೊಳಿ, ಫ್ಯಾಮಿಲಿ ಮ್ಯಾನ್​ ಅಂದ್ಕೊಂಡ್ರೂ ಪರವಾಗಿಲ್ಲ... ನಟ ವಸಿಷ್ಠ ಸಿಂಹ ಹೀಗೆಲ್ಲಾ ಹೇಳಿದ್ದು ಏನೆ? 
 

Actor Vasishtha Simha say about the different shades of Love Li film which will be released on June 14 suc
Author
First Published Jun 12, 2024, 1:01 PM IST

ನೀವು ನನ್ನನ್ನು ರೌಡಿ ಅಂದ್ಕೊಳಿ, ಲವರ್​ಬಾಯ್​ ಅಂದ್ಕೊಳಿ, ಸೈಕೋಪಾಥ್​ ಅಂದ್ಕೊಳಿ, ಫ್ಯಾಮಿಲಿ ಮ್ಯಾನ್​ ಅಂದ್ಕೊಳಿ ಏನೇ ಅಂದುಕೊಂಡ್ರೂ ನಾನು ಹಾಗೆ ಕಾಣಿಸುತ್ತೇನೆ. ಆ ರೀತಿಯಲ್ಲಿ ನಾನು ನನ್ನೊಳಗೆ ಸೇರಿಕೊಂಡಿದ್ದೇನೆ ಎನ್ನುವ ಮೂಲಕ ಸ್ಯಾಂಡಲ್​ವುಡ್​ ಪ್ರಿಯರಿಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಸ್ಯಾಂಡಲ್​ವುಡ್​ ನಟ ವಸಿಷ್ಠ ಸಿಂಹ. ಆ್ಯಂಕರ್​  ರ‍್ಯಾಪಿಡ್ ರಶ್ಮಿ ಅವರ ಜೊತೆಗಿನ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಅಷ್ಟಕ್ಕೂ ಅವರು ಹೇಳಿದ್ದು ಅವರ ಮುಂಬರುವ ಚಿತ್ರ 'ಲವ್ ಲಿ' ಕುರಿತಾಗಿ. ನಾಡಿದ್ದು ಅಂದರೆ ಜೂನ್ 14 ರಂದು ಬಿಡುಗಡೆಯಾಗಲಿರುವ ಚಿತ್ರದ ಕುರಿತು ನಟ ಅನಿಸಿಕೆ ಹಂಚಿಕೊಂಡಿದ್ದಾರೆ.
 
ಈ ಚಿತ್ರದಲ್ಲಿ ವಿಭಿನ್ನ ಶೇಡ್​ನಲ್ಲಿ ವಸಿಷ್ಠ ಅವರು ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಯಾರು ಹೇಗೆ ಅಂದುಕೊಳ್ಳುತ್ತಾರೋ ಆ ಷೇಡ್​ನಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ ಎಂದಿರುವ ನಟ, ಇದೊಂದು ರಿಯಲ್​ ಲೈಫ್​ ಸ್ಟೋರಿ ಎಂದಿದ್ದಾರೆ. ಆದರೆ ಇದು ಸೀಕ್ರೇಟ್​ ಎಂದಷ್ಟೇ ಹೇಳುವ ಮೂಲಕ ತಮ್ಮ ಮುಂಬರುವ ಚಿತ್ರದ ಸೀಕ್ರೇಟ್​ ಮೆಂಟೇನ್​ ಮಾಡಿದ್ದಾರೆ. ಅಷ್ಟಕ್ಕೂ ವಸಿಷ್ಠ ಅವರು 'ಭಾರತ vs ಇಂಗ್ಲೆಂಡ್‌' ಚಿತ್ರದ ಮೂಲಕ ಖಳನಾಯಕನಾಗಿಯೂ ಮಿಂಚಿದ್ದಾರೆ. ಇದೀಗ ವಿಭಿನ್ನ ಶೇಡ್​ಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

ಗಂಡ-ಹೆಂಡ್ತಿಯರಿಗೆ ಪರಸ್ಪರ ಲವ್​ ಜಾಸ್ತಿಯಾದಾಗ ಹೀಗೆಲ್ಲಾ ಹೇಳ್ತಾರಂತೆ ನೋಡಿ... ನೀವೇನ್​ ಕರಿತೀರಾ?

ಈ ಸಂದರ್ಭದಲ್ಲಿ ಚಿತ್ರದ ಕುರಿತು ಕೆಲವೊಂದು ಅನಿಸಿಕೆಗಳನ್ನು ನಟ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮಕಥೆ ಹಾಗೂ ರೌಡಿಸಂ ಎರಡೂ ಇರಲಿವೆ.  ಆರರಿಂದ ಅರವತ್ತು  ವರ್ಷದವರೆಗಿನ ಪ್ರತಿಯೊಬ್ಬರೂ ನೋಡಬೇಕಾದ ಚಿತ್ರವಿದು. ಎಲ್ಲರಿಗೂ ಆಪ್ತವಾಗುವಂತಹ ಫ್ಯಾಮಿಲಿ ಎಂಟರ್‌ಟೇನರ್‌ ಕಂಟೆಂಟ್‌ ಇದರಲ್ಲಿದೆ. ನವಿರು ಪ್ರೇಮಕಥೆಯ ಜತೆಗೆ ಭರ್ಜರಿ ಆಕ್ಷನ್‌ ಸನ್ನಿವೇಶಗಳು ಚಿತ್ರದಲ್ಲಿದ್ದು, ಕೆಲವು ಅಮಾನುಷ ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ ಎಂದು ತಿಳಿಸಿದ್ದಾರೆ. ಡಾಲಿ ಧನಂಜಯ ಅಭಿನಯದ ಕೋಟಿ, ಶಿವಮ್ಮ ಮತ್ತು ಚೆಫ್ ಚಿದಂಬರ ಚಿತ್ರಗಳೂ ಕೂಡ ಒಟ್ಟಿಗೇ ಬಿಡುಗಡೆಯಾಗುತ್ತಿರುವ ಬಗ್ಗೆಯೂ ಸಂದರ್ಶನದಲ್ಲಿ ಹೇಳಿರುವ ವಸಿಷ್ಠ ಅವರು,  ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ವಿಶಿಷ್ಟ ಕಂಟೆಂಟ್ ಇರುತ್ತದೆ. ಆದ್ದರಿಂದ ಯಾವುದೇ ಸ್ಪರ್ಧೆ ಇಲ್ಲ ಎಂದೂ ಹೇಳಿದ್ದಾರೆ.
 
 ಲವ್​ ಲಿ ಚಿತ್ರದಲ್ಲಿ ವಸಿಷ್ಠ ಅವರು,  ಎಲ್ಲಾ ದೇಶಗಳಿಗೂ ಬೇಕಾದ ಒಬ್ಬ ನಟೋರಿಯಸ್‌ ಗ್ಯಾಂಗ್‌ಸ್ಟರ್‌ ಪಾತ್ರ ಮಾಡುತ್ತಿದ್ದಾರೆ.  ಇಂಥವನ ಬದುಕಲ್ಲಿ ಪ್ರೀತಿ ಹುಟ್ಟಿಕೊಂಡಾಗ ಏನೆಲ್ಲಾ ಬದಲಾವಣೆ ಆಗುತ್ತದೆ, ಜವಾಬ್ದಾರಿಗಳು ಹೇಗಿರುತ್ತವೆ ಎನ್ನುವುದರ ಸುತ್ತ  ಕಥೆ ಸಾಗುತ್ತದೆ.  ಪ್ರೇಮಕಥೆ ಜತೆಗೆ ಕೆಲವು ಆ್ಯಕ್ಷನ್​ಗಳೂ ಇವೆ.  ಇದಕ್ಕಾಗಿ ತಾವು ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಈ ಹಿಂದೆ ವಸಿಷ್ಠ ಹೇಳಿದ್ದರು.  ಕಳೆದ ಎರಡ್ಮೂರು ವರ್ಷಗಳಿಂದ ಯಾವ ಹೊಸ ಪ್ರಾಜೆಕ್ಟ್ ಕೂಡ ಒಪ್ಪಿಲ್ಲ. ಈ ಚಿತ್ರದ ಮೇಲೆ ನನಗೆ ಅಷ್ಟು ನಂಬಿಕೆಯಿದೆ. ಸಾಕಷ್ಟು ಸಿದ್ಧತೆ ಮಾಡಿ ಈಗ ಸಿನಿಮಾಗೆ ಸಿದ್ಧವಾಗಿದ್ದೇನೆ ಎಂದಿದ್ದರು. ಇದರಲ್ಲಿ  ಸ್ಟೆಫಿ ಪಟೇಲ್‌ ನಾಯಕಿಯಾಗಿದ್ದಾರೆ.  'ನಿನ್ನು ತಲಚಿ' ತೆಲಗು ಚಿತ್ರದ ಮೂಲಕ ಸಿನಿಮಾಕ್ಕೆ ಬಂದಿರುವ ಸ್ಟೆಫಿ ಅವರಿಗೆ ಇದು ಕನ್ನಡದ ಮೊದಲ ಚಿತ್ರ.  

ಒತ್ತು ಶ್ಯಾವಿಗೆಗಾಗಿ ಬಸ್​ ಹಿಂದೆ ಓಡಿದ ಸ್ಟಾರ್​ ಹೋಟೆಲ್​ ನೌಕರರು! ಇಂಗ್ಲಿಷ್​ ಹೋಗಿ ಕನ್ನಡವೂ ಬಂತು

Latest Videos
Follow Us:
Download App:
  • android
  • ios