Asianet Suvarna News Asianet Suvarna News

ಸರ್ಕಾರ ಚಿತ್ರನಗರಿ ಅಭಿವೃದ್ಧಿ ಕೆಲಸ ಪ್ರಾರಂಭಿಸಲಿ: ಸಂಸದ ಪ್ರತಾಪ್ ಸಿಂಹಗೆ ನಟ ವಸಿಷ್ಠ ಸಿಂಹ ಮನವಿ

ಕಂಚಿನ ಕಂಠ ಎಂದೇ ಪ್ರಖ್ಯಾತಿ ಪಡೆದಿರುವ ಗಾಯಕ, ಚಿತ್ರನಟ ವಸಿಷ್ಠ ಸಿಂಹ ಮೈಸೂರಿಗೆ ಭೇಟಿ ನೀಡಿದ್ದರು. ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ರವರನ್ನ ಭೇಟಿ ಮಾಡಿ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕೆಲಸವನ್ನ ಶೀಘ್ರ ಪ್ರಾರಂಭಿಸಲಿ ಎಂದು ಮನವಿ ಮಾಡಿದ್ದಾರೆ.  

Actor vasishta simha meets MP pratap Simha in mysore sgk
Author
First Published Sep 7, 2022, 6:39 PM IST

ಕಂಚಿನ ಕಂಠ ಎಂದೇ ಪ್ರಖ್ಯಾತಿ ಪಡೆದಿರುವ ಗಾಯಕ, ಚಿತ್ರನಟ ವಸಿಷ್ಠ ಸಿಂಹ ಮೈಸೂರಿಗೆ ಭೇಟಿ ನೀಡಿದ್ದರು. ಅಂದಹಾಗೆ ವಸಿಷ್ಠ ಸುಮ್ಮನೆ ಮೈಸೂರಿಗೆ ಎಂಟ್ರಿ ಕೊಟ್ಟಿರಲಿಲ್ಲ. ವಸಿಷ್ಠ ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ರವರನ್ನ ಭೇಟಿ ಮಾಡಿ ಸರ್ಕಾರ ಮೈಸೂರಿನಲ್ಲಿ ಚಿತ್ರನಗರಿ ಅಭಿವೃದ್ಧಿ ಕೆಲಸವನ್ನ ಶೀಘ್ರ ಪ್ರಾರಂಭಿಸಲಿ ಎಂದು ಮನವಿ ಮಾಡಿದ್ದಾರೆ.  

ಪ್ರತಾಪ್ ಸಿಂಹ ಭೇಟಿಯಾದ ಬಳಿಕ ಮಾತನಾಡಿದ ನಟ ವಸಿಷ್ಠ ಸಿಂಹ ಮೈಸೂರಿನ  ಭವಿಷ್ಯದ ಬೆಳವಣಿಗೆ ದೃಷ್ಟಿಯಲ್ಲಿ ದಶಪಥ ಹೆದ್ದಾರಿ ರಸ್ತೆಯನ್ನು ಸಂಸದ ಪ್ರತಾಪ್ ಸಿಂಹ ಅವರು ಕಾಳಜಿಯಿಂದ ಅಭಿವೃದ್ಧಿ ಕೆಲಸಗಳನ್ನು ಆಧುನಿಕತೆಯಿಂದ ನಡೆಸುತ್ತಿರುವುದು ಸಂತಸದ ವಿಚಾರ, ಇದರಿಂದ ಮೈಸೂರಿನಲ್ಲಿ ನೂರಾರು ಕಾರ್ಖಾನೆ ಕೈಗಾರಿಕೋದ್ಯಮ ಸ್ಥಾಪನೆಯಾಗಿ ಲಕ್ಷಾಂತರ ಮಂದಿಗೆ ಕೆಲಸ ಸಿಗುವಂತಾಗುತ್ತದೆ ಎಂದರು. ಮೈಸೂರಿನಿಂದ ವಿವಿಧ ಕಡೆ ಸಂಪರ್ಕಿಸುವ ರೈಲುಗಳ ಸಂಚಾರ ಮಾಡಿರುವುದು ಸಾಕಷ್ಟು ಮಂದಿಗೆ ಉಪಯೋಗವಾಗಿದೆ, ನಾವು ಹತ್ತಾರು ವರ್ಷದ ಹಿಂದೆ ಕೇವಲ ಮೈಸೂರು ವಿಮಾನ ನಿಲ್ದಾಣವನ್ನ ಮಾತ್ರ ಕಂಡಿದ್ದೇವು ಅಂದರೆ ಇಂದು ಪ್ರತಾಪ್ ಸಿಂಹರವರು ಸಾಮಾನ್ಯವ್ಯಕ್ತಿಯೂ ಸಹ ವಿಮಾನದಲ್ಲಿ ಪ್ರಯಾಣಿಸಲು ಹತ್ತಾರು ವಿಮಾನಗಳನ್ನು ಮೈಸೂರು ಸಂಪರ್ಕಕ್ಕೆ ತಂದರು ಎಂದು ಹೇಳಿದರು.

ವಸಿಷ್ಠ ಸಿಂಹ ಮುಂದೆ 'Love...ಲಿ' ಸಿನಿಮಾ: ಮತ್ತೊಂದು ಚಿತ್ರಕ್ಕೆ ಹೀರೋ ಆದ ಕಂಚಿನ ಕಂಠದ ನಟ

'ವಿಮಾನ ನಿಲ್ದಾಣ ವಿಸ್ತರಿಸಿ ಅಭಿವೃದ್ಧಿ ಮಾಡಿದ್ದಾರೆ, ಅದರಂತೆಯೆ ಮೈಸೂರು ದಸರಾ ಆಗಮಿಸುತ್ತಿದೆ ನಮ್ಮ ಮೈಸೂರು ಕಲಾವಿದರ ತವರೂರು ಕಲಾವಿದರ ಕಡೆಯು ಸರ್ಕಾರ ಗಮನ ವಹಿಸಬೇಕಿದೆ ಮತ್ತು ಚಿತ್ರನಗರಿಯನ್ನ ಮೈಸೂರಿನ ಇಮ್ಮಾವು ಬಳಿ ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ಮೂರ್ನಾಲ್ಕು ವರ್ಷದ ಹಿಂದೆಯೇ ಘೋಷಿಸಿದೆ ಹಾಗಾಗಿ ಅಭಿವೃದ್ದಿ ಕೆಲಸಗಳು ಪ್ರಾರಂಭಿಸಲು ಮುಂದಾಗಲಿ ಇದರಿಂದ ನಟನೆ ನಿರ್ದೇಶನ ಮತ್ತು ತಾಂತ್ರಿಕ ವಿಭಾಗ ಸೇರಿದಂತೆ ಕಲಾವಿದರ ಬದುಕಿಗೆ ಕಲಾಶಿಕ್ಷಣ ದುಡಿಮೆಗೆ ಅವಕಾಶ ಸಿಗುತ್ತದೆ' ಎಂದು ಮನವಿ ನೀಡಿದರು.

ಅವಮಾನ ಮಾಡಿದವರಿಗೆ ನನ್ನ ಸಲಾಮ್ ಎಂದ ವಸಿಷ್ಠ ಸಿಂಹ

ಆ ಸಂಧರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಚಿತ್ರನಟ ವಸಿಷ್ಠ ಸಿಂಹ, ನಿರ್ದೇಶಕ ಕಾರ್ತಿಕ್, ಅಜಯ್ ಶಾಸ್ತ್ರಿ, ವಿಕ್ರಮ್ ಅಯ್ಯಂಗಾರ್, ಲಿಂಗರಾಜು, ದರ್ಶನ್,  ಮುರಳಿಧರ್, ಕೌಶಲ್, ಪ್ರದೀಪ್ ಇನ್ನಿತರರು ಇದ್ದರು.

ಈ ಮೊದಲು ಕಾರ್ಯಕ್ರಮ ಒಂದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ ಚಿತ್ರನಗರಿ ಕಾಮಾಗಾರಿ ಇದೇ ವರ್ಷ ಆರಂಭವಾಗಲಿದೆ ಎಂದು ಹೇಳಿದ್ದರು. ಆದರೆ ಇನ್ನು ಪ್ರಾರಂಭವಾಗಿಲ್ಲ. ಹಾಗಾಗಿ ಬೇಗ ಕೆಲಸ ಪ್ರಾರಂಭವಾಗಿಲಿ ಎನ್ನುವುದು ಚಿತ್ರರಂಗದ ಆಶಯ. 

Follow Us:
Download App:
  • android
  • ios