ಕುತೂಹಲ ಹೆಚ್ಚಿಸುತ್ತಿದೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಟೈಟಲ್. ಉಪ್ಪಿ ನೀವು ಸಖತ್ ಕ್ರಿಯೇಟಿವ್ ಎಂದ ನೆಟ್ಟಿಗರು....

ಉಪೇಂದ್ರ ನಿರ್ದೇಶನ ಮತ್ತು ನಟನೆಯ ಹೊಸ ಸಿನಿಮಾದ ಹೆಸರು ಯು-ಐ. ಇಂಗ್ಲಿಷಿನ ಯು ಅಕ್ಷರದ ಒಳಗೆ ಐ ಅಕ್ಷರ ಸೇರಿಕೊಂಡಿರುವ ಚಿಹ್ನೆಯುಳ್ಳ ಚಿತ್ರದ ಪೋಸ್ಟರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಸೆ.18 ಉಪೇಂದ್ರ ಹುಟ್ಟುಹಬ್ಬದಂದು ಅಧಿಕೃತ ಘೋಷಣೆ ಹೊರಬೀಳಲಿದೆ.

ಉಪೇಂದ್ರ ಮತ್ತೆ ನಾನು-ನೀನು ಫಿಲಾಸಫಿಗೆ ಮರಳಿರುವುದು ಪೋಸ್ಟರಿನಲ್ಲಿ ಖಚಿತವಾಗಿ ತಿಳಿಯುತ್ತದೆ. ಈ ಸಿನಿಮಾ ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಮೂಡಿಬರಲಿದೆ. ಉಪೇಂದ್ರ ಅವರು ಈ ಸಿನಿಮಾದ ಪೋಸ್ಟರ್ ಅನ್ನು ಸೆ.18ರಂದು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬಯಸಿದ್ದರು. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಅವರು ತಮ್ಮ ನಿರ್ದೇಶನದ ಚಿತ್ರ ತಡವಾಗಲಿದೆ ಎಂದಿದ್ದರು. ಆದರೆ ಅವರು ಅಚ್ಚರಿ ನೀಡುವ ಮೊದಲೇ ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇನ್ನು ಅಧಿಕೃತ ಘೋಷಣೆ ಬಾಕಿ ಉಳಿದಿದ್ದು, ಸಿನಿಮಾ ಕುರಿತ ಇನ್ನಿತರ ವಿವರಗಳನ್ನು ಸೆ.18ರಂದು ನೀಡಲಿದ್ದಾರೆ ಎನ್ನಲಾಗಿದೆ.

ಉಪ್ಪಿ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ..!

ಕೊರೋನಾ ಸಂಬಂಧ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಾನು ಅವತ್ತು ಊರಿನಲ್ಲೇ ಇರುವುದಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ. ಆದರೆ ಆನ್‌ಲೈನ್ ಸಂಭ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯಲಿದೆ.

View post on Instagram