35 ದಿನ​ಗಳ ಕಾಲ ನಡೆ​ಯುವ ಈ ಚಿತ್ರೀ​ಕ​ರ​ಣ​ಕ್ಕಾಗಿ ಎರಡು ಕಡೆ ಬೋಟ್‌ ಸೆಟ್‌ ಹಾಕ​ಲಾ​ಗಿದೆ. ಒಟ್ಟು 150 ರಿಂದ 170 ದಿನ​ಗಳ ಶೂಟಿಂಗ್‌ ಪ್ಲಾನ್‌ ಮಾಡಿ​ಕೊಂಡಿದ್ದಾರೆ. ಮುಂದೆ ವಾರಾ​ಣ​ಸಿ, ಮುಂಬೈ, ಮಂಗ​ಳೂರು, ಪಾಂಡಿ​ಚೇ​ರಿಯಲ್ಲಿ ಏಪ್ರಿಲ್‌ 28 ರಿಂದ ಶೂಟಿಂಗ್‌ ಆರಂಭ​ವಾ​ಗ​ಲಿದೆ.

ತಾರಾ​ಮೆ​ರು​ಗು: ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆ ಆಗಿಲ್ಲ. ಬಾಲಿ​ವು​ಡ್‌ನ ಕಬೀರ್‌ಸಿಂಗ್‌ ದುಹಾನ್‌, ತೆಲು​ಗಿ​ನ ಕೋಟಾ ಶ್ರೀನಿ​ವಾ​ಸ್‌, ಸುಬ್ಬ​ರಾಜು, ಕನ್ನ​ಡದ ನವೀನ್‌ ಸೇರಿ​ದಂತೆ ಒಟ್ಟು 600ಕ್ಕೂ ಹೆಚ್ಚು ಮಂದಿ ಸೆಟ್‌​ನ​ಲ್ಲಿ​ದ್ದಾರೆ.

ಬಹು​ಭಾ​ಷೆ​ಯಲ್ಲಿ ಬರು​ತ್ತಿ​ರುವ ಸಿನಿಮಾ. ಹೀಗಾಗಿ ನಟ ಉಪೇಂದ್ರ ಅವರು ಸಾಕಷ್ಟುಶ್ರಮ ಹಾಕು​ತ್ತಿ​ದ್ದಾರೆ. 18 ನಿರ್ದೇ​ಶ​ಕರ ತಂಡ, 220 ತಾಂತ್ರಿಕ ತಂಡ. ಸೆಟ್‌ ಬಾಯ್ಸ್ 40 ಜನ ಹೀಗೆ ದೊಡ್ಡ ಮಟ್ಟ​ದಲ್ಲಿ ಶೂಟಿಂಗ್‌ ಮಾಡು​ತ್ತಿ​ರುವ ಚಿತ್ರದ ದೃಶ್ಯ​ಗ​ಳನ್ನು ನೋಡಿದ ಹೈದ​ರಾ​ಬಾ​ದ್‌ನ ಅನ್ನ​ಪೂರ್ಣ ಸ್ಟುಡಿ​ಯೋದ ಸಿಇಓ ಸಿವಿ ರಾವ್‌ ಅವರು ನಿರ್ದೇ​ಶಕ ರಾಜ​ಮೌಳಿ ಅವರ ‘ಅರ್‌​ಆ​ರ್‌​ಆ​ರ್‌’ ಚಿತ್ರಕ್ಕೆ ಕಂಪೇರ್‌ ಮಾಡಿ​ದರು. ಹಾಲಿ​ವುಡ್‌ ಟ್ರೀಟ್‌​ಮೆಂಟ್‌ ಇದೆ. ಕನ್ನಡ ಚಿತ್ರ​ವೊಂದು ಈ ಮಟ್ಟಿಗೆ ಕ್ವಾಲಿಟಿ ಇರು​ವುದು ಸೂಪರ್‌ ಎಂದು ಹೊಗ​ಳಿದ್ದು, ನಮ್ಮ ಚಿತ್ರದ ಯಶಸ್ಸಿನ ಭರ​ವ​ಸೆ​ ಹೆಚ್ಚಿ​ಸಿತು.- ಆರ್‌. ಚಂದ್ರು

ಶೂಟಿಂಗ್‌ ಸ್ಪಾಟ್‌: ಹೈದ​ರಾ​ಬಾ​ದ್‌​ನಲ್ಲಿ ಬೋಟ್‌ನ ಹೊರಾಂಗಣ(ಟಾ​ಪ್‌) ಸೆಟ್‌ ಹಾಕಿ​ದ್ದರೆ, ಬೆಂಗ​ಳೂ​ರಿನ ಮಿನ​ರ್ವ​ ಮಿ​ಲ್‌​ನಲ್ಲಿ 60 ಲಕ್ಷ ವೆಚ್ಚ​ದಲ್ಲಿ ಬೋಟ್‌ನ ಒಳಾಂಗಣ (ಇಂಟೀ​ರಿ​ಯ​ರ್‌) ಸೆಟ್‌ ಹಾಕ​ಲಾ​ಗಿದೆ. ಇದರ ಜತೆಗೆ ಜೈಲು, ಪೊಲೀಸ್‌ ಸ್ಟೇಷನ್‌ ಸೇರಿ​ದಂತೆ ಒಟ್ಟು 18 ಸೆಟ್‌ಗಳನ್ನು ಹಾಕಿ​ದ್ದಾರೆ. ಏಪ್ರಿಲ್‌ 4ರವರೆಗೂ ಚಿತ್ರೀ​ಕ​ರಣ ನಡೆ​ಯ​ಲಿದ್ದು, 50ರ ದಶ​ಕದ ಕಾಲ​ಘ​ಟ್ಟ​ದ ಉಪೇಂದ್ರ ಲುಕ್ಕು​ಗಳು ಸೆಟ್‌ನ ಹೈಲೈಟ್‌. ಕಲಾ​ವಿ​ದರ ಕಾಸ್ಟೂ್ಯಮ್‌, ಚಿತ್ರ​ದಲ್ಲಿ ಬಳ​ಸುವ ವಾಹ​ನ​ಗ​ಳು, ಕತೆಯ ಹಿನ್ನೆಲೆ... ಹೀಗೆ ಎಲ್ಲ​ದಕ್ಕೂ 50 ಕಾಲ​ಘ​ಟ್ಟದ ಫೀಲ್‌ ಇದೆ. ಈಗ ಕನ್ನಡ ಹಾಗೂ ತೆಲುಗು ಭಾಷೆ​ಯ​ಲ್ಲಿ ಏಕ​ಕಾ​ಲಕ್ಕೆ ದೃಶ್ಯ​ಗಳ ಚಿತ್ರೀ​ಕ​ರಣ. ಹೀಗಾಗಿ ಒಂದೊಂದು ದೃಶ್ಯ ಎರಡು ಸಲ ಶೂಟಿಂಗ್‌ ಟೇಕ್‌ ಮಾಡ​ಲಾ​ಗು​ತ್ತಿದೆ. ಸೆಟ್‌​ನಲ್ಲಿ ಯಾರೂ ಮೊಬೈಲ್‌ ಬಳ​ಸು​ವಂತಿ​ಲ್ಲ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಶೂಟಿಂಗ್‌ ಆರಂಭ​ವಾ​ಗು​ತ್ತದೆ. ಹಳೆಯ ಕಾಲದ ಕಾಸ್ಟೂ್ಯ​ಮ್‌​ನಲ್ಲಿ ಉಪೇಂದ್ರ ಎಂಟ್ರಿ ಆಗು​ತ್ತಿ​ದಂತೆಯೇ ಚಿತ್ರೀ​ಕ​ರಣ ಸೆಟ್‌ಗೆ ಜೋಶ್‌ ಬರು​ತ್ತದೆ.

'ಸಂಗೊಳ್ಳಿ ರಾಯಣ್ಣ' ಆದ್ಮೆಲೇ 'ಕಬ್ಜ' ಚಿತ್ರಕ್ಕೆ ಕೋಟಿ ಬಜೆಟ್ ಸೆಟ್!

ಯಾವಾಗ ತೆರೆಗೆ ಬರು​ತ್ತೆ?: 80 ಕೋಟಿ ವೆಚ್ಚ​ದಲ್ಲಿ ನಿರ್ಮಾ​ಣ​ವಾ​ಗು​ತ್ತಿ​ರುವ ‘ಕಬ್ಜ’ ಇದೇ ವರ್ಷದ ಕೊನೆ​ಯಲ್ಲಿ ತೆರೆಗೆ ಬರ​ಲಿದೆ.