ನಟ ಸುದೀಪ್ ಅವರು ತಮ್ಮ ತಾಯಿ ಸರೋಜಾ ಅವರ ಬಗ್ಗೆ ಭಾವುಕರಾಗಿ ಬರೆದಿದ್ದಾರೆ. ತಾಯಿಯ ಪ್ರೀತಿ, ಕ್ಷಮೆ, ಕಾಳಜಿ ಮತ್ತು ಜೀವನ ಮೌಲ್ಯಗಳನ್ನು ಸ್ಮರಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆಯ ನೋವು ಮತ್ತು ಒಂಟಿತನವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ನಟ ಸುದೀಪ್ ತಾಯಿ ಸರೋಜಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನನ್ನ ತಾಯಿ ಪ್ರೀತಿಯನ್ನು ತೋರಿಸುವಳು, ಕ್ಷಮಾ ಗುಣವನ್ನು ಹೊಂದಿದ ವ್ಯಕ್ತಿ. ಪ್ರೀತಿ, ಕ್ಷಮೆ, ಕಾಳಜಿ, ಕೇಳಿದ್ದನ್ನು ಎಲ್ಲವನ್ನು ಕೊಡುವ, ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದು ಅಮ್ಮ. ನಾನು ಅಮ್ಮನನ್ನು ಯಾವಾಗಲೂ ಆನಂದಿಸುತ್ತೇನೆ. ಅಮ್ಮ ಹೇಳಿಕೊಟ್ಟ ಪಾಠಗಳನ್ನು ಇಂದಿಗೂ ಪಾಲನೆ ಮಾಡಿಕೊಂಡು ಬಂದಿದ್ದೇನೆ. ನನ್ನ ಜೊತೆಯಲ್ಲಿ ಜೀವಂತವಾಗಿದ್ದ ದೇವರು ನನ್ನಮ್ಮ. ಆಕೆ ನನ್ನ ಗುರು, ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಲಸವನ್ನು ಇಷ್ಟಪಟ್ಟ ಮೊದಲ ಹೃದಯ. ಈಗ ಅಮ್ಮ ಎಂಬುವುದು ಸುಂದರ ನೆನಪು ಆಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ. 

ಈ ಸಂದರ್ಭದಲ್ಲಿ ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಇಲ್ಲ. ಅಮ್ಮನಿಲ್ಲದ ಈ ಒಂಟಿತನ ನನ್ನಿಂದ ಒಪ್ಪಿಕೊಳ್ಳಲು ಆಗುತ್ತಿಲ್ಲ. ನನ್ನ ಸುತ್ತಲು ಏನಾಗಿದೆ ಎಂಬುವುದೇ ತಿಳಿಯುತ್ತಿಲ್ಲ. 24 ಗಂಟೆಯಲ್ಲಿ ಎಲ್ಲವೂ ಬದಲಾಯ್ತು. ಪ್ರತಿದಿನ ಬೆಳಗ್ಗೆ 5.30ಕ್ಕೆ ಸರಿಯಾಗಿ 'ಶಭೋದಯ ಕಂದಾ' ಎಂಬ ಮೆಸೇಜ್ ಬರುತ್ತಿತ್ತು. ಅಕ್ಟೋಬರ್ 18ರ ಶುಕ್ರವಾರ ನಾನು ಕೊನೆಯ ಬಾರಿ ಅಮ್ಮನ ಮೆಸೇಜ್ ಬಂದಿತ್ತು. ಮರದಿನ ಬಿಗ್‌ಬಾಸ್‌ನಲ್ಲಿದ್ದಾಗ ಅಮ್ಮನಿಂದ ನನಗೆ ಮೆಸೇಜ್ ಬಂದಿರಲಿಲ್ಲ. ಹಲವು ವರ್ಷಗಳಲ್ಲಿ ನನಗೆ ಬೆಳಗ್ಗೆ ಅಮ್ಮನಿಂದ ಬೆಳಗ್ಗೆ ಮೆಸೇಜ್ ಬಂದಿರದ ದಿನ ಅದಾಗಿತ್ತು.

ನಾನು ಬೆಳಗ್ಗೆಯ ಮೆಸೇಜ್ ಕಳುಹಿಸಿ, ಎಲ್ಲವೂ ಸರಿಯಾಗಿದೆಯಾ ಎಂದು ತಿಳಿದುಕೊಳ್ಳಲು ಕಾಲ್ ಮಾಡಬೇಕು ಅಂದುಕೊಂಡೆ. ಆದರೆ ಬಿಗ್‌ಬಾಸ್ ಶನಿವಾರ ಸಂಚಿಕೆಯ ಚರ್ಚೆ ನನ್ನ ಇಡೀ ದಿನವನ್ನು ತೆಗೆದುಕೊಂಡಿತು. ನಾನು ವೇದಿಕೆಗೆ ಹೋಗುವ ಮುನ್ನ, ಅಮ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮೆಸೇಜ್ ಬಂತು. ನಾನು ತಕ್ಷಣ ಆಸ್ಪತ್ರೆಯಲ್ಲಿ ಅಮ್ಮನ ಜೊತೆಯಲ್ಲಿದ್ದ ಸೋದರಿಗೆ ಕಾಲ್ ಮಾಡಿ, ಆರೋಗ್ಯ ವಿಚಾರಿಸಿಕೊಂಡು ಬಿಗ್‌ಬಾಸ್ ವೇದಿಕೆಗೆ ಹೋದೆ.

ಕಿಚ್ಚನ ತಾಯಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ? ಸುದೀಪನಿಗೆ ಒಂದೇ ದಿನ 2 ಬಾರಿ ಆಶೀರ್ವಾದ ಮಾಡಿದ್ದ ಅಮ್ಮ!

ವೇದಿಕೆಗೆ ತೆರಳಿದ ಕೆಲವೇ ಸಮಯದಲ್ಲಿ ಅಮ್ಮನ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಉಂಟಾಗಿದ್ದು, ಆಕೆ ಗಂಭೀರವಾಗಿದ್ದಾಳೆ ಎಂಬ ವಿಷಯ ಗೊತ್ತಾಯ್ತು. ಈ ಸಂದರ್ಭದಲ್ಲಿ ನಾನು ಮೊದಲ ಬಾರಿ ನನಗೆ ಅಸಹಾಯಕತೆ ಅನುಭವ ಉಂಟಾಯ್ತು. ಕಾರಣ ನಾನು ಶನಿವಾರದ ಸಂಚಿಕೆಯ ಚಿತ್ರೀಕರಣ ಆರಂಭಿಸಿದ್ದೆ. ಅಲ್ಲಿ ವೇದಿಕೆ ಮೇಲೆ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಮನಸ್ಸಿನ ಕ್ಷಣ ಕ್ಷಣಕ್ಕೂ ಅಮ್ಮನ ಆರೋಗ್ಯದ ಬಗ್ಗೆ ಭಯ ಆಗುತ್ತಿತ್ತು. 

ಶನಿವಾರದ ಸಂಚಿಕೆ ಶೂಟಿಂಗ್ ಮುಗಿಸಿದ ಕೂಡಲೇ ನಾನು ಆಸ್ಪತ್ರೆಗೆ ಹೋದೆ. ನಾನು ಹೋಗುವದಕ್ಕೂ ಮೊದಲೇ ಅಮ್ಮನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಪ್ರಜ್ಞಾ ಸ್ಥಿತಿಯಲ್ಲಿರುವಾಗ ನಾನು ಅಮ್ಮನನ್ನು ನೋಡಲೇ ಇಲ್ಲ. ಭಾನುವಾರ ಬೆಳಗ್ಗೆಯವರೆಗೂ ಆಕೆ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಳು. ಆದರೆ ಕೆಲವೇ ಗಂಟೆಗಳಲ್ಲಿ ಎಲ್ಲಾ ಬದಲಾಯ್ತು ಎಂದು ತಾಯಿಯ ಅಂತಿಮ ಕ್ಷಣಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. 

ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಪತ್ರ ಬರೆದು ಸಂತಾಪ ಸೂಚಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ಅಮ್ಮ ಇಲ್ಲ ಎಂಬ ಸುದ್ದಿ ಸುಳ್ಳು ಆಗಲಿ ಎಂದು ಬೇಡಿಕೊಂಡೆ. ಆದ್ರೆ ವಾಸ್ತವತೆಯನ್ನು ಒಪ್ಪಿಕೊಳ್ಳಲೇಬೇಕು. ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕು ಎಂಬುವುದು ಗೊತ್ತಾಗುತ್ತಿಲ್ಲ. ಬಿಗಿಯಾದ ಅಪ್ಪುಗೆ ನೀಡಿ ಚಿತ್ರೀಕರಣಕ್ಕೆ ತೆರಳಿದ ಕೆಲವೇ ಸಮಯದಲ್ಲಿ ಅಮ್ಮ ಇನ್ನಿಲ್ಲ ಎಂಬ ಕಷ್ಟಕರ ಸತ್ಯ ಹೊರ ಬಂತು. ಈ ಕಷ್ಟಕರ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿತು. ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ನನಗೆ ಕೆಲ ಸಮಯವೇ ಬೇಕಾಯ್ತು. 

ಪ್ರೀತಿಯ ಅಮ್ಮನನ್ನು ನಾನು ಕಳೆದುಕೊಂಡಿದ್ದೇನೆ. ನಾನು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವಳನ್ನು ಕಳೆದುಕೊಂಡಿದ್ದೇನೆ ಎಂಬುವುದು ನನಗೆ ನಿನ್ನೆಯ ಅರಿವು ಆಗಿದೆ. ಇದು ಪ್ರಕೃತಿಯ ನಿಯಮ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ಅಮ್ಮನಿಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ನಿಮ್ಮೆಲ್ಲರ ಸಂತಾಪ ಸಂದೇಶಗಳಿಗೆ ಧನ್ಯವಾದಗಳು. ನನ್ನ ಜೀವನದ ಅತ್ಯಮೂಲ್ಯ ಜೀವ ಕಳೆದು ಹೋಗಿದೆ. ಶಾಂತಿ ತುಂಬಿರುವ ಸ್ಥಳಕ್ಕೆ ಅಮ್ಮ ತೆರಳಿದ್ದಾಳೆ ಎಂಬುವುದು ನನಗೆ ತಿಳಿದಿದೆ. ಅಮ್ಮ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

Scroll to load tweet…