ಶಂಕರ್‌ ನಾಗ್‌ ಅವರ ಸಾವಿನ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಿಹಿ ಕಹಿ ಚಂದ್ರು ಅವರು ಮಾತನಾಡಿದ್ದಾರೆ. ಸಾಯುವ ಹಿಂದಿನ ಶಂಕರ್‌ ಅವರನ್ನು ಚಂದ್ರು ಭೇಟಿ ಮಾಡಿದ್ದರಂತೆ.  

ನಟ ಶಂಕರ್‌ ನಾಗ್‌ ಅವರು ಕಾರ್‌ ಅಪಘಾತದಲ್ಲಿ 35ನೇ ವಯಸ್ಸಿಗೆ ನಿಧನರಾದರು. ಆದರೆ ನಾನು ಅಂದು ಹಠ ಮಾಡಿದ್ರೆ ಅವರ ಸಾವನ್ನು ಮುಂದೂಡಬಹುದಿತ್ತು ಅಂತ ನನಗೆ ಅನಿಸುತ್ತದೆ ಎಂದು ನಟ, ನಿರ್ದೇಶಕ ಸಿಹಿ ಕಹಿ ಚಂದ್ರು ಅವರು ಹೇಳಿದ್ದಾರೆ. ಸುದ್ದಿಮನೆ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. 

ಆ ಪುಸ್ತಕ ಕೊಟ್ರು! 
“ನನಗೆ ಶಂಕರ್‌ ನಾಗ್‌, ಅನಂತ್‌ ನಾಗ್‌ ಎಲ್ಲರೂ ಥಿಯೇಟರ್‌ನಲ್ಲಿ ಸಿಕ್ಕರು. ಕೊನೇವರೆಗೂ ಶಂಕರ್‌ ಜೊತೆ ಒಳ್ಳೆಯ ಸಂಬಂಧ ಇತ್ತು. ಈಗಲೂ ಅನಂತ್‌ ನಾಗ್‌ ಜೊತೆ ಉತ್ತಮ ಬಾಂಡಿಂಗ್‌ ಹೊಂದಿದ್ದೇನೆ. ನಾನು ಕಾಲೇಜಿನ ಪ್ರೆಸಿಡೆಂಟ್‌ ಆಗಿದ್ದೆ, ನಮ್ಮ ಕಾಲೇಜಿಗೆ ಶಂಕರ್‌ ನಾಗ್‌ ಅವರನ್ನು ಅತಿಥಿಯಾಗಿ ಆಹ್ವಾನಿಸೋಕೆ ಹೋಗಿದ್ದೆ. ಆಗ ಅವರು "ಏನು ಓದಿದ್ಯಾ?" ಎಂದು ಕೇಳಿದರು. ಆಗ ನಾನು ʼಸೆಕೆಂಡ್‌ ಇಯರ್‌ ಡಿಗ್ರಿ ಓದುತ್ತಿದ್ದೇನೆʼ ಎಂದರು. ಆಗ ಅವರು "ಜೀವನದಲ್ಲಿ ಏನು ಓದಿದ್ಯಾ?" ಅಂತ ಪ್ರಶ್ನೆ ಮಾಡಿದ್ದರು. ನಾನು ದಡ್ಡನ ಥರ ಉತ್ತರ ಕೊಟ್ಟಿದ್ದೆ. ಆಮೇಲೆ ಅವರು Journey to Ixtlan: The Lessons of Don Juan ಪುಸ್ತಕ ಓದಿಕೊಂಡು ಬಾ, ನಾವಿಬ್ಬರು ಆಮೇಲೆ ಚರ್ಚೆ ಮಾಡೋಣ. ಇದಾದ ಮೇಲೆ ನಾನು ನಿನ್ನ ಕಾಲೇಜಿಗೆ ಬರ್ತೀನಿ ಎಂದರು” ಎಂದು ಸಿಹಿಕಹಿ ಚಂದ್ರು ಹೇಳಿದ್ದಾರೆ.

ಬ್ಲೌಸ್‌ ಇಲ್ಲದೆ ಸೀರೆಯುಟ್ಟು ಸದ್ದು ಮಾಡಿದ ʼಮಿಥುನರಾಶಿʼ ಧಾರಾವಾಹಿ ನಟಿ ವೈಷ್ಣವಿ ಅಸಲಿ ವಯಸ್ಸು ಎಷ್ಟು?

ಸಂಕೇತದಲ್ಲಿ ಇಂದು ಕೂಡ ನಟಿಸ್ತೀನಿ
“ಎಷ್ಟೇ ಓದಿದರೂ ಈ ಪುಸ್ತಕ ಅರ್ಥ ಆಗಲಿಲ್ಲ. ಇದೇ ವಿಷಯವನ್ನು ಅವರ ಬಳಿ ಹೇಳಿದಾಗ, ಶಂಕರ್‌, "ಇತಲಾ ಅಂದ್ರೆ ಜರ್ನಿ ಟು ಸೆಲ್ಫ್ ಎನ್ನೋದನ್ನು ತಲೆಯಲ್ಲಿ ಇಟ್ಕೊಂಡು ಓದು" ಅಂದ್ರು. ನಾನು ಮೂರೇ ದಿನಕ್ಕೆ ಆ ಪುಸ್ತಕ ಓದಿದೆ. ಆಮೇಲೆ ಸಾಕಷ್ಟು ಪುಸ್ತಕಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಂಡು ಓದಿದೆವು. ಸಿನಿಮಾ ರಂಗಕ್ಕೆ ಬಂದಮೇಲೆ ನಾವಿಬ್ಬರೂ ಇನ್ನಷ್ಟು ಹತ್ತಿರ ಆದೆವು. ಸಂಕೇತ ನಾಟಕದಲ್ಲಿ ನಾನು ಇನ್ನೂ ನಟಿಸ್ತೇನೆ, ಅರುಂಧತಿ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದೇನೆ” ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. 

Nanjundi Kalyana Secret: ಮಾಲಾಶ್ರೀ-ರಾಘಣ್ಣ 'ನಂಜುಂಡಿ ಕಲ್ಯಾಣ'ದ ಈ ಸೀಕ್ರೆಟ್ ನಿಮ್ಗೆ ಗೊತ್ತಿಲ್ಲ!

ಅಪಘಾತ ಆಗೋ ಹಿಂದಿನ ದಿನ…! 
ʼನಿಗೂಢ ರಾತ್ರಿʼ ಸಿನಿಮಾಕ್ಕೆ ನಾನು ಡಬ್‌ ಮಾಡ್ತಿದ್ದೆ. ನಾನು ಹಾಡು ಟ್ರಾನ್ಸ್‌ಫರ್‌ ಮಾಡಬೇಕು ಅಂತ ಶಂಕರ್‌ ನಾಗ್‌ ಅವರು ಡಬ್ಬಿಂಗ್‌ ನಿಲ್ಲಿಸಿದರು. ಒಂದು ರೀಲ್‌ ಮುಗಿಸಿದ್ರೆ ನನ್ನ ಡಬ್ಬಿಂಗ್‌ ಮುಗಿತಿತ್ತು. ನಾನು ಎಷ್ಟೇ ಹೇಳಿದರೂ ಶಂಕರ್‌ ಕೇಳಲಿಲ್ಲ. ಆ ಹಾಡು ಟ್ರಾನ್ಸ್‌ಫರ್‌ ಮಾಡೋಕೆ ಸಮಸ್ಯೆ ಆಯ್ತು. ನಾನು ದಾವಣಗೆರೆ ಹೋಗಬೇಕಿತ್ತು. ಅಲ್ಲಿ ನಾಗಪ್ರಕಾಶ್‌ ಅವರನ್ನು ಭೇಟಿ ಮಾಡಬೇಕಿತ್ತು. ಸಾಯಂಕಾಲ ಶಂಕರ್‌ ನಾಗ್‌ ಅವರನ್ನು ಭೇಟಿ ಮಾಡಿದ್ದೆ. ಅದಾಗಿ ಬೆಳಗ್ಗೆ ಶಂಕರ್‌ ನಾಗ್‌ ಅವರಿಗೆ ಅಪಘಾತ ಆಗಿತ್ತು ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. 

ಪಶ್ಚಾತ್ತಾಪ ಇದೆ! 
“ನಾನು ಹಠ ಮಾಡಿ ಡಬ್ಬಿಂಗ್‌ ಮುಗಿಸ್ತೀನಿ, ನೀವು ಆಮೇಲೆ ಹಾಡು ಟ್ರಾನ್ಸ್‌ಫರ್‌ ಮಾಡಿಕೊಳ್ಳಿ ಎಂದು ಹೇಳಿದ್ರೆ ನನ್ನಿಂದ ಒಂದು ಗಂಟೆ ಅವರ ಕೆಲಸ ತಡ ಆಗುತ್ತಿತ್ತು ಅಂತ ಅನಿಸ್ತು. ಈ ವಿಷಯಕ್ಕೆ ನಾನು ಮೂರು ತಿಂಗಳುಗಳ ಕಾಲ ಡಿಪ್ರೆಶನ್‌ಗೆ ಹೋಗಿದ್ದೆ. ನಾನು ಇಂದಿಗೆ ಮಾತ್ರ ಬದುಕ್ತೀನಿ, ನನಗೆ ದುಃಖವೇ ಇಲ್ಲ. ಶಂಕರ್‌ ನಾಗ್‌ ಅವರ ಕೆಲಸ, ಕ್ರಿಯೇಟಿವಿಟಿ ಎಲ್ಲವನ್ನೂ ನಾನು ನೋಡಿ ಪ್ರೇರಣೆ ಪಡೆದುಕೊಂಡಿದ್ದೇನೆ” ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. 

ಬರೀ '2500 ರೂ.'ಗೆ ಶಂಕರ್‌ ನಾಗ್‌ ರೀತಿ ನಟನೆ ಮಾಡಿದ ಕೆಜಿಎಫ್ ಸ್ಟಾರ್ ಯಶ್, ಡೌಟ್ ಇದ್ರೆ ನೋಡಿ..!

ಅಪಘಾತ ಹೇಗಾಯ್ತು? 
1990 ಸೆಪ್ಟೆಂಬರ್‌ 30ರಂದು ದಾವಣಗೆರೆಯ ಹೊರಭಾಗದಲ್ಲಿರೋ ಆನುಗೋಡಿನಲ್ಲಿ ಕಾರ್‌ ಅಪಘಾತ ಆಗಿ ಶಂಕರ್‌ ನಾಗ್‌ ಅಸು ನೀಗಿದರು. ಶಂಕರ್‌ ನಾಗ್‌ ಅವರಿಗೆ ಪತ್ನಿ ಅರುಂಧತಿ ನಾಗ್‌, ಮಗಳು ಕಾವ್ಯಾ ಇದ್ದಾರೆ. ಅರುಂಧತಿ ನಾಗ್‌ ಅವರು ರಂಗಭೂಮಿಯಲ್ಲಿ ಆಕ್ಟಿವ್‌ ಆಗಿದ್ದಾರೆ. ಕಾವ್ಯಾ ಅವರು ನಟನೆ, ಚಿತ್ರರಂಗದಿಂದ ದೂರ ಇದ್ದಾರೆ. 


YouTube video player