ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈ ಬಗ್ಗೆ ಸ್ವತ ಶ್ರೀದೇವಿ , ಅವರ ತಂದೆ ಬೈರಪ್ಪ ಮತ್ತು ಶಿವರಾಜ್‌ ಕುಮಾರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು (ಜೂ.10): ಡಾ.ರಾಜ್‌ ಕುಮಾರ್ ಕುಟುಂಬದ ಕುಡಿ, ಕನ್ನಡ ಚಿತ್ರರಂಗದ ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಯುವ ರಾಜ್‌ಕುಮಾರ್ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಈ ವಿಚಾರದ ಬಗ್ಗೆ ನಟ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿವೋರ್ಸ್ ಬಗ್ಗೆ ನನಗೆ ಸತ್ಯವಾಗಲೂ ಗೊತ್ತಿಲ್ಲ. ಏನುಂತ ಗೊತ್ತಿಲ್ಲ. ನನಗೂ ಈಗಲೇ ಗೊತ್ತಾಗಿರುವುದು. ನಾವು ಗೊತ್ತಿದ್ದು ಮಾತನಾಡಬೇಕು. ಗೊತ್ತಿಲ್ಲದೆ ಏನೂ ಮಾತನಾಡಬಾರದು. ಅದು ಅವರ ಬದುಕು ಎಂದಿದ್ದಾರೆ.

ದೊಡ್ಮನೆಯಲ್ಲಿ ದಾಂಪತ್ಯ ಕಲಹ, ನಟ ಯುವರಾಜ್‌ - ಶ್ರೀದೇವಿ ಬದುಕಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ!

ಇನ್ನು ಪತಿಯಿಂದ ವಿಚ್ಚೇದನ ಕೇಳಿ ನೋಟಿಸ್‌ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀದೇವಿ ಬೈರಪ್ಪ "ಏನಾಗಿದೆ ಅನ್ನೋ ವಿಷಯ ಚಿತ್ರರಂಗ ಹಾಗೂ ಮಾಧ್ಯಮದವರಲ್ಲಿ ಅನೇಕರಿಗೆ ಗೊತ್ತಿದೆ. ನಾನು ಈಗಾಗಲೇ ಲೀಗಲ್ ನೋಟೀಸ್‌ ಗೆ ಉತ್ತರ ಕೊಟ್ಟಿದ್ದೇನೆ ವಿಚ್ಚೇದನದ ಅರ್ಜಿಯ ನೋಟೀಸ್‌ ಇನ್ನೂ ನನ್ನನ್ನು ತಲುಪಿಲ್ಲ ನನಗೆ ಸಿಕ್ಕಾಗ ಅದಕ್ಕೆ ಕೋರ್ಟಿನಲ್ಲಿಯೇ ಉತ್ತರ ಕೊಡುತ್ತೇನೆ. ಸದ್ಯಕ್ಕೆ ಬೇರೇನೂ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ" ಎಂದು ಸುವರ್ಣನ್ಯೂಸ್ ಗೆ ರಿಯಾಕ್ಷನ್ ಕೊಟ್ಟಿದ್ದಾರೆ.

ನಮ್ಮ ವಿಚ್ಚೇದನಕ್ಕೆ ಮೂರನೇ ವ್ಯಕ್ತಿ ಕಾರಣವಲ್ಲ, ಸೃಜನ್ ಹೆಸರು ಹೇಳದೆ ಸ್ಪಷ್ಟಪಡಿಸಿದ ನಿವೇದಿತಾ-ಚಂದನ್

ಇನ್ನು ಶ್ರೀದೇವಿ ಅವರ ತಂದೆ ಬೈರಪ್ಪ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಯುವ ನನ್ನ ಜೊತೆ ಈ ಬಗ್ಗೆ ಏನೂ ಮಾತಾಡಿಲ್ಲ. ಈವರೆಗೂ ನನ್ನ ಬಳಿ ಬಂದಿಲ್ಲ ಎಂದಿದ್ದಾರೆ. ನನ್ನ ಮಗಳಿಕೆ ಕಿರುಕುಳ ಆಗಿದ್ದರೂ ಸಹ ಆಕೆ ನಾನು ನೊಂದುಕೊಳ್ಳುತ್ತೇನೆ ಎಂದು ಹೇಳಿಲ್ಲ ಎಂದಿದ್ದಾರೆ.