Asianet Suvarna News Asianet Suvarna News

ಪ್ರಭಾಸ್ ಕಲ್ಕಿ ಚಿತ್ರದ 6 ಟನ್ ತೂಕದ ಬುಜ್ಜಿ ಕಾರು ಡ್ರೈವ್ ಮಾಡಿದ ರಿಷಬ್ ಶೆಟ್ಟಿ, ವೈರಲ್ ವಿಡಿಯೋ!

ಕಾಂತಾರ 1 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ ರಿಷಬ್ ಶೆಟ್ಟಿ ಇದರ ನಡುವೆ ಪ್ರಭಾಸ್ ಅಭಿನಯದ ಕಲ್ಕಿ ಚಿತ್ರಕ್ಕಾಗಿ ನಿರ್ಮಿಸಿರುವ ಬುಜ್ಜಿ ಕಾರು ಡ್ರೈವಿಂಗ್ ಮಾಡಿದ್ದಾರೆ. ಬರೋಬ್ಬರಿ 6 ಟನ್ ತೂಕ, ಊಹೆಗೂ ನಿಲುಕದ ವಿನ್ಯಾಸದ ಈ ಕಾರನ್ನು ರಿಷಬ್ ಶೆಟ್ಟಿ ಡ್ರೈವ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 

Actor Rishab shetty drive Prabhas kalki 2898AD movie 6 ton weight Bujji car ckm
Author
First Published Jun 25, 2024, 11:35 AM IST

ಹೈದರಾಬಾದ್(ಜೂ.25) ನಟ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಬುಜ್ಜಿ ಕಾರು ಡ್ರೈವ್ ಮಾಡುವ ಮೂಲಕ ಭಾರಿ ಸದ್ದು ಮಾಡಿದ್ದಾರೆ. ಕಾಂತಾರ 1 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ರಿಷಬ್ ಶೆಟ್ಟಿ, ಇದರ ನಡುವೆ ಪ್ರಭಾಸ್ ಅಭಿನಯದ ಕಲ್ಕಿ ಚಿತ್ರದ ಬುಜ್ಜಿ ಕಾರನ್ನು ಡ್ರೈವ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಈ ಕಾರನ್ನು ನಟ ನಾಗ ಚೈತನ್ಯ, ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಹಲವರು ಡ್ರೈವ್ ಮಾಡಿ ಸಂಭ್ರಮಿಸಿದ್ದರು. ಈ ಬಾರಿ ರಿಷಬ್ ಶೆಟ್ಟಿ ಜಬರ್ದಸ್ತಾಗಿ ಕಾರು ಡ್ರೈವ್ ಮಾಡಿದ್ದಾರೆ.

ಕಲ್ಕಿ 2898 ಎಡಿ ಚಿತ್ರಕ್ಕಾಗಿ ಎಂಜಿನೀಯರ್ಸ್ ವಿಶೇಷವಾಗಿ ನಿರ್ಮಿಸಿದ ಕಾರು ಇದು. ಮೂರು ಚಕ್ರದ ಕಾರು ಇದಾಗಿದ್ದು, ಬರೋಬ್ಬರಿ 6 ಟನ್ ತೂಕ ಹೊಂದಿದೆ.  ಈ ಕಾರನ್ನು ಎಂಜಿನೀಯರ್ಸ್ ಮಾರ್ವಲಸ್ ಎಂದೇ ಕರೆಯುತ್ತಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಕಲ್ಕಿ ಚಿತ್ರತಂಡ ರಿಷಬ್ ಶೆಟ್ಟಿಗಾಗಿ ಕುಂದಾಪುರದಲ್ಲಿ ಬುಜ್ಜಿ ಕಾರು ಡ್ರೈವಿಂಗ್ ಅವಕಾಶ ಮಾಡಿಕೊಟ್ಟಿದೆ.

ಪ್ರಭಾಸ್ ಕಲ್ಕಿ ಚಿತ್ರದ ಬುಜ್ಜಿ ಡ್ರೈವ್ ಮಾಡಿದ ನಾಗ ಚೈತನ್ಯ, 6 ಟನ್ ತೂಕದ ಕಾರಿನ ವಿಶೇಷತೆ ಏನು?

ರಿಷಬ್ ಶೆಟ್ಟಿಯನ್ನು ಸ್ಥಳೀಯ ಸಾಂಸ್ಕೃತಿಕ ವೈವಿದ್ಯತೆಯಿಂದ ಸ್ವಾಗತಿಸಿದ ಚಿತ್ರತಂಡ, ಮೈದಾನದಲ್ಲಿ ಕಾರು ಡ್ರೈವಿಂಗ್ ಮಾಡಲು ಅವಕಾಶ ನೀಡಿತ್ತು. ಅನುಭವಿ ಚಾಲಕರ ಮಾರ್ಗದರ್ಶನದಲ್ಲಿ ರಿಷಬ್ ಶೆಟ್ಟಿ ಈ ಕಾರು ಡ್ರೈವಿಂಗ್ ಮಾಡಿದ್ದಾರೆ. ವೇಗವಾಗಿ ಕಾರು ಒಡಿಸಿದ್ದಾರೆ. ಕಾರಿನ ಮುಂಭಾಗದಲ್ಲಿ 2 ಚಕ್ರಗಳಿದ್ದರೆ, ಹಿಂಭಾಗದಲ್ಲಿ ಒಂದು ಚಕ್ರವಿದೆ. ಆದರೆ ಬೃಹತ್ ಗಾತ್ರದ ಚಕ್ರಗಳನ್ನು ಬಳಸಲಾಗಿದೆ. ಪವರ್‌ಫುಲ್ ಎಂಜಿನ್ ಬಳಸಲಾಗಿದೆ. ಹಾಲಿವುಡ್ ಚಿತ್ರಗಳಲ್ಲಿರುವಂತೆ ಈ ಕಾರು ಗೋಚರಿಸುತ್ತದೆ.

 

 

ರಿಷಬ್ ಶೆಟ್ಟಿ ತಮ್ಮ ಮಗನ ಜೊತೆ ಬುಜ್ಜಿ ಕಾರು ಡ್ರೈವ್ ಮಾಡಲು ತೆರಳಿದ್ದಾರೆ. ಬುಜ್ಜಿ ಕಾರು ಡ್ರೈವ್ ಮಾಡುವಾಗ ಮಾತ್ರ ತಜ್ಞರ ಜೊತೆ ತೆರಳಿದ್ದಾರೆ. ಅನುಭವಿ ಚಾಲಕರ ಸೂಚನೆಯಂತೆ ಕಾರು ಡ್ರೈವಿಂಗ್ ಮಾಡಿದ್ದರೆ. ಮೈದಾನದಲ್ಲಿ ಅತೀ ವೇಗವಾಗಿ ರೇಸ್ ಕಾರು ರೀತಿ ರಿಷಬ್ ಕಾರು ಚಲಾಯಿಸಿದ್ದಾರೆ. ಬಳಿಕ ಪ್ರಭಾಸ್ ಅಭಿನಯದ ಕಲ್ಕಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

6 ಟನ್ ತೂಕದ 'ಬುಜ್ಜಿ' ರೈಡ್‌ ಮಾಡಿದ ಆನಂದ್ ಮಹೀಂದ್ರ: ವೀಡಿಯೋ ಸಖತ್ ವೈರಲ್

ಇತ್ತೀಚೆಗೆ ಈ ಕಾರನ್ನು ನಟ ನಾಗಚೈತನ್ಯ ಡ್ರೈವ್ ಮಾಡಿದ್ದರು. ಮಹೀಂದ್ರ ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರ ಕೂಡ ಈ ಕಾರು ಡ್ರೈವ್ ಮಾಡಿ ಅಚ್ಚರಿಪಟ್ಟಿದ್ದರು. ವಿಶೇಷ ಕಾರಿನ ಡ್ರೈವ್‌ಗೆ ಸಂತಸ ವ್ಯಕ್ತಪಡಿಸಿದ್ದರು. 

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದರೆ, ಈ ಚಿತ್ರದಲ್ಲಿ ಬಾಲಿವುಡ್ ತಾರಾಬಳಗವೂ ಇದೆ. 
 

Latest Videos
Follow Us:
Download App:
  • android
  • ios