ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿಯ ಡಾ.ವಿಠ್ಠಲ್ ರಾವ್ ಮನ ಕದ್ದವರು ಇವರು...!
ಹಾಸ್ಯ ಧಾರಾವಾಹಿ ಎಂದರೆ ಸಿಲ್ಲಿ ಲಲ್ಲಿ ಎನ್ನುವಷ್ಟು ಖ್ಯಾತವಾಗಿತ್ತು. ಅದರಲ್ಲಿಯೂ ಡಾ. ವಿಠಲ್ ರಾವ್ ಪಾತ್ರ ಮಾಡಿದ ರವಿಶಂಕರ್ ಅಪಾರ ಅಭಿಮಾನಿಗಳನ್ನು ಹೊಂದಿದವರು. ಇವರ ಪತ್ನಿ ಮಂಜುಳಾ -ಗುರುರಾಜ್ ಮಗಳು ಸಂಗೀತಾ. ಒಳಗೆ ಸೇರಿದರೆ ಗುಂಡೆಂದು ಹಾಡಿ ತಮ್ಮ ಇಂಪಾದ ಕಂಠದಿಂದ ಖ್ಯಾತರಾದ ಮಂಜುಳಾ ಗುರುರಾಜ್ ಮಗಳ ಫ್ಯಾಮಿಲಿ ಫೋಟೋಗಳಿವು.....
ಮಂಜುಳಾ ಗುರುರಾಜ್ ಪುತ್ರಿ ಸಂಗೀತಾ.
ಸಂಗೀತಾ ಹಾಗೂ ರವಿ ಶಂಕರ್ ಮೊದಲು ಭೇಟಿಯಾಗಿದ್ದು ಬಾಲಕೃಷ್ಣ ಸ್ಟೋಡಿಯೋದಲ್ಲಿ.
'ಮೊದಲು ಮದುವೆ ಆಗೋಣ' ಎಂದು ಹೇಳಿದ್ದೇ ಸಂಗೀತಾವಂತೆ.
ರವಿ ಶಂಕರ್ ಆಗಿನ್ನೂ ಅಷ್ಟು ಫೇಮಸ್ ಆಗಿರದ ಶ್ರೀ ಸಾಮಾನ್ಯ.
ಇಬ್ಬರು ಒಂದೇ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದರು. ಗುರುರಾಜ್ ಆರ್ಕೆಸ್ಟ್ರಾ ಟ್ರೂಪಿನಲ್ಲಿ ಹಾಡುತ್ತಿದ್ದರು.
ಪೋಷಕರ ವಿರೋಧದ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಎರಡು ಮಕ್ಕಳಿವೆ.
ಕುಟುಂಬ ಸಂತೋಷ ಕಾಪಾಡುವುದು ಸಂಗೀತಾ ಎನ್ನುತ್ತಾರೆ ರವಿಶಂಕರ್.
ರವಿ ಶಂಕರ್ ತಮ್ಮ ಪರ್ಸನಲ್ ವಿಚಾರವನ್ನು ತಾಯಿ ಹಾಗೂ ಸಂಗೀತಾ ಜೊತೆ ಮಾತ್ರ ಹಂಚಿಕೊಳ್ಳುತ್ತಾರಂತೆ.
ಮದುವೆಯಾದ ನಂತರವೂ ಇಬ್ಬರು ಫ್ರೆಂಡ್ಸ್ ರೀತಿ ಇರುವುದೇ ಇವರ ಆದರ್ಶ ದಾಂಪತ್ಯದ ಗುಟ್ಟಂತೆ.
ಸುಮಾರು 30ಕ್ಕು ಹೆಚ್ಚು ಚಿತ್ರಗಳ ಹಿನ್ನೆಲೆ ಗಾಯನ ಹಾಡಿದ್ದಾರೆ ಸಂಗೀತಾ.