777 ಚಾರ್ಲಿ-2 ಬರುತ್ತಾ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು

ಮಾಧ್ಯಮದ ಜೊತೆ ಮಾತನಾಡಿದ ಸಿಂಪಲ್ ಸ್ಟಾರ್, 'ಚಾರ್ಲಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯಕ್ಕಂತು ಚಾರ್ಲಿ 2 ಇಲ್ಲ. ನನ್ನ ಸದ್ಯದ ಕಮೀಟ್ ಮೆಂಟ್ಸ್ ಮುಗಿಬೇಕು. ಚಾರ್ಲಿ ಕ್ಲೈಮ್ಯಾಕ್ಸ್ ಸೀನ್ ಒಂದೇ ಟೇಕ್ ನಲ್ಲಿ ಮಾಡಿದ್ದು. ಈ ಸಿನಿಮಾ ಹಾಗೂ ಅವನೇ ಶ್ರೀಮನ್ನಾನಾರಾಯಣ ಒಂದೇ ಟೈಮ್ ನಲ್ಲಿ ಮಾಡಿದ್ದು ಹೀಗಾಗಿ ಎರಡು ಕೂಡ ಸಾಕಷ್ಟು ಟೈಮ್ ತೆಗೆದುಕೊಳ್ತು. ಬಾಬಿಸಿಂಹ ಕಾವೇರಿ ನೀರಿನ ಬಗ್ಗೆ ಡೈಲಾಗ್ ಏನಿದೆ ಅದನ್ನ ಅವ್ರೆ ಹೇಳಿದ್ದು ಹೀಗೊಂದು ಡೈಲಾಗ್ ಇಡೋಣ ಅಂತ'ಎಂದು ಹೇಳಿದ್ದಾರೆ. 
 

Actor Rakshith shetty talks about 777 charlie and sequel sgk

ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಸದ್ಯ 777 ಚಾರ್ಲಿ(777 Charlie) ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಸದ್ಯ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು ಅನೇಕ ಕಡೆ ಪ್ರೀಮಿಯರ್ ಶೋ ಕೂಡ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾರ್ಲಿ ಈಗಾಗಲೇ ಟ್ರೈಲರ್ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದು ಬಿಡುಗಡೆಗೆ ದಿನಗಣಗೆ ಪ್ರಾರಂಭವಾಗಿದೆ. ಮನುಷ್ಯ ಮತ್ತು ನಾಯಿಯ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ ಚಾರ್ಲಿಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಂದಹಾಗೆ ಈಗಾಗಲೇ ದೇಶದ ಅನೇಕ ಕಡೆ ಪ್ರೀಮಿಯರ್ ಮಾಡಲಾಗಿದೆ. ಎಲ್ಲಾ ಕಡೆಯೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಅಭಿಮಾನಿಗಳು ಸಹ ಚಾರ್ಲಿಯನ್ನು ಹಾಡಿಹೊಗಳುತ್ತಿದ್ದಾರೆ. ಇತ್ತೀಚಿಗಷ್ಟೆ ಕರ್ನಾಟಕದಲ್ಲಿ ಪ್ರೆಸ್ ಶೋ ಮಾಡಲಾಗಿದ್ದು ನಟ ರಕ್ಷಿತ್ ಶೆಟ್ಟಿ ಕೂಡ ಹಾಜರಿದ್ದರು. 

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಿಂಪಲ್ ಸ್ಟಾರ್, 'ಚಾರ್ಲಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದ್ಯಕ್ಕಂತು ಚಾರ್ಲಿ 2 ಇಲ್ಲ. ನನ್ನ ಸದ್ಯದ ಕಮೀಟ್ ಮೆಂಟ್ಸ್ ಮುಗಿಬೇಕು. ಚಾರ್ಲಿ ಕ್ಲೈಮ್ಯಾಕ್ಸ್ ಸೀನ್ ಒಂದೇ ಟೇಕ್ ನಲ್ಲಿ ಮಾಡಿದ್ದು. ಈ ಸಿನಿಮಾ ಹಾಗೂ ಅವನೇ ಶ್ರೀಮನ್ನಾನಾರಾಯಣ ಒಂದೇ ಟೈಮ್ ನಲ್ಲಿ ಮಾಡಿದ್ದು ಹೀಗಾಗಿ ಎರಡು ಕೂಡ ಸಾಕಷ್ಟು ಟೈಮ್ ತೆಗೆದುಕೊಳ್ತು. ಬಾಬಿಸಿಂಹ ಕಾವೇರಿ ನೀರಿನ ಬಗ್ಗೆ ಡೈಲಾಗ್ ಏನಿದೆ ಅದನ್ನ ಅವ್ರೆ ಹೇಳಿದ್ದು ಹೀಗೊಂದು ಡೈಲಾಗ್ ಇಡೋಣ ಅಂತ'ಎಂದು ಹೇಳಿದ್ದಾರೆ. 

ರಕ್ಷಿತ್ ಅಂಥ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು; ಸಂತೋಷ್ ಆನಂದ್ ರಾಮ್ ಟಾಂಗ್ ಕೊಟ್ಟಿದ್ದು ಯಾರಿಗೆ?

'ಚಾರ್ಲಿ ಸಿನಿಮಾಗೆ ಏನೇ ಅವಾರ್ಡ್ ಬಂದ್ರು ಅದು ಚಾರ್ಲಿಗೆ ಹೋಗಬೇಕು. ಯಾಕಂದ್ರೆ ಇದು ಅವಳ ಕೊನೆಯ ಸಿನಿಮಾ. ಚಾರ್ಲಿ ನಮ್ಮ ಟೀಮ್ ಗೆ ಬಂದು ಸೇರಿದ ಮೇಲೆ ಸಾಕಷ್ಟು ಬದಲಾವಣೆಗಳಾಗಿದೆ. ಈ ಸಿನಿಮಾದಿಂದ ಬಂದ ಹಣದಲ್ಲಿ ಸ್ವಲ್ಪ ಡಾಗ್ ರೆಸ್ಕ್ಯೂ ಟೀಮ್ ಗೆ ನೀಡ್ತಿವಿ.  ಈಗಾಗಲೇ ಚಾರ್ಲಿ ಸಿನಿಮಾಗೆ ಹಾಕಿದ ಬಂಡವಾಳ ವಾಪಾಸ್ ಕೊಟ್ಟಿದೆ'ಎಂದು ಹೇಳಿದ್ದಾರೆ. 

ನಮ್ಮನೆ ನಾಯಿಯನ್ನು ಇಂಜೆಕ್ಷನ್ ಕೊಟ್ಟು ಸಾಯಿಸಿದ್ರು; ನೋವಿನ ಘಟನೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

ಎಲ್ಲಾ ಕಡೆಯಿಂದನೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಚಾರ್ಲಿ ಮತ್ತು ಧರ್ಮನ ಜರ್ನಿ ನೋಡಲು ನೋಡಲು   ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಪ್ರೀಮಿಯರ್ ಶೋನಲ್ಲಿ ಸಿಕ್ಕಿದ ಪ್ರತಿಕ್ರಿಯೆ ಮೂಲಕ ಭಾರಿ ಹೈಪ್ ಕ್ರಿಯೇಟ್ ಮಾಡಿರುವ 777 ಚಾರ್ಲಿ ಜೂನ್ 10ರಂದು ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡುತ್ತಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಓಪನ್ ಮಾಡಿದ್ದು ಟಿಕೆಟ್ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಜೂನ್ 9ರಂದೆ 100 ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ಆಗುತ್ತಿದೆ. ಇದೇ ಮೊದಲ ಬಾರಿಗೆ ಇಷ್ಟು ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರೀಮಿಯರ್ ಆಗುತ್ತಿದೆ.

Latest Videos
Follow Us:
Download App:
  • android
  • ios