ನಟ ಪ್ರಮೋದ್ ಶೆಟ್ಟಿ ಮತ್ತು ನಟಿ ಸುಪ್ರಿತಾ ಕುಟುಂಬಕ್ಕೆ ನವೆಂಬರ್ 20 ರಂದು ಮುದ್ದು ಮಗ ಆಗಮಿಸಿದ್ದಾನೆ. ಕೆಲ ದಿನಗಳ ಹಿಂದೆ ನಡೆದ ನಾಮಕರಣದಲ್ಲಿ ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು.

ಶೆಟ್ರು ಮನೆಗೆ ಬಂದ ಕೃಷ್ಣ; ತಾಯಿಯಾದ 'ಕುಲವಧು' ವಿಲನ್!

ತೊಟ್ಟಿಲು ಶಾಸ್ತ್ರ ಮತ್ತು ನಾಮಕರಣದಲ್ಲಿ ನಟಿ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದು ಗೆಳೆಯನ ಮಗುವನ್ನು ಎತ್ತಾಡಿ-ಮುದ್ದಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಹಿಂದೆ ನಡೆದ ಸುಪ್ರಿತಾ ಸೀಮಂತ ಕಾರ್ಯಕ್ರಮದಲ್ಲೂ ಭಾಗಿಯಾಗಿ ರಕ್ಷಿತ್ ಶುಭ ಹಾರೈಸಿದ್ದರು. ಪ್ರಮೋದ್ ಮತ್ತು ಸುಪ್ರಿತಾಗೆ ಈಗಾಗಲೇ ಒಬ್ಬಳು ಹೆಣ್ಣು ಮಗಳಿದ್ದಾಳೆ. 

ರಕ್ಷಿತ್ ಶೆಟ್ಟಿ ಲೈಫಲ್ಲಿ ಬಂದ್ಲು ಮತ್ತೊಂದು ಸುಂದರಿ; ಫ್ಯಾನ್ಸ್ ರಿವೀಲ್‌ ಮಾಡಿದ್ರು ಲವ್ ಕಹಾನಿ!

ಪ್ರಮೋದ್‌ ನೋಡಿದಾಕ್ಷಣ ಜ್ಞಾಪಕ ಬರುವುದು 'ಕಿರಿಕ್ ಪಾರ್ಟಿ'ಯಲ್ಲಿ ಕುಡುಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.  ಇನ್ನು ಸುಪ್ರಿತಾ ಕಿರುತೆರೆಯ ವಿಲನ್‌ ಎಂದೇ ಸುಪ್ರಸಿದ್ಧವಾಗಿದ್ದಾರೆ.  ಇನ್ನು ರಕ್ಷಿತ್, ರಿಷಬ್ ಮತ್ತು ಪ್ರಮೋದ್‌ ಶೆಟ್ಟಿ ಅವರು ಉತ್ತಮ ಸ್ನೇಹ ಹೊಂದಿದ್ದು ಬಹುತೇಕ ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.