'ಕುಲವಧು' ಧಾರಾವಾಹಿಯಲ್ಲಿ ವಿಲನ್ ಆಗಿ ಸಿಡಿಲೆಬ್ಬಿಸಿದ ಸುಪ್ರಿತಾ ಶೆಟ್ಟಿ ಹಾಗೂ ಕನ್ನಡ ಚಿತ್ರರಂಗದ ಮಾಸ್ಟರ್ ಆ್ಯಕ್ಟರ್ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿಯಾಗಿದ್ದ 'ಕುಲವಧು'ನಲ್ಲಿ ಕಾಂಚನಾ ಎಂಬ ವಿಲನ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಸುಪ್ರಿತಾ ಶೆಟ್ಟಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಗಳಿದ್ದು ಕೆಲ ತಿಂಗಳ ಹಿಂದೆ ಆಪ್ತರೊಂದಿಗೆ ಸಿಂಪಲ್ ಆಗಿ ಸೀಮಂತ ಶಾಸ್ತ್ರಿ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್‌ ಬ್ಯಾಗ್‌ನ ರಹಸ್ಯ ಬಯಲು!

ಸುಪ್ರಿತಾ ಅವರ ಪತಿ ಪ್ರಮೋದ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹಲವಾರು ಚಿತ್ರಗಳಲ್ಲಿ ನಟಿಸಿರುವ ಪ್ರಮೋದ್‌ ಹೆಚ್ಚು ಹೆಸರು ಮಾಡಿದ್ದು 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ. ಆನಂತರ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ'ಯಲ್ಲಿ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಪ್ರಿತಾ 6 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದು 2006 ರಲ್ಲಿ ಕಿರುತೆರೆ ಜರ್ನಿ ಶುರು ಮಾಡಿ ಇದುವರೆಗೂ 60 ಧಾರಾಹಿಗಳಲ್ಲಿ ನಟಿಸಿದ್ದಾರೆ.

View post on Instagram