Asianet Suvarna News

ಹೊಂಬಾಳೆ ಫಿಲಂಸ್‌ ಚಿತ್ರ 'ರಿಚರ್ಡ್‌ ಆಂಟನಿ'ಗೆ ರಕ್ಷಿತ್ ಶೆಟ್ಟಿ ಡೈರಕ್ಟರ್!

'ಉಳಿದವರು ಕಂಡಂತೆ' ಚಿತ್ರದಲ್ಲಿ ಉತ್ತರಿಸದೇ ಉಳಿದಿದ್ದ ಪ್ರಶ್ನೆಗಳಿಗೆ ಈ ಚಿತ್ರದಲ್ಲಿದೆ ಉತ್ತರ. ಹೊಂಬಾಳೆ ಫಿಲಂಸ್‌ನ 10ನೇ ಚಿತ್ರ. 

Actor Rakshit Shetty makes a directional comeback with Hombale films Richard Anthony vcs
Author
Bangalore, First Published Jul 11, 2021, 3:38 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಕ ಸ್ಥಾನಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್‌ರ 10ನೇ ಸಿನಿಮಾ ರಿಚರ್ಡ್ ಆ್ಯಂಟನಿ ನಿರ್ದೇಶಿಸಿ, ಅಭಿನಯಿಸುತ್ತಿದ್ದಾರೆ. 

'ಹೊಂಬಾಳೆ ಫಿಲಂಸ್‌ಗೆ ಒಂದು ಹರುಷದ ದಿನ. ನಮ್ಮ 10ನೇ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುತ್ತಿದ್ದೇವೆ. ಚಿತ್ರಕ್ಕೆ ರಿಚರ್ಡ್ ಆ್ಯಂಟನಿ ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿಜಯ್ ಕಿರಗಂದೂರ್‌ ಅವರು ಹೊಂಬಾಳೆ ಫಿಲಂಸ್‌ ಬ್ಯಾನರಿನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಹಾಗೂ ಕರಮ್‌ ಚಾವ್ಲಾ ಅವರು ಛಾಯಾಗ್ರಹಣವಿರುತ್ತದೆ,' ಎಂದು ಯೂಟ್ಯೂಬಲ್ಲಿ ಶಿರ್ಷಿಕೆ ಅನಾವರಣಗೊಳಿಸಿದ ಹೊಂಬಾಳಿ ತಂಡ  ತಂಡ ತಿಳಿಸಿದೆ.

ಶ್ರೀಮನ್ನಾರಾಯಣನ ಲೆಕ್ಕ ಚುಕ್ತಾ ಮಾಡಿದ ರಕ್ಷಿತ್ ಶೆಟ್ಟಿ! 

'ಉಳಿದವರು ಕಂಡಂತೆ ಚಿತ್ರದ ಎರಡನೇ ಸೀಕ್ವೆನ್ಸ್ ಆಗಿ 'ರಿಚರ್ಡ್ ಆಂಟನಿ, ಬರಲಿದೆ.  ಕೊಂಚ ಡಿಫರೆಂಟ್ ಸ್ಪಾರ್ಕಲ್ ಇರಲಿದೆ. ಹಲವು ವರ್ಷಗಳ ಹಿಂದೆ ನಾನು ಉಳಿದವರು ಕಂಡಂತೆ ಚಿತ್ರಕಥೆ ಬರೆಯುವಾಗ ಇದನ್ನೂ ಒಂದು ಸೀಕ್ವೆನ್ಸ್ ಆಗಿ ಅಥವಾ ಮುಂದಿನ ಭಾಗವಾಗಿ ತೆರೆಯುವ ಯೋಚನೆ ಇರಲಿಲ್ಲ. ಅನೇಕರಿಗೆ ರಿಚರ್ಡ್ ಪಾತ್ರ ಇಷ್ಟವಾಗಿತ್ತು. ಅವನ ಬಗ್ಗೆ ಕುತೂಹಲವೂ ಹೆಚ್ಚಿತ್ತು. ಈಗ ಇದರ ಕಥೆ ಬರೆಯುವಾಗ ಎಲ್ಲೋ ಇಡೀ ಯೂನಿವರ್ಸ್ ಸಹಕರಿಸುತ್ತಿದೆ ಎನ್ನಿಸುತ್ತದೆ. 'When the tide brings back the dead, the stores blees red. ಹೊಂಬಾಳೆ ಫಿಲಂಸ್‌ ಜೊತೆ ಕೈ ಜೋಡಿಸುವುದಕ್ಕೆ ಖುಷಿಯಾಗುತ್ತಿದೆ. ಈ ಸಂಬಂಧ ವರ್ಷಗಳ ಕಾಲ ಹೀಗೆ ಮುಂದುವರೆಯಲಿ,' ಎಂದು ರಿಷಬ್ ಹೇಳಿದ್ದಾರೆ.

 

Follow Us:
Download App:
  • android
  • ios