Asianet Suvarna News Asianet Suvarna News

ರಕ್ಷಿತ್ ಶೆಟ್ಟಿ ಯಾವ ರಾಜ್ಯದಲ್ಲಿ ಏನೇನು ಹೇಳಿದರು?

ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರೆಸ್‌ಗಳನ್ನು ಆಯೋಜಿಸಿದ್ದು, ಒಂದೊಂದು ದಿನ ಒಂದೊಂದು ರಾಜ್ಯದಲ್ಲಿ ಚಿತ್ರದ ಪ್ರಚಾರದ ಗೋಷ್ಟಿಗಳನ್ನು ಮಾಡುತ್ತಿದೆ.ಈ ಹಿನ್ನೆಲೆಯಲ್ಲಿ ಯಾವ ಯಾವ ರಾಜ್ಯದಲ್ಲಿ ನಟ ರಕ್ಷಿತ್ ಶೆಟ್ಟಿ ಏನೆಲ್ಲ ಮಾತನಾಡಿದ್ದಾರೆ ಎನ್ನುವ ಹೈಲೈಟ್ಸ್ ಇಲ್ಲಿವೆ.

 

Actor Rakshit Shetty in Avane Srimannarayana promotions
Author
Bangalore, First Published Dec 25, 2019, 9:42 AM IST
  • Facebook
  • Twitter
  • Whatsapp

ಚೆನ್ನೈ: ನಾನು ಮೊದಲಿನಿಂದಲೂ ತಮಿಳು ಚಿತ್ರಗಳನ್ನು ನೋಡಿಕೊಂಡು ಬಂದಿರುವೆ. ನಿರ್ದೇಶಕರಾಗಿ ಕೆ ಬಾಲಚಂದರ್ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದವರು. ನಟ ಕಮಲ್ ಹಾಸನ್ ಎಂದರೆ ನನಗೆ ಇಷ್ಟ. ಅವರ ಚಿತ್ರಗಳನ್ನು ನಾನು ತುಂಬಾ ನೋಡಿದ್ದೇನೆ.

ಈಗ ನನ್ನ ಸಿನಿಮಾ ನಿಮ್ಮ ಊರಿಗೆ ಬರುತ್ತಿದೆ. ಒಬ್ಬ ಅಪ್ಪಟ ಕಲಾವಿದನನ್ನು ನೀವು ಸ್ವೀಕರಿಸುತ್ತೀರೆಂಬ ನಂಬಿಕೆ ಮತ್ತು ಭರವಸೆ ಇದೆ. ಜ.೩ರಂದು ಚಿತ್ರ ತೆರೆಗೆ ಬರುತ್ತಿದೆ. ಸೀನ್ ಸ್ಕ್ರೀನ್ ಮೀಡಿಯಾ ಆಂಡ್ ಎಂಟರ್‌ಟೈನ್ ಮೆಂಟ್ ಮೂಲಕ ಸಿನಿಮಾ ಬಿಡುಗಡೆ ಆಗುತ್ತಿದೆ.

ಮನೆಯೊಳಗಿದ್ದವರಿಗೆ ಶ್ರೀಮನ್ನಾರಾಯಣ ಸ್ಟೆಪ್ ಹೇಗೆ ಗೊತ್ತಾಯ್ತು, ಏನಿದು ಜಾದೂ?

ಹೈದರಾಬಾದ್: ನಾನು ಉಡುಪಿ ಎಂಬ ಸಣ್ಣ ಸಿಟಿಯಿಂದ ಬಂದವನು. ಅಲ್ಲಿ ಒಂದು ಇಂಜಿನಿಯರ್ ಕಾಲೇಜಿದೆ. ಅಲ್ಲಿ ನನಗೊಬ್ಬ ಫ್ರೆಂಡ್ ಇದ್ದ ವಂಶಿ ಅಂತ. ವೈಜಾಗ್‌ನಿಂದ ಬಂದವನು. ನಾವಿಬ್ಬರು ಒಟ್ಟಿಗೆ ಓದಿದವರು. ಅವನಿಗೆ ಫೀಲ್ಮ್ ಮೇಕರ್ ಆಗಬೇಕೆಂಬ ಆಸೆ ಇತ್ತು. ನನಗೆ ನಟ ಆಗುವ ಕನಸು. ನನ್ನ ಎಲ್ಲ ಕನಸುಗಳನ್ನ ಅವನೊಂದಿಗೆ ಹಂಚಿಕೊಳ್ಳುತ್ತಿದ್ದೆ.

ಇಂಜಿನಿಯರಿಂಗ್ ಮುಗಿದ ಮೇಲೆ ಒಟ್ಟಿಗೆ ಕೆಲಸಕ್ಕೆ ಸೇರಿಕೊಂಡ್ವಿ. ಒಂದಿಷ್ಟು ಸಾಕ್ಷ್ಯ ಚಿತ್ರಗಳನ್ನ ಮಾಡಿದ್ವಿ. ನಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ನಾಗಾರ್ಜುನ, ಚಿರಂಜೀವಿ,
ವೆಂಕಟೇಶ್ ಅವರ ಸಿನಿಮಾಗಳನ್ನ ನೋಡಿ ದ್ದೇನೆ. ನಾನು ವಂಶಿಗೆ ಕೇಳ್ತಿದ್ದೆ ‘ನಿಮಗೆ ಸಿನಿಮಾಗಳೆಂದರೆ ಅಷ್ಟು ಆಸಕ್ತಿನಾ’ ಅಂತ. ಅದಕ್ಕೆ ಅವನು ಹೇಳಿದ್ದು ‘ಆ ಆಸಕ್ತಿ ನನ್ನೊಬ್ಬನದಲ್ಲ ನಾನು ಬಂದ ನಾಡಿನದ್ದು. ನಾವು ಸಿನಿಮಾನ ಹಬ್ಬದ ರೀತಿ ನೋಡುತ್ತೇವೆ. ನಾವು ಪ್ರತಿ ವಾರನೂ ತಪ್ಪದೆ ಸಿನೆಮಾ ನೋಡ್ತೀವಿ’ ಎಂದಿದ್ದ. ಆವಾಗ ನನಗೆ ಸಿನಿಮಾ ಕಡೆಗೆ ಗಾಂಭೀರ್ಯತೆ ಹೆಚ್ಚಾಯ್ತು. ಸಿನೆಮಾ ಇಲ್ಲಿ ಒಂದು ಸಂಸ್ಕೃತಿ. ನಾನು ನನ್ನ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ತೋರಿಸ್ಬೇಕು, ನನ್ನ ನಟನೆಯ ಚಿತ್ರವನ್ನೂ ಹಬ್ಬದಂತೆ ಸ್ವೀಕರಿಸುತ್ತೀರಿ ಎನ್ನುವ ಆಸೆಯೊಂದಿಗೆ ಇಲ್ಲಿಗೆ ಬಂದಿರುವೆ. ಜನವರಿ 1 ರಂದು ಸಿನಿಮಾದ ತೆಲುಗು ವರ್ಷನ್ ಬಿಡುಗಡೆಯಾಗುತ್ತಿದೆ. ದಿಲ್ ರಾಜು ಅವರೇ ವಿತರಣೆ ಮಾಡುತ್ತಿದ್ದಾರೆ.

ಕೇರಳ: ಮಲಯಾಳಂ ಚಿತ್ರರಂಗದವರು ಒಳ್ಳೆಯ ಸಿನಿಮಾ ಮೇಕರ್‌ಗಳು ಮಾತ್ರವಲ್ಲ, ಒಳ್ಳೆಯ ಪ್ರೇಕ್ಷಕರು ಕೂಡ. ಅವರು ಒಳ್ಳೆಯ ಚಿತ್ರಗಳನ್ನು ನೋಡುವುದನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ. ಹಿಂದೊಮ್ಮೆ ನನ್ನ ಫ್ರೆಂಡ್ಸ್ ಕೇರಳಕ್ಕೆ ಬಂದಿದ್ದಾಗ ಯಾವ ಸಿನಿಮಾ ನೋಡಬೇಕು ಎಂದು ಆಟೋದಲ್ಲಿ ಕೂತು ಮಾತನಾಡಿಕೊಳ್ಳುತ್ತಿದ್ದಾಗ ಆಟೋದವನೇ ಒಂದು ಒಳ್ಳೆಯ ಸಿನಿಮಾ ಬಂದಿದೆ ನೋಡಿ ಎಂದು ಥಿಯೇಟರ್‌ಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರು. ಹೀಗಾಗಿ ಸಿನಿಮಾ ಮಂದಿಯಷ್ಟೇ ಪ್ರೇಕ್ಷಕರು ಕೂಡ ಸಿನಿಮಾಗಳನ್ನು ಅಭಿಮಾನಿಸಿ ಪ್ರೀತಿಸುತ್ತಾರೆ. ಅದೇ ಕಾರಣಕ್ಕೆ ನನ್ನ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಮಲಯಾಳಂನಲ್ಲೂ ಬಿಡುಗಡೆ ಮಾಡುತ್ತಿರುವೆ.

ನಾನೀಗ ಪೂರ್ಣ ಪ್ರಮಾಣದ ಕನ್ನಡತಿ: ಶಾನ್ವಿ

ಯಾಕೆಂದರೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಇದು. ನೀವು ನೋಡುತ್ತೀರಿ ಎನ್ನುವ ನಂಬಿಕೆ ಇದೆ. ಜನವರಿ 3 ರಂದು ಇಲ್ಲಿ ತೆರೆಗೆ ಬರುತ್ತಿದೆ. ಮೋಹನ್ ಲಾಲ್ ಅವರ ನಟನೆಯ ‘ಪುಲಿಮುರುಗನ್’ ಚಿತ್ರವನ್ನು ನಿರ್ಮಿಸಿದ್ದ ಟೋಮಿ ಚಾನ್ ಮುಲಕುಪ್ಪದಂ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

ಸದ್ದು ಮಾಡುತ್ತಲೇ ಬಂದ ರಕ್ಷಿತ್ ಹ್ಯಾಂಡ್ಸ್ ಅಪ್'..ಸಾಂಗ್ ಸಖತ್ತಾಗಿದೆ!

Follow Us:
Download App:
  • android
  • ios