ಟಾಪ್ ಟ್ರೆಂಡಿಂಗ್ ನಲ್ಲಿರುವ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಸಿನಿಮಾದ ಸಾಂಗ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದೆ. ಹ್ಯಾಂಡ್ಸ್ ಅಪ್ ಎಂದು ಹೇಳಿ ಸಖತ್ತಾಗೆ ರಕ್ಷಿತ್ ಶೆಟ್ಟಿ ಸ್ಟೆಪ್ ಹಾಕಿದ್ದಾರೆ.

ವಿಜಯ್ ಪ್ರಕಾಶ್ ಗಾಯನದ ಮಾಸ್ ಸಾಂಗ್ ಅಲ್ಲಿ ರಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ನಾಗಾರ್ಜುನ್ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ ಸಂಗೀತವಿದೆ. ವೆಸ್ಟರ್ನ್ ಪಬ್ ಸೆಟ್ ಅಲ್ಲಿ 8 ದಿನ ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಹಾಡು ಸದ್ದು ಮಾಡುತ್ತಿದೆ.

ಸ್ಯಾಂಡಲ್ ವುಡ್ ನಟಿಯ ಮದುವೆಗೆ ಯಾರೆಲ್ಲ ಬಂದಿದ್ರು?

80ರ ದಶಕದ ರೆಟ್ರೋ ಲುಕ್​ಲ್ಲಿ ರಕ್ಷಿತ್​ ಶೆಟ್ಟಿ ಮಿಂಚಿದ್ದಾರೆ.  ಐದೂ ಭಾಷೆಗಳಲ್ಲೂ ಎಎಸ್​ಎನ್​​ ಟ್ರೈಲರ್​ ಬಿಡುಗಡೆಯಾಗಿತ್ತು.. 'ಅವನೇ ಶ್ರೀಮನ್ನಾರಾಯಣ’ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಹೊರಬರಲಿದ್ದು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

ರಕ್ಷಿತ್​ ಶೆಟ್ಟಿ ಜತೆ ಶಾನ್ವಿ ಶ್ರೀವಾಸ್ತವ್​, ಪ್ರಮೋದ್​ ಶೆಟ್ಟಿ, ಅಚ್ಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್​ ಅಂತ್ಯದಲ್ಲಿ ತೆರೆಗಪ್ಪಳಿಸಲಿದೆ. ಕೆಜಿಎಫ್ ಮತ್ತು ಪೈಲ್ವಾನ್ ನಂತರ ಮತ್ತೆ ಅಷ್ಟೆ ಕುತೂಹಲ ಕೆರಳಿಸಿರುವ ಚಿತ್ರ ಇದಾಗಿದೆ.