Asianet Suvarna News Asianet Suvarna News

ಮಮ್ಮೂಟಿಯ ಕಾಮಿಡಿ ಚಿತ್ರ ಟರ್ಬೋದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ರಾಜ್​ ಶೆಟ್ಟಿ!

ಇದಾಗಲೇ ಟೋಬಿ ಚಿತ್ರದ ಮೂಲಕ ಖ್ಯಾತಿ ಪಡೆದಿರುವ ನಟ ರಾಜ್‌ ಬಿ.ಶೆಟ್ಟಿ ಅವರು ಇನ್ನೊಂದು ಮಾಲಿವುಡ್​ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಡಿಟೇಲ್ಸ್​ ಇಲ್ಲಿದೆ.. 
 

Actor Raj B. Shetty signed another Mollywood film with Mammootty suc
Author
First Published Nov 22, 2023, 5:11 PM IST

ಗರುಡ ಗಮನ ವೃಷಭ ವಾಹನ, ಒಂದು ಮೊಟ್ಟೆಯ ಕಥೆ, ಟೋಬಿ ಮುಂತಾದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಕನ್ನಡ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ ಅವರಿಗೆ ಮಾಲಿವುಡ್‌ನಿಂದ ಇನ್ನೊಂದು ಅವಕಾಶ ಬಂದಿದೆ. ಇತ್ತೀಚೆಗಷ್ಟೇ ರಿಲೀಸ್ ಆದ 'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡದಿದ್ದರೂ,  ರಾಜ್ ಅವರ ನಟನೆಗೆ ಪ್ರೇಕ್ಷಕರು ಮೆಚ್ಚುಗೆಯ ಸುರಿಮಳೆಯನ್ನೇಗೈದಿದ್ದಾರೆ.  'ಟೋಬಿ'ಯ ಅವತಾರದಲ್ಲಿ ಅವರು ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ   ರಾಜ್ ಅವರಿಗೆ ಈಗ ಮತ್ತೊಂದು ಆಫರ್​ ಬಂದಿದೆ.  ಸ್ಟಾರ್ ನಟ ಮಮ್ಮಟ್ಟಿ  ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು,  ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ.

  ರಾಜ್​ ಬಿ ಶೆಟ್ಟಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್​ಗೆ ರೆಡಿ ಆಗಿರುವ ಈ ಹೊತ್ತಿನಲ್ಲಿಯೇ  ‘ಟರ್ಬೊ’ಕ್ಕೂ ಆಫರ್​ ಬಂದಿದೆ.  ವೈಶಾಖ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಮಲಯಾಳಂ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಮಮ್ಮುಟಿ ಫಿಲಂಸ್ ಅಧಿಕೃತವಾಗಿ ರಾಜ್ ಬಿ ಶೆಟ್ಟಿಯನ್ನ ಬರಮಾಡಿಕೊಂಡಿದ್ದು, ಶೀಘ್ರದಲ್ಲೇ ಚಿತ್ರತಂಡ ಸೇರಲಿದ್ದಾರೆ ಎನ್ನಲಾಗಿದೆ.  ಇತ್ತೀಚೆಗೆ ಮಮ್ಮುಟ್ಟಿ ನಟಿಸಿದ 'ಕನ್ನುರ್ ಸ್ಕ್ವಾಡ್' ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂಪಾಯಿಯನ್ನು ಬಾಚಿಕೊಂಡಿತ್ತು. ಇದೀಗ 'ಟರ್ಬೊ'ದ ಘೋಷಣೆ ಮಾಡಿದ್ದಾರೆ.  'ಟರ್ಬೋ' ಸಿನಿಮಾವನ್ನು ಮಲಯಾಳಂ ಮೆಗಾಸ್ಟಾರ್ ನಿರ್ಮಾಣ ಸಂಸ್ಥೆ ಮಮ್ಮುಟ್ಟಿ ಕಂಪನಿ ಹಣ ಹೂಡುತ್ತಿದೆ. ಮಿದುನ್ ಮಾನ್ಯೂಯೆಲ್ ಥಾಮಸ್ ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದಾರೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಇದೊಂದು ಪಕ್ಕಾ ಆಕ್ಷನ್ ಕಾಮಿಡಿ ಸಿನಿಮಾ. ವೆಲ್‌ಕಂ ಆನ್‌ಬೋರ್ಡ್‌, ಅತ್ಯಧಿಕ ಪ್ರತಿಭಾನ್ವಿತ ನಟ ರಾಜ್‌ ಬಿ ಶೆಟ್ಟಿಗೆ ಸುಸ್ವಾಗತ" ಎಂದು ಮಮ್ಮುಟ್ಟಿ ಕಂಪನಿ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. 

ಸಪ್ತಸಾಗರದಾಚೆ-ಬಿ ಸೈಡ್​ ನೋಡಿ ಕಿಚ್ಚ ಸುದೀಪ್​ 'ಕತ್ತೆ' ಎಂದ್ರು: ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರ

ಅಂದಹಾಗೆ, ಟರ್ಬೊ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ವಿಲನ್‌ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಟರ್ಬೊ ಚಿತ್ರವು ಮಮ್ಮುಟ್ಟಿಯ ಹೊಸ ಚಿತ್ರವಾಗಿದ್ದು, ಈಗಾಗಲೇ ಶೂಟಿಂಗ್‌ ಆರಂಭವಾಗಿದೆ. ವೈಶಾಖ್‌ ಮತ್ತು ಮಮ್ಮುಟ್ಟಿ ಅವರು ಪೊಕಿರಿ ರಾಜಾ ಮತ್ತು ಮಧುರ ರಾಜಾ ಚಿತ್ರದ ಬಳಿಕ ಸುಮಾರು ಹದಿಮೂರು ವರ್ಷದ ನಂತರ ಈ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಅಂದರೆ, ಇದು ವೈಶಾಖ್‌ ನಿರ್ದೇಶನದ ಚಿತ್ರವಾಗಿದೆ.

ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಈ ಸುದ್ದಿಯನ್ನು   ಸ್ವತಃ ದುಲ್ಕರ್ ಸಲ್ಮಾನ್ ಶೇರ್​ ಮಾಡಿದ್ದಾರೆ.  ಸದ್ಯ ರಾಜ್ ಬಿಟ್ಟಿ ನಟಿಸಿ, ನಿರ್ದೇಶಿಸಿದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 24ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ರಮ್ಯಾ ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ ಜೊತೆ ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 

ಪ್ರಧಾನಿ ಮೋದಿಗೇ ಯೋಗ ಹೇಳಿಕೊಡಲು ಹೋಗಿ ಪೇಚಿಗೆ ಸಿಲುಕಿದ ನಟಿ ರಾಖಿ ಸಾವಂತ್​!

Follow Us:
Download App:
  • android
  • ios