ಹೈದರಾಬಾದ್‌ನಲ್ಲಿ ಭುಜಕ್ಕೆ ಶಸ್ತ್ರ ಚಿಕಿತ್ಸೆ, ಸೆಲ್ಫಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಟ.  

ಸಿಂಪಲ್ ಹಾಗೂ ಪರ್ಫೆಕ್ಟ್ ಸ್ಟಾರ್ ಧನುಷ್ ಅಭಿನಯದ 'ತಿರುಚಿತ್ರಾಂಬಲಂ' ಸಿನಿಮಾ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಈ ವೇಳೆ ನಟ ಪ್ರಕಾಶ್ ರಾಜ್ ಗಾಯಗೊಂಡಿದ್ದರು. ಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣವೇ ಹೈದರಾಬಾದ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

'ಶೂಟಿಂಗ್ ವೇಳೆ ಬಿದ್ದ ಪರಿಣಾಮ, ಮೂಳೆ ಮುರಿದಿದೆ. ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳುತ್ತಿದ್ದೇನೆ' ಎಂದು ಟ್ಟೀಟ್ ಮಾಡಿದ್ದರು. ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿ, ಪ್ರಕಾಶ್ ಅವರನ್ನು ಒಮ್ಮೆ ನೋಡಬೇಕು ಎಂದು ಕೆಲವು ಅಭಿಮಾನಿಗಳು ಆಸ್ಪತ್ರೆಗೆ ಪ್ರಯಾಣ ಮಾಡಿದ್ದಾರೆ. ಯಾವುದೇ ಆತಂಕಕ್ಕೆ ಮನೆ ಮಾಡಿಕೊಡುವುದು ಬೇಡವೆಂದು ಪ್ರಕಾಶ್ ಸೆಲ್ಫೀ ಹಂಚಿಕೊಂಡಿದ್ದಾರೆ. 

ಶೂಟಿಂಗ್‌ ವೇಳೆ ನಟ ಪ್ರಕಾಶ್ ರಾಜ್‌ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ

'ಡೆವಿಲ್ ಈಸ್ ಬ್ಯಾಕ್. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ನನ್ನ ಆತ್ಮೀಯ ಸ್ನೇಹಿತ ಡಾ. ಗುರುವ ರೆಡ್ಡಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ನನ್ನ ಕಡೆಯಿಂದ ಧನ್ಯವಾದಗಳು. ಶ್ರೀಘ್ರದಲ್ಲೇ ನಾನು ಮರಳುತ್ತೇನೆ' ಎಂದು ಟ್ಟೀಟ್ ಮಾಡಿದ್ದಾರೆ.