ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

ಸಮಾಜದಲ್ಲಿ ನಮ್ಮ ಬಗ್ಗೆ ಮಾತನಾಡುವ ನಾಲ್ಕು ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನದ ಗುರಿ ಬಗ್ಗೆ ಗಮನ ಹರಿಸಿದರೆ ಎಷ್ಟು ಚಂದ ಅಲ್ವಾ? ನಟ ನವೀನ್ ಶಂಕರ್ ಮಾತುಗಳನ್ನು ಕೇಳಿ....... 

Actor Naveen shankar talks about money investment and simple life with rapid rashmi vcs

2018ರಲ್ಲಿ ಗುಲ್ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ನವೀನ್ ಶಂಕರ್ ಈಗ ಬಹು ಬೇಡಿಕೆಯಲ್ಲಿ ಇರುವ ನಟ. ಧರಣ ಮಂಡಳ ಮಧ್ಯದೊಳಗೆ, ಹೊಂದಿಸಿ ಬರೆಯರಿ, ಗುರುದೇವ್ ಹೋಯ್ಸಳ,ಕ್ಷೇತ್ರಪಥಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದು ಅನೌನ್ಸ್ ಮಾಡಬೇಕಿದೆ. ಈ ನಡುವೆ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆದೆ, ಭವಿಷ್ಯ ಹೇಗ್ ಪ್ಲ್ಯಾನ್ ಮಾಡಿದ್ದಾರೆ ಎಂದು ನವೀನ್ ವಿವರಿಸಿದ್ದಾರೆ. 

'ಹೂಡಿಕೆ ಮಾಡೋಷ್ಟು ಹಣ ಬಂದಿಲ್ಲ ಇನ್ನು. ಹಣ ಸೇವಿಂಗ್ ಮಾಡಿಕೊಂಡಾಗ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗಿದ್ದು. ಸೇವಿಂಗ್ಸ್‌ ಮತ್ತು ಹೂಡಿಕೆ ಮುಖ್ಯ ಅನ್ನೋದು ಅರ್ಥ  ಆಗಿದೆ ಆದರೆ ಇಲ್ಲಿ ನಮ್ಮ ಅಗತ್ಯ ಕೂಡ ಬರುತ್ತದೆ. ಈಗ ನನಗೆ 100 ರೂಪಾಯಿ ಬರಲಿದೆ ಅಂದುಕೊಳ್ಳಿ ಅದರ ತಕ್ಕಂತೆ ಖರ್ಚುಗಳನ್ನು ಪ್ಲ್ಯಾನ್ ಮಾಡಿಕೊಳ್ಳುತ್ತೀನಿ. ಯಾರ ಪ್ರೆಶರ್ ಇಲ್ಲದೆ  ಆರಾಮ್ ಆಗಿ ಜೀವನ ಮಾಡಲು ಹೇಗೆ ವ್ಯವಸ್ಥೆ ಮಾಡಿಕೊಳ್ಳಬಹುದು ಅನ್ನೋದನ್ನು ಮೊದಲು ಯೋಚನೆ ಮಾಡುತ್ತೀನಿ. ನನ್ನ ಸಿನಿಮಾ ನೋಡಿದ ಮೇಲೆ ಒಬ್ರು ಬ್ಯಾಂಕ್ ಮ್ಯಾನೇಜರ್‌ ಮ್ಯೂಚುಯಲ್‌ ಫಂಡ್ಸ್‌ ಐಡಿಯಾ ಕೊಟ್ಟು ಸಹಾಯ ಮಾಡಿದರು. ತಿಂಗಳಿಗೆ ಇಷ್ಟು ದುಡ್ಡು ನಿನ್ನದಲ್ಲ ಎಂದು ಸೇವ್ ಮಾಡಿ ಎಂದರು. ನಾನು ಪ್ರತಿಯೊಬ್ಬರಿಗೂ ಸಲಹೆ ಕೊಡುವುದು ಏನ್ ಅಂದ್ರೆ ಹೂಡಿಕೆ ಮಾಡುವುದು ಮುನ್ನ ಇವತ್ತಿನ ದಿನವನ್ನು ಚೆನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ನವೀನ್ ಶಂಕರ್ ಮಾತನಾಡಿದ್ದಾರೆ.

ನಾನು ಸೂಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ

'ಭವಿಷ್ಯದ ಬಗ್ಗೆ ಯೋಚನೆ ಮಾಡಿದರೆ ಇಷ್ಟು ಹಣ ಮಾಡಬೇಕು ಇಷ್ಟು ಕೂಡಿದಬೆಕು ಅನ್ನೋದಕ್ಕಿಂತ ಈಗ ಹಣವನ್ನು ಖರ್ಚು ಮಾಡುವುದು ಬೇಕಾ ಬೇಡ ಅನ್ನೋದು ಯೋಚನೆ ಮಾಡಬೇಕು. ಒಳ್ಳೆ ಬ್ರಾಂಡ್ ಬಟ್ಟೆ ಹಾಕಬೇಕು ಯಾರು ಏನ್ ಅಂತಾರೆ ಅನ್ನೋ ಯೋಚನೆ ಬರ್ಬಾದು. ನಾನು ತುಂಬಾ ಸಿಂಪಲ್ ಏಕೆಂದರೆ ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ಓಡಾಡುತ್ತಿದ್ದಿನಿ. ಆಗ ನನ್ನ ಗರ್ಲ್‌ಫ್ರೆಂಡ್ ಆಗಿದ್ದವಳು ಈಗ ಬೇರೆ ಅವರ ಹುಡುಗಿ ಆಗಿದ್ದಾಳೆ. ಆಕೆಯನ್ನು ಏರ್‌ಪೋರ್ಟ್‌ ರಸ್ತೆಗೆ ಲಾಂಗ್‌ ಡ್ರೈವ್ ಕರೆದುಕೊಂಡು ಹೋಗಿ ಫೋಟೋ ತೆಗೆದುಕೊಂಡಿದ್ದೆ ಆ ಫೋಟೋ ಚೆನ್ನಾಗಿ ಬಂದಿತ್ತು. ಸೆಕೆಂಡ್ ಹ್ಯಾಂಡ್ ಎಂದು ಯೋಚನೆ ಮಾಡದೆ ನನ್ನ ಲಿಮಿಟ್‌ಗೆ ಸರಿ ಹೋಗುತ್ತದೆ ಎಂದು ಖರೀದಿ ಮಾಡಿದೆ. ಜನರು ಏನು ಅಂದುಕೊಳ್ಳುತ್ತಾರೆ ಅಂತ ಯೋಚನೆ ಮಾಡುವುದು ಕಡಿಮೆ. ಒಮ್ಮೆ ಐಷಾರಾಮಿ ಹೋಟೆಲ್‌ಗೆ ಭೇಟಿ ಮಾಡಿದಾಗ ಐಷಾರಾಮಿ ಕಾರುಗಳು ಬರುತ್ತಿತ್ತು ಆಗ ನನ್ನ ಕಾರು ಬಂದು. ಅವರ ಮುಂದೆ ನಾನು ನಾಚಿಕೊಳ್ಳದೆ ಹೆಮ್ಮೆಯಿಂದ ಪಾರ್ಕ್ ಮಾಡಲು ಕೊಟ್ಟು ಶೂಟ್ ಮುಗಿಸಿಕೊಂಡು ಬಂದೆ. ನಾನು ಏನೇ ಮಾಡಿದ್ದರೂ ನಾನು ದುಡಿದು ಮಾಡಿರುವುದು ಅನ್ನೋ ಖುಷಿ ಇದೆ. ಇದರ ಬಗ್ಗೆ ಹೆಮ್ಮೆ ಇದೆ. ಮುಂದೆ ದೊಡ್ಡದಾಗಿ ಜೀವನ ಕಟ್ಟಿಕೊಳ್ಳಬಹುದು ಆಗಲೂ ಇಷ್ಟೇ ಖುಷಿ ಇರುತ್ತದೆ' ಎಂದು ನವೀನ್ ಶಂಕರ್ ಹೇಳಿದ್ದಾರೆ. 

2 ಸಿನಿಮಾ ಮಾಡಿದ ರನ್ಯಾ ಇಂಡಸ್ಟ್ರಿ ಬಿಟ್ಟು ಹೋಗೋಕೆ ಇದೇ ಕಾರಣ ಇರ್ಬೋದು ಅಂತಿದ್ದಾರೆ ರವಿ ಶ್ರೀವತ್ಸ

 

Latest Videos
Follow Us:
Download App:
  • android
  • ios