ಸ್ಯಾಡಲ್ ವುಡ್ ನಟ ನವೀನ್ ಕೃಷ್ಣ ಅವರ ಅಕ್ಕ ನೀತಾ ಪವರ್ ನಾಪತ್ತೆಯಾಗಿದ್ದು ಹುಡುಕಿ ಕೊಡುವಂತೆ ಮಾಡಿದ್ದಾರೆ.  

ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ ಅವರ ಅಕ್ಕ ನೀತಾ ಪವರ್ ನಾವತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನೀತಾ ಕಾಣಿಸುತ್ತಿಲ್ಲ ಎಂದು ನಟ ನವೀನ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ಸಹೋದರಿಯ ಫೋಟೋ ಮತ್ತು ಹೆಚ್ಚಿನ ಮಾಹಿತಿಯನ್ನು ನವೀನ್ ಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ. ಫೋಟೋ ಜೊತೆಗೆ ‘ಕಂಡರೆ ಕೂಡಲೇ ತಿಳಿಸಿ ನಮ್ಮ ಅಕ್ಕ’ ಎಂದು ಹೇಳಿದ್ದಾರೆ. 

ಪೋಸ್ಟ್ ನಲ್ಲಿ ಸಂಪೂರ್ಣ ವಿವರ ನೀಡಿದ್ದಾರೆ. ಎಲ್ಲಿಂದ ನಾಮತ್ತೆಯಾಗಿದ್ದು, ಯಾವಾಗ ಮತ್ತು ಸಮಯವನ್ನು ತಿಳಿಸಿದ್ದಾರೆ. ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ದಯವಿಟ್ಟು ಕಂಡರೆ ತಿಳಿಸಿ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ಫೋನ್ ನಂಬರ್‌ಗಳನ್ನು ನೀಡಿದ್ದಾರೆ.

ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಪುತ್ರನಾದ ನವೀನ್ ಕೃಷ್ಣ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. 1982ರಲ್ಲಿ ಪರಾಜಿತ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಧಿಮಾಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಈಗಲೂ ಕೆಲವು ಧಾರಾವಾಹಿಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

View post on Instagram