ಇತ್ತೀಚೆಗೆ ನಟ ಜೆಕೆ ಅವರು ಅದೂ ಇದೂ ಪ್ರಶಸ್ತಿ ಪಡೆಯುವುದು ಹಾಗೂ ಕ್ರಿಕೆಟ್ ಮೂಲಕವಷ್ಟೆ ಸುದ್ದಿಯಲ್ಲಿ ಇದ್ದರು... ಫಿಟ್‌ನೆಸ್‌ಗೆ ಹೆಸರಾದ ನಟ ಜೆಕೆ ಅವರು ಬಾಲಿವುಡ್‌ನಲ್ಲಿ ಹೆಸರು ಬಳಿಕ ಈಗ ಕನ್ನಡ ಚಿತ್ರರಂಗದಲ್ಲೂ ಮತ್ತೆ ತೊಡಗಿಸಿಕೊಂಡಿದ್ದಾರೆ. ಜೆಕೆ ಸದ್ಯ..

'ಜೆಕೆ' ಅಲಿಯಾಸ್ ಕಾರ್ತಿಕ್ ಜಯರಾಂ (Karthik Jayaram) ಮತ್ತೆ ಸುದ್ದಿಗೆ ಬಂದಿದ್ದಾರೆ. ಜೆಕೆ (JK) ಅಭಿನಯದ 'ಕಾಡ' ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ನಟ ಜೆಕೆ ಅವರು ಅದೂ ಇದೂ ಪ್ರಶಸ್ತಿ ಪಡೆಯುವುದು ಹಾಗೂ ಕ್ರಿಕೆಟ್ ಮೂಲಕವಷ್ಟೆ ಸುದ್ದಿಯಲ್ಲಿ ಇದ್ದರು. ಅವರ ಸಿನಿಮಾ ತೀರಾ ಇತ್ತೀಚೆಗೆ ತೆರೆಗೆ ಬಂದಿಲ್ಲ. ಆದರೆ ಇದೀಗ ಜೆಕೆ ಅವರು ಕಾಡ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ನಟ ಜೆಕೆ ಅವರು ಕಿಚ್ಚ ಸುದೀಪ್ ಅವರಂತೆಯೇ ಕ್ರಿಕೆಟ್ ಪ್ರೇಮಿಯೂ ಆಗಿದ್ದು, ತಮ್ಮ ಲೈಫ್‌ನಲ್ಲಿ ಕ್ರಿಕೆಟ್-ಸಿನಿಮಾ ಹೀಗೆ ಎರಡನ್ನೂ ನಿಭಾಯಿಸುತ್ತಾರೆ, ವೃತ್ತಿ-ಪವೃತ್ತಿ ಎರೂ ಕೂಡ ಟೈಂ ಕೊಡುತ್ತಾರೆ. 

ಕಾಡ ಚಿತ್ರವು ಕೆಲವು ವರ್ಷಗಳ ಹಿಂದೆಯೇ ಶುರುವಾಗಿತ್ತು. ಕಥೆಗೆ ತಕ್ಕಂತೆ ಶೂಟಿಂಗ್ ಮಾಡಿ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬರುವಷ್ಟರಲ್ಲಿ ಸ್ವಲ್ಪ ಡಿಲೇ ಆಗಿ ಈ 2025ರ ವರ್ಷ ಕಾಲಿಟ್ಟಿದೆ. ಇದೀಗ, ಕಾಡ ಚಿತ್ರವು ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಈ ಚಿತ್ರದ ಬಗ್ಗೆ ಸ್ವತಃ ನಟ ಜೆಕೆ ಅವರಿಗೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆ ಮನೆ ಮಾಡಿದೆ. ಇದೊಂದು ವಿಭಿನ್ನವಾಗಿರುವ, ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿದ್ದು, ಹೊಸ ಭರವಸೆ ಮೂಡಿಸಿದೆ. ವಿಶ್ರುತ್‌ ನಾಯಕ್‌ ಈ 'ಕಾಡ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!

ಫಿಟ್‌ನೆಸ್‌ಗೆ ಹೆಸರಾದ ನಟ ಜೆಕೆ ಅವರು ಬಾಲಿವುಡ್‌ನಲ್ಲಿ ಹೆಸರು ಬಳಿಕ ಈಗ ಕನ್ನಡ ಚಿತ್ರರಂಗದಲ್ಲೂ ಮತ್ತೆ ತೊಡಗಿಸಿಕೊಂಡಿದ್ದಾರೆ. ಜೆಕೆ ಸದ್ಯ 'ಕಾಡ' ಚಿತ್ರವನ್ನು ಮುಗಿಸಿ ಅದರ ಪ್ರಚಾರಕಾರ್ಯಕ್ಕೆ ಸಿದ್ಧವಾಗಿದ್ದಾರೆ. ಈ ಚಿತ್ರದಲ್ಲಿ ಜೆಕೆ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ನಟಿಸುತ್ತಿದ್ದಾರೆ. ಗ್ರೇ ಶೇಡ್‌ನ ಪಾತ್ರ ಅವರದು ಎನ್ನಲಾಗಿದೆ. ಇದು ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ. ಬೆಂಗಳೂರಿನಲ್ಲಿ ಮೊದಲ ಶೆಡ್ಯೂಲ್‌ ಚಿತ್ರೀಕರಣ ಮುಗಿಸಿ, ನಂತರ ಸಕಲೇಶಪುರದಲ್ಲಿ ಎರಡನೇ ಶೆಡ್ಯೂಲ್‌ ಶೂಟಿಂಗ್‌ ಮಾಡಲಾಗಿದೆ. ವಿಶ್ರುತ್‌ ನಾಯಕ್‌ ಚಿತ್ರ ನಿರ್ದೇಶನ ಮಾಡಿದ್ದು, ನಟಿ ಕಾವ್ಯಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. 

ಕಾಡ 'ಚಿತ್ರದಲ್ಲಿ ಸೈಕಲಾಜಿಕಲ್‌ ಡಿಸಾರ್ಡರ್‌ ಬಗ್ಗೆ ಹೇಳಲಾಗಿದೆ. ಇದು ಪ್ರಪಂಚದಲ್ಲಿ ಕೆಲವೇ ಮಂದಿಯಲ್ಲಿ ಕಾಣಬಹುದಾದ ಕಾಯಿಲೆ ಆಗಿದೆ. ಇದು ಗುಣಪಡಿಸಲಾಗದ ಸಮಸ್ಯೆ, ನಿಯಂತ್ರಣದಲ್ಲಿಡಬಹುದು ಅಷ್ಟೇ. ಕೋಪ ಬಂದರೆ ಈ ಪೇಶೇಂಟ್ ಏನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಇನ್ನು, ಈ ಬಗ್ಗೆ ಜೆಕೆ 'ನನಗೆ ಈ ಸ್ಕ್ರಿಪ್ಟ್‌ ಬಹಳ ಇಷ್ಟ ಆಯ್ತು. ಈಗ ಮೇಕಿಂಗ್‌ ನೋಡಿ ಇನ್ನೂ ಇಷ್ಟವಾಗ್ತಿದೆ. ಹೀರೋ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಟನೆಯನ್ನು ಬೇಡುವ ಪಾತ್ರ. ನಿರ್ದೇಶಕರ ಕಲ್ಪನೆ ಬಹಳ ಚೆನ್ನಾಗಿದೆ. ಮಂಜರಿ ಎಂಬ ಸಿನಿಮಾ ಮಾಡಿ ರಾಜ್ಯಪ್ರಶಸ್ತಿಯನ್ನು ಪಡೆದವರು ಅವರು' ಎಂದಿದ್ದಾರೆ. 

Jr NTR-ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್; ಯಾಕಿನ್ನೂ ಹೆಸರಿಟ್ಟಿಲ್ಲ?

ಚಿತ್ರದ ಹೀರೋ ಪಾತ್ರದ ಹೆಸರು 'ಕಾಡ'. ಈ ಹೆಸರನ್ನೇ ಚಿತ್ರದ ಟೈಟಲ್‌ ಆಗಿ ಇಡಲಾಗಿದೆ. ಟೈಟಲ್‌ಗೆ 'ದಿ ಇನ್‌ಬಿಲ್ಟ್‌ ಎವಿಲ್‌' ಎಂಬ ಟ್ಯಾಗ್‌ಲೈನ್‌ ಇದೆ. 'ಒಬ್ಬ ವ್ಯಕ್ತಿಯೊಳಗಿರುವ ಡಾರ್ಕರ್‌ ಸೈಡ್‌ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ಒಂದು ರೀತಿಯಲ್ಲಿ ಎಲ್ಲರಲ್ಲೂ ಬ್ಲಾಕ್ ಶೇಡ್‌ ಇರುತ್ತೆ. ಈ ಸಿನಿಮಾದಲ್ಲಿ ಕೂಡ ಎಲ್ಲಾ ಪಾತ್ರಗಳಿಗೂ ಡಾರ್ಕ್ ಸೈಡ್‌ ಇದೆ. ಎಲ್ಲವೂ ಪ್ರಮುಖ ಪಾತ್ರಗಳೇ ಆಗಿವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರೋಲ್ಲ. ಆದರೆ ಈ ಸಿನಿಮಾದಲ್ಲಿ ನಾಯಕಿ ಕಾವ್ಯಾ ಶೆಟ್ಟಿ ಪಾತ್ರಕ್ಕೂ ಇಂಪಾರ್ಟೆನ್ಸ್‌ ಇದೆ.

ಈ ಬಗ್ಗೆ ಕಾವ್ಯಾ ಶೆಟ್ಟಿ 'ನನ್ನ ಕರಿಯರ್‌ನಲ್ಲಿ'ಆ ಕರಾಳ ರಾತ್ರಿ' ಸಿನಿಮಾ ನಂತರ ಇದು ಬೆಂಚ್‌ ಮಾರ್ಕ್ ಆಗುತ್ತೆ ಎಂಬ ವಿಶ್ವಾಸ ಇದೆ. ಚಿತ್ರದಲ್ಲಿನ ಕೊನೆಯ 30 ನಿಮಿಷ ಸಿಕ್ಕಾಪಟ್ಟೆ ಥ್ರಿಲ್‌ ಇದೆ. ಫೈಟ್‌ ಸೀನ್‌ ಕೂಡ ಬಹಳ ಟಫ್‌ ಆಗಿತ್ತು. ಅದನ್ನು ಕೆಲವು ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಡ್ಯೂಪ್‌ ಇಲ್ಲದೆ ನಾನೇ ಸ್ಟಂಟ್‌ ಮಾಡಿದ್ದೇನೆ' ಎಂದಿದ್ದಾರೆ. 

ಅಮಿತಾಭ್ ಜೊತೆಗಿನ ಆ ಚಿತ್ರದಲ್ಲಿ ಸ್ಮಿತಾ ಪಾಟೀಲ್ ಏಕೆ ಅತ್ತಿದ್ದರು?... ಓಹ್ ಅದಾ ವಿಷ್ಯ?

ಕಾಡ ಚಿತ್ರದ ಮೊದಲ ಭಾಗದಲ್ಲಿ ಕ್ರೈಂ ಪ್ರಕರಣ ನಡೆಯಲಿದ್ದು, ಇದಕ್ಕೊಂದು ಫ್ಲ್ಯಾಶ್‌ಬ್ಯಾಕ್‌ ಇರುತ್ತದೆ. ಈ ಫ್ಲ್ಯಾಶ್‌ಬ್ಯಾಕ್‌ ಅನ್ನು ಇನ್ವೆಸ್ಟಿಗೇಷನ್‌ ಜತೆಗೇ ರಿವೀಲ್‌ ಮಾಡಲಿದೆ ಸೀಕ್ವೆಲ್‌. 'ಕಾಡ ಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಸಿನಿಮಾದ ಕೊನೆ ಭಾಗ ಎರಡನೇ ಸಿನಿಮಾಗೆ ಲೀಡ್‌ ಕೊಡುತ್ತದೆ. ಸೀಕ್ವೆಲ್‌ನಲ್ಲಿ ಇನ್ವೆಸ್ಟಿಗೇಷನ್‌ ಶುರುವಾಗಲಿದ್ದು, ಕ್ರೈಂ ಪ್ರಕರಣದ ಫ್ಲ್ಯಾಶ್‌ ಬ್ಯಾಕ್‌ ಅನ್ನೂ ಹೇಳಲಿದ್ದೇವೆ' ಎಂದಿದ್ದಾರೆ ನಟ ಜೆಕೆ.

ಇನ್ನು, ಈ ಚಿತ್ರದಲ್ಲಿಅಚ್ಯುತ್‌, ಉಗ್ರಂ ಮಂಜು, 'ಕೆಜಿಎಫ್‌' ನಟಿ ರೂಪಾ ಮತ್ತಿತರರು ನಟಿಸುತ್ತಿದ್ದಾರೆ. ಬಾಲಿವುಡ್‌ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್‌ ಸ್ಟಂಟ್‌ ಡೈರೆಕ್ಷನ್‌ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ 'ಕಾಡ' ಚಿತ್ರವು ತೆರೆಗೆ ಬರಲಿದೆ. 

ಡಾ ರಾಜ್‌ಕುಮಾರ್‌ಗೇ ಎರಡು ದೊಡ್ಡ ಕಂಡೀಷನ್ ಹಾಕಿದ್ದ ಅಂಬರೀಷ್; ಅಣ್ಣಾವ್ರು ಮಾಡಿದ್ದೇನು?

View post on Instagram