ನಟನಿಗಾಗೇ ನಡೀತಾ ಈ ಹೋಮ ಹವನ?: ದರ್ಶನ್‌ಗೋಸ್ಕರ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ ಎಂದು ಗುಡುಗಿದ ಜಗ್ಗೇಶ್

ಸೋಲು ಸ್ಯಾಂಡಲ್​ವುಡ್​​ಅನ್ನ ಆವರಿಸಿದೆ. ದೊಡ್ಡ ಹೀರೋಗಳು  ಮಾಡಬಾರದ ಕೆಲಸ ಮಾಡಿ ಜೈಲು ಸೇರುತ್ತಿದ್ದಾರೆ. ಇದರಿಂದ ಪರಿಹಾರ ಸಿಗಲಿ ಅಂತ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಹಾಗೂ ಖಜಾಂಚಿ ನಟ ದೊಡ್ಡಣ ನೇತೃತ್ವದಲ್ಲಿ ಹೋಮ, ಹವನ ಯಾಗ ನಡೆದಿದೆ. ನಂಬಿಕೆಗಳು ನಮ್ಮನ್ನ ಕಾಪಾಡುತ್ತೆ ಅನ್ನೋ ಮಾತಿದೆ. 
 

Actor Jaggesh talks about Darshan and Pooja at Sandalwood Artists Association Entertainment News gvd

ನಟ ದರ್ಶನ್ ಜೈಲು ಸೇರಿ 50 ದಿನ ಕಳೆದಿದೆ. ಆ ಕಡೆ ಸ್ಯಾಂಡಲ್​ವುಡ್​​ನಲ್ಲಿ ಸಾವು ನೋವುಗಳು ಹೆಚ್ಚಾಗಿವೆ. ಸಿನಿಮಾ ಸಕ್ಸಸ್ ಇಲ್ಲದೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರರಂಗದ ಒಳಿತಿಗಾಗಿ ಕಲಾವಿಧರೆಲ್ಲಾ ಸೇರಿ ಹೋಮ ಮಾಡಿಸಿದ್ದಾರೆ. ನಾಗಾರಾಧನೆ ಮಾಡಿದ್ದಾರೆ. ಹಾಗಾದ್ರೆ ಈ ಪೂಜೆಯಲ್ಲಿ ಯಾರೆಲ್ಲಾ ಭಾಗಿ ಆಗಿದ್ರು.? ಇನ್ನಾದ್ರು ಕಲಾವಿಧರ ಕಷ್ಟ ಕಾರ್ಪಣ್ಯಗಳು ದೂರಾಗುತ್ತಾ.? ಇಲ್ಲಿದೆ ನೋಡಿ ಸ್ಯಾಂಡಲ್​ವುಡ್​ ಶಾಂತಿ ಹೋಮದ ಕತೆ. ಸೋಲು ಸ್ಯಾಂಡಲ್​ವುಡ್​​ಅನ್ನ ಆವರಿಸಿದೆ. ದೊಡ್ಡ ಹೀರೋಗಳು  ಮಾಡಬಾರದ ಕೆಲಸ ಮಾಡಿ ಜೈಲು ಸೇರುತ್ತಿದ್ದಾರೆ. ಇದರಿಂದ ಪರಿಹಾರ ಸಿಗಲಿ ಅಂತ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಹಾಗೂ ಖಜಾಂಚಿ ನಟ ದೊಡ್ಡಣ ನೇತೃತ್ವದಲ್ಲಿ ಹೋಮ, ಹವನ ಯಾಗ ನಡೆದಿದೆ. ನಂಬಿಕೆಗಳು ನಮ್ಮನ್ನ ಕಾಪಾಡುತ್ತೆ ಅನ್ನೋ ಮಾತಿದೆ. 

ಆ ನಂಬಿಕೆ ಮೇಲೆ ಸ್ಯಾಂಡಲ್​ವುಡ್​​ ಮಂದಿ ಹೋಮ ಹವನ ಮಾಡಿಸಿದ್ದಾರೆ.  ಬೆಂಗಳೂರಿನ ಚಾಮರಾಜ ನಗರದ ಕಲಾವಿಧರ ಸಂಘದಲ್ಲಿ ಕಲಾವಿಧರಿಗೆಲ್ಲಾ ಒಳ್ಳೆಯದ್ದಾಗಲಿ ಕಷ್ಟ ಕಾರ್ಪಣ್ಮ ಕಣ್ಮರೆ ಆಗಲಿ, ದುಟ್ಟ ದುಮ್ಮಾನಗಳು ದೂರಾಗಲಿ ಅಂತ ಗಣ ಹೋಮ, ಮೃತ್ಯುಂಜಯ ಹೋಮ ಸರ್ಪ ಶಾಂತಿ ಹೋಮ ಮಾಡಲಾಗಿದೆ. ಆದ್ರೆ ಈ ಪೂಜೆಗೆ ಕನ್ನಡ ಚಿತ್ರರಂಗದಿಂದಲೇ ಅಪಸ್ವರ ಎದ್ದಿತ್ತು. ಯಾರು ಏನೇ ಹೇಳಲಿ, ಈ ಪೂಜೆ ಮಾಡಿಯೇ ಸಿದ್ಧ ಅಂತ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹಾಗು ನಟ ದೊಡ್ಡಣ್ಣ ಹೋಮ ಮಾಡಿಸಿ ಜಯಿಸಿದ್ದಾರೆ. ಕಲಾವಿದರ ಸಂಘ ಚಿತ್ರರಂಗದ ಏಳಿಗೆಗಾಗಿ ಈ ಪೂಜೆ  ಅಂತಿದ್ರೆ, ಒಂದಷ್ಟು ಸ್ಟಾರ್ಸ್ ಇದು ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಗಾಗಿ ಮಾಡುತ್ತಿರೋ ಪೂಜೆ ಅಂತ  ವಿರೋಧ ಮಾಡಿದ್ರು. 

ಇದರ ನಡುವೆಯೂ ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ಈ ಪೂಜೆಗೆ ನಟ ಜಗ್ಗೇಶ್, ಅಭಿಷೇಕ್ ಅಂಬರೀಶ್, ನೆನಪಿರಲಿ ಪ್ರೇಮ್, ಶರಣ್, ರಾಗಿಣಿ, ರಾಕ್ ಲೈನ್ ವೆಂಕಟೇಶ್, ಜಯಮಾಲ, ಗಿರಿಜಾ ಲೋಕೇಶ್, ಗುರು ಕಿರಣ್ ಸೇರಿದಂತೆ ಹಲವು ನಟನಟಿಯರು ಭಾಗಿ ಆಗಿದ್ರು. ಕಲಾವಿಧರ ಸಂಘದ ಹೋಮ ಹವನದಲ್ಲಿ ಚಿತ್ರರಂಗದ ಹಿರಿಯ ಕಲಾವಿದರು ಕೆಲ ಕಿರಿಯ ಕಲಾವಿಧರು ಭಾಗಿ ಆಗಿದ್ರು. ನಾಗಾರಾಧೆ, ಸರ್ಪ ಶಾಂತಿ ಹೋಮ ಆಗಿತ್ತು. ಆಗ ಹಿರಿಯ ನಟಿ ಜ್ಯೋತಿ ಮೈ ಮೇಲೆ ದೇವರ ಆಹ್ವಾನ ಆಗಿತ್ತು. ಜ್ಯೋತಿ ಮೈ ಮೇಲೆ ದೇವರು ಆಹ್ವಾನ ಆಗುತ್ತಿದ್ದಂತೆ ಕೈ ಮುಗಿದು ನಿಂತಿದ್ರು ಸ್ಟಾರ್ಸ್. ಚಿತ್ರರಂಗದ ಹೆಸರಲ್ಲಿ ಕಲಾವಿದರು ಒಂದು ಕಡೆ ಸೇರಿ ದರ್ಶನ್ ಗಾಗಿ ಹೋಮಹವನ ಮಾಡಿಸಿದ್ರಾ.? ಇಂತಹ ಡೌಟ್ ಈಗ ಶುರುವಾಗಿದೆ.

ಯಾಕಂದ್ರೆ, ಪೂಜೆಗೆ ಬಂದಿದ್ದ ಪ್ರತಿ ಹಿರಿ ಕಿರಿ ಕಲಾವಿಧರೆಲ್ಲಾ ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ ಹೋಮ ಮಾಡಿದ್ವಿ. ಇದರ ಜೊತೆಗೆ ದರ್ಶನ್​​ ಕೂಡ ಸಂಕಷ್ಟದಿಂದ ಪಾರಾಗಲಿ ಅಂತ ಪ್ರಾರ್ಥಿಸಿದ್ವು ಅಂದಿದ್ದಾರೆ. ನವರಸ ನಾಯಕ ಜಗ್ಗೇಶ್​ ಈ ಪೂಜೆಯಲ್ಲಿ ಭಾಗಿಯಾಗಿ ಚಿತ್ರರಂಗಕ್ಕೆ ಒಳ್ಳೆಯದಾಗ್ಲಿ ಅಂತ ಪ್ರಾರ್ಥಿಸಿದ್ದಾರೆ. ಆದ್ರೆ ಇದು ದರ್ಶನ್​ಗಾಗಿ ನಡೆದ ಪೂಜೆನಾ ಅಂತ ಕೇಳಿದ್ದಕ್ಕೆ ‘ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್​ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ ಅಂತ ಗುಡುಗಿದ್ದಾರೆ. ನಾಗದರ್ಶನ ವೇಳೆ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಅಗ ನಾಗದೇವರು ದೊಡ್ಡಣ್ಣ, ಜಗ್ಗೇಶ್, ವೆಂಕಟೇಶ್ ಮುಂದೆ ತಪ್ಪುಗಳ ಪಟ್ಟಿಕೊಟ್ಟಿದ್ದಾರೆ. ನಿಮ್ಮಲ್ಲಿ ಒಗ್ಗಟ್ಟು ಉಂಟಾ? 

ಈ ಐದು ಕಾರಣಕ್ಕೆ ನೋಡಬೇಕು ಗೋಲ್ಡನ್ ಸ್ಟಾರ್ ಗಣೇಶ್ 'ಕೃಷ್ಣಂ ಪ್ರಣಯ ಸಖಿ' ಚಿತ್ರ!

ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ.ಈ ಜಾಗದ ಪಾವಿತ್ರ್ಯತೆ ಹಾಳು ಮಾಡ್ಬೇಡಿ. ಇದು ಶಾರದೆ ಸ್ಥಳ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೀತಿದ್ವು. ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ ಅದು ಸರಿಯಲ್ಲ. ಇದೆಲ್ಲವನ್ನೂ ಸರಿಪಡಿಸಿಕೊಳ್ಳಿ. ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ದಿನ ಇಲ್ಲಿ ದೀಪ ಬೆಳಗಿಸಿ. ಶತ್ರು ನಾಶ, ಅಪಕೀರ್ತಿ ಎಲ್ಲವೂ ದೂರಾಗುತ್ತೆ ಅಂತ ಎಚ್ಚರಿಕೆ ನೀಡಿದ್ಯಂತೆ. ಒಟ್ಟಿನಲ್ಲಿ ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಮೊದಲ ಭಾರಿಗೆ ಕನ್ನಡ ಚಿತ್ರರಂಗಕ್ಕಾಗಿ ಪೂಜೆ ಆಗಿದೆ. ಚೈತನ್ಯ ಕಳೆದುಕೊಂಡ ಸಿನಿ ರಂಗಕ್ಕೆ ಮತ್ತೆ ಜೀವ ಚೈತನ್ಯ ಬರಬೇಕು. ಅದಕ್ಕಾಗೆ ಈ ಪೂಜೆ ಹೋಮ ನಡೆದಿದೆ. ಸ್ಯಾಂಡಲ್​ವುಡ್​​ಗೆ ಇನ್ಮುಂದೆ ಎಲ್ಲವೂ ಶುಭವಾಗುತ್ತಾ ಕಾದು ನೋಡ್ಬೇಕು.

Latest Videos
Follow Us:
Download App:
  • android
  • ios