ಕೊರೊನಾ ಸಮಯದಲ್ಲಿ ಸಹೋದರ ಕೊಮಲ್ ಬದುಕಿ ಬಂದ ಬಂದ ನಟ ಜಗ್ಗೇಶ್ ಬಹಿರಂಗ ಪಡಿಸಿದ್ದಾರೆ.
ಸ್ಯಾಂಡಲ್ ವುಡ್ ಕಾಮಿಡಿ ಸ್ಟಾರ್ ಕೋಮಲ್ 'ಉಂಡೆನಾಮ' ಹಾಕಲು ಬರ್ತಿದ್ದಾರೆ. ಯಾರಿಗೆ ಉಂಡೆನಾಮ ಹಾಕ್ತಿದ್ದಾರೆ ಅಂತೀರಾ? ಕೋಮಲ್ 'ಉಂಡೆನಾಮ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಉಂಡೆನಾಮ ಸಿನಿಮಾತಂಡ ಟ್ರೈಲರ್ ರಿಲೀಸ್ ಕಾರ್ಯಕ್ರಮದ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ಕೋಮಲ್ ಅವರ ಸಿನಿಮಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸಹೋದರ ಜಗ್ಗೇಶ್ ಭಾಗಿಯಾಗಿದ್ದರು. ತಮ್ಮನ ಬಗ್ಗೆ ಮತ್ತು ಸಿನಿಮಾದ ಬಗ್ಗೆ ಜಗ್ಗೇಶ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಕೋಮಲ್‌ಗೆ ಜೋಡಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಕೆ ಎಲ್ ರಾಜಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಸಹೋದರ ಕೋಮಲ್ ಸಾವಿನ ದವಡೆಯಿಂದ ಪಾರಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕೊರೊನಾ ಭೀಕರ ಸಮಯದಲ್ಲಿ ಕೋಮಲ್‌ಗೂ ಸೋಂಕು ತಗುಲಿತ್ತು. ಆ ಕಷ್ಟದ ಸಮಯದಿಂದ ಹೊರಬಂದ ಬಗ್ಗೆ ಜಗ್ಗೇಶ್ ವಿವರಿಸಿದ್ದಾರೆ. ಕೋಮಲ್‌ನನ್ನು ಕಾಪಾಡಿದ ತನ್ನ ಕುಲದೇವರು ಭೈರವನಿಗೆ ಧನ್ಯವಾದ ತಿಳಿಸಿದರು ಜಗ್ಗೇಶ್. ಅದೇ ಸಮಯದಲ್ಲಿ ತಮ್ಮನಿಗೆ ಕೇತು ದಸೆ ಇದ್ದ ಬಗ್ಗೆಯೂ ಬಹಿರಂಗ ಪಡಿಸಿದರು. ಕೇತು ದಸೆ ಮುಳುಗಿಸಿ ಬಿಡುತ್ತದೆ, ಅಮಿತಾಭ್ ಬಚ್ಚನ್ ಅವರನ್ನೇ ಬಿಟ್ಟಿಲ್ಲ ಎನ್ನುವ ವಿಚಾರವನ್ನು ಜಗ್ಗೇಶ್ ಹೇಳಿದರು.
ಸಹೋದರ ನಟ ಕೋಮಲ್ ಕೊರೊನಾದಿಂದ ಪಾರಾದಿದ್ದು ಆ ಭೈರವನಿಂದ ಎಂದಿರುವ ಜಗ್ಗೇಶ್ ಪತ್ರಿಕಾಗೋಷ್ಠಿಯಲ್ಲಿ, 'ಸ್ನೇಹಿತನ ಮಗ ಕೊರೊನಾದಿಂದ ನಿಧನ ಹೊಂದಿದ ಬಳಿಕ ಕೊಮಲ್‌ಗೂ ಕೊರೊನಾ ಬಂತು. ಚೆನ್ನಾಗಿಯೇ ಇದ್ದ ಸ್ನೇಹಿತನ ಮಗ ದಿಢೀರ್ ನಿಧನ ಹೊಂದಿದ್ದು ತುಂಬಾ ಆಘಾತವಾಗಿತ್ತು. ಕೆಲವೇ ದಿನಗಳಲ್ಲಿ ಕೋಮಲ್ ಕೂಡ ಅದೇ ಸ್ಥಿತಿಗೆ ತಲುಪಿದ್ದ' ಎಂದು ಹೇಳಿದರು. 'ಕೊರೊನಾ ಬಂದಿದೆ ಎಂದು ನನಗೆ ಕೋಮಲ್ ಫೋನ್ ಮಾಡಿದಾಗ ಗಾಬರಿ ಆಯ್ತು. ಎಲ್ಲಿಗೆ ಹೋಗಿದ್ದೆ ಅಂತ ಸರಿಯಾಗಿ ಬೈಯ್ದೆ' ಎಂದು ತಮ್ಮನ ಸ್ಥಿತಿಯನ್ನು ವಿವರಿಸಿದರು.
ದಿನಕ್ಕೆ 4 ಲಕ್ಷ ಸಂಭಾವನೆ, ಈಗ ಲೆಕ್ಕ ವಿಚಾರ ಇಷ್ಟವಿಲ್ಲ: ನಟ ಕೋಮಲ್ ಶಾಕಿಂಗ್ ಹೇಳಿಕೆ
'ಆಕ್ಸಿಜನ್ ಹಾಕಲು ಸಿದ್ಧರಾಗಿದ್ರು. ಅದನ್ನು ಹಾಕ್ತಿದ್ದಾರೆ ಅಂದರೆ ಬದುಕುವುದು ತೀರ ಕಡಿಮೆ ಎಂದರ್ಥ. ನನ್ನ ಕುಟುಂಬದಲ್ಲಿ ಇರುವ ವೈದ್ಯರು ಆತನಿಗೆ ಸರಿಯಾಗಿ ಚಿಕಿತ್ಸೆ ನೀಡಿದರು. ಆತ ಇವತ್ತು ಬದುಕಿ ಇಲ್ಲಿ ನಿಂತಿದ್ದಾನೆ ಅಂದರೆ ಅದಕ್ಕೆ ಆ ಭೈರವನೇ ಕಾರಣ. 600 ವರ್ಷಗಳ ಭೈರವನ ದೇವಸ್ಥಾನ ಅದು. ತಮ್ಮ ಹಳೆ ತಲೆಮಾರಿನ ದೇವಸ್ಥಾನ. ನಾನು ಅದನ್ನು ಕಟ್ಟಿಸಿದ್ದು ಅಷ್ಟೆ ಆದರೆ ಇವತ್ತಿನವರೆಗೂ ಅದರ ಪೂಜೆಯ ನಿರ್ವಹಣೆಯನ್ನು ಕೋಮಲ್ ಮಾಡಿಕೊಂಡು ಬರ್ತಿದ್ದಾನೆ. ದೇವರಿದ್ದಾನೆ ಅಂತ ಗೊತ್ತಾವುದು ನಮ್ಮ ಪರ ಈ ಯಾರು ಇಲ್ಲ ಗೊತ್ತಾದಾಗ ಒಬ್ಬ ಬರ್ತಾನಲ್ಲ ಅವನೇ ದೇವರು' ಎಂದು ಹೇಳಿದರು.
'ಇವನ ಕತೆ ಮುಗಿಯಿತು ಅಂತ ಆಗಿತ್ತು. ಆದರೆ ನಾನು ಹೇಳಿದ್ದೆ ಏನು ಆಗಲ್ಲ. ಬದುಕಿ ಬರ್ತಾನೆ ಅಂತ. ಯಾಕೆಂದರೆ ಇವನಿಗೆ ಕೇತು ದೆಸೆ ನಡೆಯುತ್ತಿತ್ತು. ದರಿದ್ರ ಅದು ಅಮಿತಾಭ್ ಬಚ್ಚನ್ ಅವರನ್ನೇ ಮುಳಿಗಿಸಿತ್ತು. ಕೋಮಲ್‌ಗೂ ಅದೇ ಆಗಿತ್ತು. ಶುಕ್ರ ಇದ್ದಾನೆ ಏನು ಆಗಲ್ಲ ಅಂತ ಹೇಳಿದ್ದೆ. ಹಾಗೆ ಆಯಿತು' ಎಂದು ಹೇಳಿದರು.
Jaggesh Birthday: 'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ'
ಇವನ ಮಗಳಿಗೆ ಇವನು ದೊಡ್ಡ ಧನ್ಯವಾದ ಹೇಳಬೇಕು. ಮಗಳು ಚಿಕ್ಕ ಹುಡುಗಿ ಅಂಥ ಕಷ್ಟ ಕಾಲದಲ್ಲೂ ಅಪ್ಪನ ಜೊತೆ ಇರ್ತೀನಿ ಅಂತ ಇದ್ಲು. ಗೌನ್ ಎಲ್ಲಾ ಹಾಕಿಕೊಂಡು ಅಪ್ಪನನ್ನು ನೋಡಿಕೊಂಡಿದ್ದಾಳೆ. ದೇವರು ಮನುಷ್ಯ ರೂಪದಲ್ಲಿ ಬರ್ತಾನೆ. ಸಾವನನ್ನು ಗೆದ್ದವನು ಕೋಮಲ್. ಇಂತವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೋಮಲ್ ಜಾಸ್ತಿ ಮಾತಡಲ್ಲ. ಮೌನ ಮುನಿ. ಒಳಗಡೆ ಜ್ಞನ ಭಂಡಾರವಿದೆ' ಸಾವಿನಿಂದ ಪಾರಾದ ಬ್ಗೆಗ ವಿವರಿಸುತ್ತ ತಮ್ಮನನ್ನು ಹೊಗಳಿದರು ಜಗ್ಗೇಶ್.
