ಸ್ಯಾಂಡಲ್‌ವುಡ್‌‌ನ ಓನ್ಲಿ ಮಾಸ್ಟರ್‌ ಆ್ಯಕ್ಟರ್‌ ಜಗ್ಗೇಶ್‌ ಮಾರ್ಚ್‌ 17ರಂದು 57ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಈ ಸಂಭ್ರಮದಲ್ಲಿ ಮದುವೆಯಾದ ಮೊದಲ ವರ್ಷ ಪತ್ನಿ ಪರಿಮಳ ಶುಭಾಶಯ ತಿಳಿಸಿದ ರೀತಿಯನ್ನು ಅಭಿಮಾನಿಗಳೆದುರು ತೆರೆದಿಟ್ಟಿದ್ದಾರೆ. ಹೌದು! ಪರಿಮಳ ಕೈಯಾರೆ ತಯಾರಿಸಿದ ಗ್ರೀಟಿಂಗ್‌ ಕಾರ್ಡ್‌ನಲ್ಲಿ 'I Love you' ಜೊತೆಗೆ 'Jaggi never never change. I can never bear it, sweet' ಎಂದು ಬರೆದ ಕಾರ್ಡ್ ತೋರಿಸಿದ್ದಾರೆ. ಈ ಫೋಟೋವನ್ನು ಜಗ್ಗೇಶ್ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

ಅಷ್ಟೇ ಅಲ್ಲದೇ 'ನಾನು ಮದುವೆಯಾದ ಮೊದಲ ವರ್ಷ ನನ್ನ ಆನಡಗು ಗ್ರಾಮದಲ್ಲಿ ಪರಿಮಳ ಕೈಯಾರೆ ಮಾಡಿ ಹರಸಿದ ಪ್ರಥಮ ಶುಭ ಹಾರೈಕೆಯ ಪ್ರೀತಿಯ ಓಲೆ..ಈ ಪ್ರೀತಿ ಸಂಕೇತಕ್ಕೆ 34ವರ್ಷ ವಯಸ್ಸು.. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು! ಧನ್ಯೋಸ್ಮಿ ರಾಯರೇ ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ...' ಎಂದು ಬರೆದುಕೊಂಡಿದ್ದಾರೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಿನ್ನೆ ಹುಟ್ಟಿದಬ್ಬ ಆಚರಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಸರಳವಾಗಿ ಹುಟ್ಟಿದಬ್ಬವನ್ನು ಆಚರಿಸಿಕೊಂಡರು.

ಜಗ್ಗೇಶ್ ಪ್ರೀತಿ ಹೆಸರು ಮಂತ್ರಾಲಯದ ಬಂಡೆ ಮೇಲೆ!