Asianet Suvarna News Asianet Suvarna News

ಬೆಂಗಳೂರು ಮಹಾಮಳೆ: ನಟ ಜಗ್ಗೇಶ್ ಐಷಾರಾಮಿ ಕಾರು ಮುಳುಗಡೆ

ಬೆಂಗಳೂರು ಮಹಾಮಳೆಗೆ ಹಿರಿಯ ನಟ ಜಗ್ಗೇಶ್ ಐಷಾರಾಮಿ ಕಾರು ಮುಳುಗಡೆಯಾಗಿದೆ. 

actor jaggesh bmw5 car drowned in Bengaluru rain sgk
Author
First Published May 22, 2023, 10:52 AM IST

ಬೆಂಗಳೂರಿನಲ್ಲಿ ಭಾನುವಾರ (ಮೇ 21) ಮಧ್ಯಾಹ್ನ ಸುರಿದ ಭಾರೀ ಮಳೆ ಸಾಕಷ್ಟು ಹಾನಿ ಉಂಟುಮಾಡಿದೆ. ಅನೇಕ ಕಡೆ ನೂರಾರು ಮರಗಳು ಧರೆಗೆ ಉರುಳಿದ್ದು ಆಂಧ್ರ ಪ್ರದೇಶ ಮೂಲದ ಓರ್ವ ಯುವತಿಯನ್ನು ಬಲಿ ಪಡೆದುಕೊಂಡಿದೆ.  ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುತ್ತಿದ್ದಾರೆ. ಈ ನಡುವೆ ಹಿರಿಯ ನಟ, ರಾಜಕಾರಣಿ ಜಗ್ಗೇಶ್​ ಅವರಿಗೂ ಮಳೆಯ ಎಫೆಕ್ಟ್ ತಟ್ಟಿದೆ. ಜಗ್ಗೇಶ್ ಅವರ ಐಷಾರಾಮಿ ಕಾರು ಮಳೆಗೆ ಮುಳುಗಿ ಹೋಗಿದೆ. ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಜಗ್ಗೇಶ್ ಕಾರು ನೀರಿನಲ್ಲಿ ಮುಳುಗಿದೆ. 

ಈ ಬಗ್ಗೆ ಸ್ವತಃ ನಟ ಜಗ್ಗೇಶ್ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಶೇರ್ ಮಾಡಿದ್ದಾರೆ. ಕಾರು ಮುಳುಗಿದ ಸ್ಥಳದಲ್ಲಿಂದ ನೀರು ಹೊರತೆಗೆಯುವ ಕೆಲಸ ಆಗುತ್ತಿದ್ದು ಬಹುತೇಕ ನೀರು ಹೊರತೆಗೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಗ್ಗೇಶ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ತನ್ನ ಸ್ನೇಹಿತನ ಮನೆಯಲ್ಲಿ ಕಾರು ನಿಲ್ಲಿಸಿದ್ದರು. ತನ್ನ ಮನೆಯ ರಿಪೇರಿ ಕಾರ್ಯ ನಡೆಯುತ್ತಿರುವ ಪ್ರಯುಕ್ತ ಸ್ನೇಹಿತನ ಮನೆಯಲ್ಲಿ ಕಾರು ನಿಲ್ಲಿಸಿದ್ದರು. ಆದರೆ  ಬೇಸ್‌ಮೆಂಟ್‌ಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.  

ಅರವತ್ತಾಗಿದೆ ಅಂದ್ಕೋಬೇಡಿ, ವಯಸ್ಸಾಯ್ತು ಅನ್ನೋದೆಲ್ಲ ನಿಮ್ಮ ತಲೆಗೆ ಬರದೇ ಇರಲಿ ಅಂತಾರೆ ಜನ: ಜಗ್ಗೇಶ್‌

'ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. 5hp motor ಬಳಸಿ ನೀರು ಹೊರಹಾಕಿಸಲಾಯಿತು. ಇಂಥ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದ್ದಿದ್ದು ಆಶ್ಚರ್ಯ' ಎಂದು ಹೇಳಿದ್ದಾರೆ. ಜಗ್ಗೇಶ್ ಟ್ವೀಟ್‌ಗೆ ಪರ ವಿರೋಧ ಕಾಮೆಂಟ್‌ಗಳು ಬರುತ್ತಿವೆ.

ರಾಘವೇಂದ್ರ ಸ್ಟೋರ್ಸ್‌ ಅಂದ್ರೆ ಲಾಫಿಂಗ್‌ ಸ್ಟೋ​ರ್ಸ್‌: ಚಿತ್ರದ ಬಗ್ಗೆ ಸಂತೋಚ್ ಆನಂದ್‌ರಾಮ್‌ ಮಾತು

ಜಗ್ಗೇಶ್ ಯಾವುದೇ ವಿಚಾರಗಳನ್ನಾದರೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಜಗ್ಗೇಶ್ ತನ್ನ ಕಾರು ಮುಳುಗಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.  ಜಗ್ಗೇಶ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ರಾಘವೇಂದ್ರ ಸ್ಟೋರ್ ಸಿನಿಮಾ ಮೂಲಕ ಅಭಿಮಾವಿಗಳ ಮುಂದೆ ಬಂದಿದ್ದರು. ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಕೆಲವೇ ದಿನಕ್ಕೆ ಇದೀಗ ರಾಘವೇಂದ್ರ ಸ್ಟೋರಿ ಒಟಿಟಿಗೆ ಎಂಟ್ರಿ ಕೊಟ್ಟಿದೆ.  
 

Latest Videos
Follow Us:
Download App:
  • android
  • ios