ಸ್ಯಾಂಡಲ್‌ವುಡ್‌ ಗೋಲ್ಡನ್ ಸ್ಟಾರ್ ಗಣೇಶ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ತಮ್ಮ ಫ್ಯಾಮಿಲಿಗೆ ತಪ್ಪದೇ ಟೈಂ ನೀಡುತ್ತಾರೆ. ಅದರಲ್ಲೂ ಪುತ್ರಿ ಚಾರಿತ್ರ್ಯ ಹಾಗೂ ಪುತ್ರ ವಿಹಾನ್‌ ಜೊತೆ ಕಳೆದ ಅದ್ಭುತ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. 

ಗಣೇಶನ ಮನೆಯಲ್ಲಿ ತಾರೆಗಳ ದೀಪಾವಳಿ,  ಕಳೆ ಹೆಚ್ಚಿಸಿದ ಅಮೂಲ್ಯಾ

ಲಾಕ್‌ಡೌನ್‌ ಸಮಯದಲ್ಲಿ ಗಣೇಶ್ ಪುತ್ರಿ ಮನೆಯಲ್ಲಿ ಅಡುಗೆ ಮಾಡುವುದನ್ನು ಹಾಬಿ ಮಾಡಿಕೊಂಡಿದ್ದಾರೆ. ಓದಿನ ಜೊತೆಗೆ ಅಡುಗೆ ಮಾಡುತ್ತಾರೆ. ಈ ಸಲ ಮನೆಯಲ್ಲಿ ಮಾಡುತ್ತಿರುವ ಆಮ್ಲೇಟ್‌ ರೆಸಿಪಿಯನ್ನು ಇಂಗ್ಲಿಷ್‌ನಲ್ಲಿ ಹೇಳಿ ಆನಂತರ ಒಂದೇ ವಾಕ್ಯದಲ್ಲಿ ಕನ್ನಡದಲ್ಲಿ ಹೇಳಿರುವುದು ನೆಟ್ಟಿಗರ ಗಮನ ಸೆಳೆದಿದೆ.

 

 
 
 
 
 
 
 
 
 
 
 
 
 
 
 

A post shared by Ganesh (@goldenstar_ganesh)

ವಿಡಿಯೋ ವೈರಲ್:
'ಏನು ಮಾಡುತ್ತಿರುವೆ ಮಗಳೆ?' ಎಂದು ಗಣೇಶ್ ಪ್ರಶ್ನಿಸಿದ್ದಾರೆ. ಅದಕ್ಕೆ ಚಾರಿತ್ರ್ಯ ಇಂಗ್ಲಿಷ್‌ನಲ್ಲಿ ನಾಲ್ಕೈದು ಸಾಲುಗಳಲ್ಲಿ ವರ್ಣಿಸಿದ್ದಾರೆ. ಪೂರ್ತಿ ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದ ಗಣೇಶ್ ಕೊನೆಯದಾಗಿ ಮಗಳೇ ಏನ್ ಮಾಡ್ತಿದ್ಯಾ ಎಂದು ಕನ್ನಡದಲ್ಲಿ ಕೇಳಿದ್ದಕ್ಕೆ ಪಕ್ಕಾ ಮಂಡ್ಯ ಗೌಡರ ಶೈಲಿಯಲ್ಲಿ 'ಆಮ್ಲೇಟ್ ಮಾಡ್ತಿದ್ದೀನಿ' ಎಂದು ಹೇಳಿದ್ದಾರೆ. 

ಗೋಲ್ಡನ್‌ ಸ್ಟಾರ್ ಬರ್ತಡೇಗೆ ಮತ್ತೊಂದು ಗುಡ್ ನ್ಯೂಸ್; ಇದು ಪ್ರೊಡಕ್ಷನ್‌ ನಂ.7! 

ಗಣೇಶ್ ಪುತ್ರಿ ಇಷ್ಟು ಚೆನ್ನಾಗಿ ಭಾಷೆ ಮಾತನಾಡುವುದನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಮತ್ತೊಂದೆಡೆ ಇಂಗ್ಲೀಷ್‌ನಲ್ಲಿ ಉತ್ತರಿಸುತ್ತಿದ್ದ ಮಗಳಿಂದ ಕನ್ನಡದಲ್ಲಿ ಉತ್ತರ ಪಡೆದಿರುವುದಕ್ಕೆ ಗಣೇಶ್‌ ಅವರನ್ನೂ ಭೇಷ್ ಎದಿದ್ದಾರೆ ನೆಟ್ಟಿಗರು.