* ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟ ಸಂಚಾರಿ ವಿಜಯ್* ಅಂಗಾಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ನಟ* ವಿಜಯ್ ಅವರ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು* ದಯವಿಟ್ಟು ಇಂಥ ವಿಚಾರಗಳನ್ನು ಇಲ್ಲಿಗೆ ನಿಲ್ಲಿಸಿ ಎಂದ ಕುಟುಂಬ

ಬೆಂಗಳೂರು(ಜೂ. 22) ಅಪಘಾತದಿಂದ ನಿಧನಹೊಂದಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಂದಂತಿಗಳ ಬಗ್ಗೆ ವಿಜಯ್ ಅಣ್ಣ ಸ್ಪಷ್ಟನೆ ನೀಡಿದ್ದಾರೆ.

ಸಂಚಾರಿ ವಿಜಯ್ ಹಿನ್ನೆಲೆ ಮತ್ತು ಕುಟುಂಬದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಬಗ್ಗೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ವಿಜಯ್ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ.

ಸಂಚಾರಿ ವಿಜಯ್ ಬೈಕ್ ಅಪಘಾತವಾಗಿದ್ದು ಹೇಗೆ?

ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿದ ಸಂಚಾರಿ‌ ವಿಜಯ್ ಸಹೋದರ ವಿರುಪಾಕ್ಷ ಬಸವರಾಜಯ್ಯ ಮನವಿ ಮಾಡಿಕೊಂಡಿದ್ದಾರೆ. ನಮ್ಮ ತಂದೆ ತಾಯಿ ಇಬ್ಬರು ಕಲಾವಿದರು ಎಂಬುದನ್ನು ತಿಳಿಸಿದ್ದಾರೆ.

ವಿಜಯ್‌ ನಿಧನದ ಬಳಿಕ ಯಾಕೆ ಈಗ ಚರ್ಚೆ ಮಾಡುತ್ತಿದ್ದೀರಿ.? ಜಾತಿ ವಿಚಾರವನ್ನು ಎಳೆದು ತರುವುದು ಯಾಕೆ? ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.