Asianet Suvarna News Asianet Suvarna News

ದರ್ಶನ್ ಅಭಿಮಾನಿಗಳ ಟೀಕೆಗೆ ಖಡಕ್ ಉತ್ತರ ಕೊಟ್ಟ ದುನಿಯಾ ವಿಜಯ್; ನಿಜಕ್ಕೂ ಏನ್ ಆಯ್ತು?

ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳಿಗೆ ಖಡಕ್ ಉತ್ತರ ಕೊಟ್ಟ ಒಂಟಿ ಸಲಗ. ನಿಜಕ್ಕೂ ಏನ್ ಅಯ್ತು?
 

Actor Duniya Vijya reaction to Darshan fan viral statement vcs
Author
First Published Aug 17, 2024, 1:53 PM IST | Last Updated Aug 19, 2024, 1:32 PM IST

ಕನ್ನಡ ಚಿತ್ರರಂಗದ ಒಂಟಿ ಸಲಗ ದುನಿಯಾ ವಿಜಯ್ ನಿರ್ದೇಶಕನಾಗಿ ಹಾಗೂ ನಟನಾಗಿ ಮತ್ತೊಮ್ಮೆ ಗೆದ್ದಿದ್ದಾರೆ. ವಿಜಯ್ ಪ್ರೀತಿಯ ಸಿನಿಮಾ ಭೀಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ರಿಲೀಸ್‌ ದಿನದಿಂದ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಸಿನಿಮಾದ ಸಕ್ಸಸ್‌ ಮೀಟ್‌ ಹಮ್ಮಿಕೊಂಡಿದ್ದರು ಆಗ ದರ್ಶನ್ ಅಭಿಮಾನಿಗಳು ನೀಡಿದ ವೈರಲ್ ಹೇಳಿಕೆಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. 

ಹೌದು! ದರ್ಶನ್ ಜೈಲು ಸೇರಿದ ಮೇಲೆ ಯಾವ ಸ್ಟಾರ್ ನಟರ ಸಿನಿಮಾನೂ ರಿಲೀಸ್ ಆಗಿಲ್ಲ. ದರ್ಶನ್ ಹೊರ ಬರುವವರೆಗೂ ನಾವು ಯಾವ ಸಿನಿಮಾನೂ ನೋಡಲ್ಲ ಎಂದು ಅಭಿಮಾನಿಗಳು ಪ್ರಾಮಿಸ್ ಮಾಡಿದ್ದರು. ಅಲ್ಲದೆ ರಿಲೀಸ್ ಆದ ಸಿನಿಮಾಗಳು ಒಂದು ವಾರವೂ ಮುಟ್ಟಿಲ್ಲ ಹೀಗಾಗಿ ದರ್ಶನ್ ಸಿನಿಮಾ ನೋಡುವುದನ್ನು ಬಿಟ್ಟಿರುವುದಕ್ಕೆ ಚಿತ್ರರಂಗಕ್ಕೆ  ಈ ಹೊಡೆತ ಎಂದು ರೊಚ್ಚಗೆದಿದ್ದರು. ಭೀಮಾ ಸಿನಿಮಾ ರಿಲೀಸ್ ಆಗಿ ಅವರ ಹೇಳಿಕೆಯನ್ನು ರಾಂಗ್‌ ಎಂದು ಪ್ರೂವ್ ಮಾಡಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಈ ವಿಚಾರದ ಬಗ್ಗೆ ವಿಜಯ್ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ದಿನ ಹುಟ್ಟಿದ ಮಗಳ ಫೋಟೋವನ್ನು ವರಮಹಾಲಕ್ಷ್ಮಿ ಹಬ್ಬದಂದು ರಿವೀಲ್ ಮಾಡಿದ ಕಾವ್ಯಾ ಗೌಡ!

'ಅವರವರ ವೈಯಕ್ತಿಕ ಭಾವನೆಗಳಿಗೆ ನಾನು ಗೌರವ ಕೊಡೋಣ. ಯಾರು ನೋಡಲ್ಲ ಅಂದವರಿಗೆ ನಾನು ಗೌರವ ಕೊಡೋಣ. ಸಂತೋಷ, ಅದು ನಿಮ್ಮ ಭಾವನೆ. ಹಾಗಿದ್ದರೆ ನೋಡುತ್ತಿರುವವರು ಯಾರು? ಹಾಗಾಗಿ ನಿಮ್ಮ ವೈಯಕ್ತಿಕ ಭಾವನೆಗೆ ನಮ್ಮ ಗೌರವಿ ಇದೆ. ಇದನ್ನು ನಾನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತೀನಿ' ಎಂದು ವಿಜಯ್ ಹೇಳಿದ್ದಾರೆ. 

ತಮಿಳು ಚಿತ್ರರಂಗಕ್ಕೆ ಹಾರಿದ ನಿಖಿಲ್ ಕುಮಾರಸ್ವಾಮಿ 'ರೈಡರ್' ನಟಿ ಸಂಪದಾ; ಚಿನ್ನದ ಮೊಟ್ಟೆ ನೀವು ಎಂದ ನೆಟ್ಟಿಗರು!

ದರ್ಶನ್ ಜೈಲು ಸೇರಿರುವುದಕ್ಕೆ ಬೇಸರ ವ್ಯಕ್ತ ಪಡಿಸುವ ಬದಲು ಈ ರೀತಿ ಗೌರವಿಸುತ್ತೀನಿ ಹಾಗೆ ಹೀಗೆ ಎಂದು ವಿಜಯ್ ನೀಡಿರುವ ಹೇಳಿಕೆ ಸರಿ ಅಲ್ಲ ಎಂದು ದರ್ಶನ್ ಅಭಿಮಾನಿಗಳು ಮತ್ತೆ ಅದಕ್ಕೂ ಕಿರಿಕಿರಿ ಮಾಡುತ್ತಿದ್ದಾರೆ. 

ದಾಸನಿಗೆ ಮಿತ್ರ ಕಂಟಕ!

Latest Videos
Follow Us:
Download App:
  • android
  • ios