ಸ್ಯಾಂಡಲ್‌ವುಡ್ ಬಹು ನಿರೀಕ್ಷಿತ ಚಿತ್ರ 'ಸಲಗ' ಟೀಸರ್‌ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಲು ಶುರು ಮಾಡಿದೆ. ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ಸಲುವಾಗಿ ಜನವರಿ 19 ಮಧ್ಯರಾತ್ರಿಯೇ ಅದ್ಧೂರಿಯಾಗಿ ಟೀಸರ್‌ ಬಿಡುಗಡೆಯಾಗಿದೆ. 

ಹುಟ್ಟುಹಬ್ಬದ ದಿನವೇ ಸ್ಟೇಷನ್ ಮೆಟ್ಟಿಲೇರ್ತಾರಾ ದುನಿಯಾ ವಿಜಿ?

ಟೀಸರ್ ನೋಡಿದರೆ ಕನ್ನಡ ಚಿತ್ರರಂಗಕ್ಕೆ ಭೂಗತ ಲೋಕ ಪರಿಚಯಿಸಿದಂತಿದೆ. ನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ದುನಿಯಾ ವಿಜಯ್ ಲೈಫ್‌ನಲ್ಲಿ ಹೊಸ ಅಂಡರ್‌ವರ್ಲ್ಡ್ ಚಾಪ್ಟರ್ ಈ ಚಿತ್ರದ ಮೂಲಕ ಆರಂಭವಾದಂತೆ ಭಾಸವಾಗುತ್ತಿದೆ.

ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್ ಆಗಿ ಡಾಲಿ ಧನಂಜಯ್ ಕಾಣಸಿಕೊಂಡರೆ, ಸಾವಿತ್ರಿ ಅನ್ನೋ ವಿಲನ್‌ ಪಾತ್ರ ಗಮನ ಸೆಳೆದಿದೆ. ಇನ್ನು ಟೀಸರ್‌ ಶುರುವಾಗುವುದೇ 'ವರ್ಲ್ಡ್‌ ಯಾವುದೇ ಕಲರ್‌ ಇದ್ರೂ ಈ ಅಂಡರ್‌ವರ್ಲ್ಡ್‌ ಮಾತ್ರ ಕೆಂಪು ಕಲ್ಲರ್ರೇ ಇರುತ್ತೆ' ಡೈಲಾಗ್‌ ಮೂಲಕ. 

ಅಶ್ವಿನಿ ಆಡಿಯೋ ಕಂಪನಿ 'ಎ2' ಹೆಸರಿನಲ್ಲಿ ಮತ್ತೆ 'ಸಲಗ' ಚಿತ್ರದ ಆಡಿಯೋ ಮಾರುಕಟ್ಟೆಯಲ್ಲಿ ರಿಲೀಸ್‌ ಮಾಡಿರುವುದು ಮತ್ತೊಂದು ಹೈಲೈಟ್‌. ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್‌ ಮಾಡಿರುವ ಆ್ಯಂಟೋನಿ ದಾಸ್‌ ಹಾಡಿರುವ 'ನಾಲ್ಕು ಕ್ವಾರ್ಟರ್‌ ಸೂರಿ ಅಣ್ಣ'.  ಲಾಂಗ್‌ ಹಿಡಿದ ದುನಿಯಾ ವಿಜಯ್‌ ಹೇಗೆ ಚಿತ್ರ ನಿರ್ದೇಶನ ಮಾಡಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ದುನಿಯಾ ವಿಜಿ ಬಾಳಿನ 'ಕೀರ್ತಿ'ಯ ಅಂದಿನ ನೆನಪಿದು

ಇದೇ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ವಿಜಯ್ ಕೇಕನ್ನು ಖಡ್ಗದಲ್ಲಿ ಕಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ತಾವು ಮಾಡಿದ ತಪ್ಪನ್ನು ಅರಿತ 'ಮಾಸ್ತಿಗುಡಿ' ಚಿತ್ರದ ನಾಯಕ ವಿಜಿ ಸಾರಿ ಕೇಳಿದ್ದಾರೆ. ಅಗತ್ಯವಿದ್ದರೆ, ಠಾಣೆಗೆ ತೆರಳಿ ಕ್ಷಮೆ ಕೋರುವುದಾಗಿಯೂ ಹೇಳಿದ್ದಾರೆ.