ನಟ ಡಾಲಿ ಧನಂಜಯ್ ಫೆಬ್ರವರಿ 15 -16 ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರೊಂದಿಗೆ ವಿವಾಹವಾಗಲಿದ್ದಾರೆ. ಅಭಿಮಾನಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು,15 ರಂದು ಸಂಜೆ 6 ರಿಂದ ಆರತಕ್ಷತೆ ಹಾಗೂ 16 ರಂದು ಬೆಳಿಗ್ಗೆ 7.20 ರಿಂದ10 ರವರೆಗೆ ಮುಹೂರ್ತ ನಡೆಯಲಿದೆ. ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುವ ಮದುವೆಗೆ ಡಾಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.
ಸ್ಯಾಂಡಲ್ವುಡ್ ನಟ ರಾಕ್ಷಸ ಡಾಲಿ ಧನಂಜಯ (dhananjaya), ಬ್ಯಾಚ್ಯುಲರ್ ಲೈಫ್ ಗೆ ಶುಭಂ ಹೇಳುವ ಸಮಯ ಬಂದಾಗಿದೆ. ಡಾಲಿ ಧನಂಜಯ ಇನ್ನೇನು ಕೆಲವೇ ದಿನಗಳಲ್ಲಿ ಜಂಟಿಯಾಗಲಿದ್ದಾರೆ. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ (Most Eligible Bachelor) ಎಂದೇ ಪ್ರಸಿದ್ಧಿ ಪಡೆದಿದ್ದ ನಟ ಡಾಲಿ ಧನಂಜಯ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಫೆಬ್ರವರಿ 15 -16ರಂದು ಡಾಲಿ ಧನಂಜಯ ಡಾಕ್ಟ್ರಮ್ಮ ಧನ್ಯತಾ (Dhanyata) ಅವರನ್ನು ಮದುವೆ ಆಗ್ತಿದ್ದಾರೆ.
ಫೆಬ್ರವರಿ 15 ಮತ್ತು 16ರಂದು ಮೈಸೂರಿನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಡಾಲಿ ಧನಂಜಯ ಈಗಾಗಲೇ ಗಣ್ಯರಿಗೆ, ಆಪ್ತರಿಗೆ, ಸ್ನೇಹಿತರಿಗೆ, ಕುಟುಂಬಸ್ಥರಿಗೆ ಆಹ್ವಾನ ನೀಡಿದ್ದಾರೆ. ಕಳೆದ ಎರಡು ತಿಂಗಳಿಂದ ಡಾಲಿ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಭಾವಿ ಪತ್ನಿ ಧನ್ಯತಾ ಜೊತೆ ಸೆಲೆಬ್ರಿಟಿಗಳ ಮನೆಗೆ ತೆರೆಳಿ ಮದುವೆಗೆ ಆಹ್ವಾನಿಸಿದ್ದಾರೆ. ಬರೀ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರವರೆಗೆ ಡಾಲಿ ಮದುವೆಗೆ ವಿಶೇಷ ಆಹ್ವಾನವಿದೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಕರೆಯೋಲೆ ನೀಡ್ತಾನೆ ಇದ್ದಾರೆ ಡಾಲಿ ಧನಂಜಯ.
ಡಾಲಿ ಧನಂಜಯ್ ಭಾವಿ ಪತ್ನಿಯ ಹೆರಿಗೆ ಸ್ಟೋರಿ ಸಕತ್ ಇಂಟರೆಸ್ಟಿಂಗ್: ಅವ್ರ ಮಾತಲ್ಲೇ ಕೇಳಿ...
ಇನ್ಸ್ಟಾಗ್ರಾಮ್ ನಲ್ಲಿ ಒಂದು ದಿನದ ಹಿಂದೆ ಡಾಲಿ ಸುಂದರ ವಿಡಿಯೋ ಒಂದನ್ನು ಹಂಚಿಕೊಂಡು ಅಭಿಮಾನಿಗಳನ್ನು ಆಹ್ವಾನಿಸಿದ್ದರು. ಖಾಲಿಯಿದ್ದ ಡಾಲಿ ಮನಸ್ಸಿಗೆ ಪ್ರೀತಿ ಎಂಬ ಔಷಧಿ ನೀಡೋಕೆ ಬಂದಿದ್ದು ಡಾಕ್ಟ್ರಮ್ಮ. ಇನ್ಮುಂದೆ ಸಿಂಗಲ್ ಲೈಫ್ ಗೆ ಶುಭಂ ಹೇಳುವ ಸಮಯ ಬಂದಾಯ್ತು. ನೂರು ಬ್ಯಾಚ್ಯುಲರ್ ಪಾರ್ಟಿ ಬರಲಿ, ಸಾವಿರ ಸೋಲೋ ಟ್ರಿಪ್ ಇರಲಿ, ನಿನ್ನ ಜೊತೆ ರೀಲ್ಸ್ ಮಾಡ್ಕೊಂಡು ಇದ್ದುಬಿಡ್ತೇನೆ. ಬನ್ನಿ ನಾವಿಬ್ಬರು ಹಸೆಮಣೆ ಏರ್ತಿದ್ದರೆ ಅದಕ್ಕೆ ನೀವು ಸಾಕ್ಷ್ಯವಾಗ್ಬೇಕು. ಬ್ಯಾಚ್ಯುಲರ್ ಗಂಡಿಗೆ ಬೆಲೆ ಇಲ್ಲ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನು ಉತ್ತಿ ಬಿತ್ತಬೇಕಾಗಿದ್ದು ಪ್ರೀತಿಯ ತೋಟ, ಮಿಸ್ ಮಾಡದೆ ಬಂದು ಹೋಳಿಕೆ ಊಟ ಮಾಡಿಕೊಂಡು ಹೋಗಿ ಅಂತ ವಿಡಿಯೋ ಮೂಲಕ ಅಭಿಮಾನಿಗಳನ್ನು ಡಾಲಿ ಆಹ್ವಾನಿಸಿದ್ದರು. ಈಗ ಆಮಂತ್ರಣ ಪತ್ರಿಕೆ ಫೋಟೋ ಹಂಚಿಕೊಂಡು ಅಭಿಮಾನಿಗಳನ್ನು ತಮ್ಮ ಮದುವೆಗೆ ಸ್ವಾಗತಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿರುವ ಡಾಲಿ, ಬಂದು ಆಶೀರ್ವದಿಸಿ ಅಂತ ಶೀರ್ಷಿಕೆ ಹಾಕಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಫೋಟೋ ಇದೆ. ಪ್ರೀತಿಯ ಅಭಿಮಾನಿಗಳಿಗೆ ಸ್ವಾಗತ ಎಂದು ಬರೆಯಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಪಾರ್ಕಿಂಗ್ ಎಲ್ಲಿ ಎಂಬುದನ್ನೂ ಹೇಳಲಾಗಿದೆ.
ವಿದ್ಯಾಪತಿ ದ್ವಾರದ ಮೂಲಕ ಅಭಿಮಾನಿಗಳು ಮದುವೆಗೆ ಪ್ರವೇಶ ಪಡೆಯಬಹುದು. ಫೆಬ್ರವರಿ 15ರಂದು ಆರತಕ್ಷತೆ ನಡೆಯಲಿದೆ. ಶನಿವಾರ 6 ಗಂಟೆಯಿಂದ ಆರತಕ್ಷಣೆ ಕಾರ್ಯಕ್ರಮ ಶುರುವಾಗಲಿದೆ. ಮದುವೆ ಮುಹೂರ್ತ ಫೆಬ್ರವರಿ 16 ಬೆಳಿಗ್ಗೆ 7. 20ರಿಂದ 10 ಗಂಟೆಯವರೆಗೆ. ಸ್ಥಳ ವಸ್ತುಪ್ರದರ್ಶನ ಮೈದಾನ ಮೈಸೂರು. ವಸ್ತು ಪ್ರದರ್ಶನ ಮೈದಾನದ ಮುಂಭಾಗ ಇರುವ ದೊಡ್ಡಕೆರೆಯಲ್ಲಿ ಅಭಿಮಾನಿಗಳು ತಮ್ಮ ವಾಹನವನ್ನು ಪಾರ್ಕ್ ಮಾಡಬಹುದು ಎಂಬ ಮಾಹಿತಿ ಇದೆ.
ಮದುವೆ ಆಹ್ವಾನ ಪತ್ರಿಕೆ ನೋಡಿ ನನಗೆ ಭಯವಾಗಿತ್ತು: ಡಾಲಿ ಧನಂಜಯ
ತಮ್ಮ ಮದುವೆಯಲ್ಲಿ ಅಭಿಮಾನಿಗಳಿಗಾಗಿಯೇ ಡಾಲಿ ವಿಶೇಷ ವ್ಯವಸ್ಥೆ ಮಾಡಿಸಿದ್ದಾರೆ. ಮದುವೆಗೆ ಎಷ್ಟೇ ಜನ ಬರಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಧನಂಜಯ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳಿಲ್ಲದೆ ನಾವಿಲ್ಲ. ಹಾಗಾಗಿ ಅವರೆಲ್ಲರೂ ಮದುವೆಗೆ ಬರಬೇಕೆಂದು ಡಾಲಿ ಪತ್ರಿಕಾಗೋಷ್ಠಿಯಲ್ಲೂ ಹೇಳಿದ್ದರು. ಡಾಲಿ ಧನಂಜಯ ಮದುವೆಗೆ ಇಡೀ ಮೈಸೂರೇ ಸಿದ್ಧವಾದಂತಿದೆ. ಹರಸಿ, ಹಾರೈಸಲು ಅಭಿಮಾನಿಗಳ ದಂಡೇ ಮದುವೆಗೆ ಬರುವ ನಿರೀಕ್ಷೆ ಇದೆ.
