ಇಂದು ಮದ್ಯಾನ್ಹ 3 ಗಂಟೆಗೆ ವಿಜಯಲಕ್ಷ್ಮೀ ಹಾಗೂ ಝೈದ್ ಖಾನ್ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಕುತೂಹಲ ಹುಟ್ಟಿಸಿದೆ. ಕಾರಣ, ಸದ್ಯಕ್ಕೆ ನಟ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮೀ ಸೇರಿದಂತೆ, ದರ್ಶನ್ ಆಪ್ತಬಳಗದ ಝೈದ್ ಖಾನ್, ಅರ್ಜುನ ರಮೇಶ್ ಸೇರಿದಂತೆ ಹಲವರು ತಿರುಗಿಬಿದ್ದಿದ್ದಾರೆ. ಮುಂದೇನು..?

ಇಂದು ದರ್ಶನ್ ಭೇಟಿಗೆ ಝೈದ್ ಖಾನ್, ವಿಜಯಲಕ್ಷ್ಮಿ ಸಿದ್ಧತೆ; ಮಧ್ಯಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡೋ ಸಾಧ್ಯತೆ!

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ (Darshan Thoogudeepa) ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದು ಗೊತ್ತೇ ಇದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ದರ್ಶನ್ ಆಪ್ತ, ಸಚಿವ ಜಮೀರ್ ಅಹ್ಮದ್ ಖಾನ್ ಮಗ ನಟ ಝೈದ್ ಖಾನ್ ಇಂದು ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ.

ಇಂದು ದರ್ಶನ್ ಭೇಟಿಗೆ ಝೈದ್ ಖಾನ್, ವಿಜಯಲಕ್ಷ್ಮಿ ಸಿದ್ಧತೆ

ಹೌದು, ನಟ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಮಧ್ಯಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರಕ್ಕೆ ಹೋಗಲಿರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ. ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ಮಧ್ಯೆ ನಡೆಯುತ್ತಿರುವ ಇತ್ತೀಚಿನ ಜಟಾಪಟಿ ಹಾಗೂ ಧನ್ವೀರ್ ಗೌಡ ಹಾಗೂ ಝೈದ್ ಖಾನ್ ನಡುವಿನ ಸಮರದ ಹೊತ್ತಲ್ಲಿ ನಡೆದಿರುವ ಈ ಬೆಳವಣಿಗೆ ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿದೆ.

ಸದ್ಯಕ್ಕೆ ನಟ ದರ್ಶನ್ ಕೇಸ್ ಎನ್ನೋದು ಯಾರೂ ಏನೂ ಹೇಳಲಿಕ್ಕಾಗದ ಪರಿಸ್ಥಿತಿಯಲ್ಲಿ ಇದೆ ಎನ್ನಬಹುದು. ಅದ್ಯಾವಾಗ ಏನಾಗುತ್ತೋ, ಬೇಲ್ ಸಿಗುತ್ತೋ ಇಲ್ಲವೋ, ದರ್ಶನ್ ಅಪರಾಧಿಯಾಗಿ ಜೈಲಲ್ಲಿಯೇ ಇರುತ್ತಾರೋ ಅಥವಾ ನಿರಪರಾಧಿ ಎನ್ನಿಸಿಕೊಂಡು ಜೈಲಿನಿಂದ ಹೊರಗಡೆ ಬರುತ್ತಾರೋ? ಯಾವುದೇ ಪ್ರಶ್ನೆಗೆ ಸದ್ಯಕ್ಕೆ ಸರಿಯಾದ ಉತ್ತರ ಸಿಗುತ್ತಿಲ್ಲ. ಇದೇ ವೇಳೆ, ನಟ ದರ್ಶನ್ ಆಪ್ತರಲ್ಲೇ ಇಬ್ಭಾಗ ಆಗಿಹೋಗಿದೆ ಎನ್ನಬಹುದು.

ಒಂದು ಕಾಲದಲ್ಲಿ ನಟ ದರ್ಶನ್ ಆಪ್ತರು ಎಂದೇ ಗುರುತಿಸಿಕೊಂಡಿದ್ದವರು ಧನ್ವೀರ್ ಗೌಡ, ಅರ್ಜುನ್ ರಮೇಶ್, ಝೈದ್ ಖಾನ್!

ಒಂದು ಕಾಲದಲ್ಲಿ ನಟ ದರ್ಶನ್ ಆಪ್ತರು ಎಂದೇ ಗುರುತಿಸಿಕೊಂಡಿದ್ದ ಧನ್ವೀರ್ ಗೌಡ, ಅರ್ಜುನ್ ರಮೇಶ್, ಝೈದ್ ಖಾನ್ ಎಲ್ಲರೂ ಈಗ ಬೇರೆಬೇರೆ ಆಗಿಹೋಗಿದ್ದಾರೆ. ಇತ್ತೀಚೆಗೆ, ನಟ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮೀ ಮ್ಯಾನೇಜರ್ ದೂರು ಕೊಟ್ಟಿದ್ದು, ವಿಜಯಲಕ್ಷ್ಮೀ ಕಡೆಯವರು ರೌಡಿಗಳನ್ನು ಕಳುಹಿಸಿ ಬೆದರಿಸಿದ್ದಾರೆ ಎಂದು ಧನ್ವೀರ್ ಗೌಡ ತಂದೆ ಪ್ರತಿದೂರು ಕೊಟ್ಟಿರುವುದು, ದರ್ಶನ್ ಆಪ್ತ ಅರ್ಜುನ್ ರಮೇಶ್ ಧನ್ವೀರ್ ವಿರುದ್ಧ ಮಾತನ್ನಾಡುತ್ತಿರುವುದು, ಝೈದ್ ಖಾನ್ ಧನ್ವೀರ್ ವಿರುರ್ದಧ ಸಮರ ಸಾರಿರುವುದು ಹೀಗೆ ಎಲ್ಲ ಬೆಳವಣಿಗೆ ಇಡೀ ರಾಜ್ಯದ ಬಹುತೇಕ ಜನರಿಗೆ ಗೊತ್ತು.

ಇದೀಗ, ಹೊಸ ಬೆಳವಣಿಗೆ ನಡೆದಿದ್ದು, ಇಂದು ಮದ್ಯಾನ್ಹ 3 ಗಂಟೆಗೆ ವಿಜಯಲಕ್ಷ್ಮೀ ಹಾಗೂ ಝೈದ್ ಖಾನ್ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದೀಗ ಹೊಸ ಕುತೂಹಲ ಹುಟ್ಟಿಸಿದೆ. ಕಾರಣ, ಸದ್ಯಕ್ಕೆ ನಟ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮೀ ಸೇರಿದಂತೆ, ದರ್ಶನ್ ಆಪ್ತಬಳಗದ ಝೈದ್ ಖಾನ್, ಅರ್ಜುನ ರಮೇಶ್ ಸೇರಿದಂತೆ ಹಲವರು ತಿರುಗಿಬಿದ್ದಿದ್ದು, ಅದೇ ಟಾಪಿಕ್ ಇಂದ ನಟ ದರ್ಶನ್ ಅವರೊಂದಿಗೆ ಮಾಡಲಿರುವ ಭೇಟಿಯಲ್ಲಿ ಚರ್ಚೆ ಆಗಲಿರುವುದು ಪಕ್ಕಾ ಎನ್ನಬಹುದು. ದರ್ಶನ್ ಭೇಟಿಯಾದರೆ, ಆ ಬಳಿಕ ಅದೇನು ಬೆಳವಣಿಗೆ ನಡೆಯಬಹುದು, ವಿಜಯಲಕ್ಷ್ಮೀ ಹಾಗೂ ಟೀಮ್ ಮುಂದಿನ ಹೆಜ್ಜೆ ಏನಿರಬಹುದು ಎಂಬ ಕುತೂಹಲ ಈಗ ಎಲ್ಲರನ್ನೂ ಕಾಡುತ್ತಿದೆ.