ಪವಿತ್ರಾ ಗೌಡ ರೆಡಿಯಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!
ವೈರಲ್ ಆಯ್ತು ಪವಿತ್ರಾ ಗೌಡ ಹೊಸ ಲುಕ್. ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್.

ಕನ್ನಡ ಚಿತ್ರರಂದ ನಟಿ, ಮಾಡಲ್ ಹಾಗೂ ಫ್ಯಾಷನ್ ಡಿಸೈನರ್ ಅಗಿರುವ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀ-ಓಪನ್ ಕಾರ್ಯಕ್ರಮ ಸಖತ್ ಅದ್ಧೂರಿಯಾಗಿ ನಡೆದಿದೆ.
ಪವಿತ್ರಾ ಗೌಡ ಮತ್ತು ಪುತ್ರಿ ಖುಷಿ ಗೌಡ ಕಾಂಚಿಪುರಂ ರೇಶ್ಮೆ ಸೀರೆಯಲ್ಲಿ ಕಂಗೊಳ್ಳಿಸಿದ್ದಾರೆ. ಸಖತ್ ಸಿಂಪಲ್ ಮೇಕಪ್ ಮತ್ತು ಹೇರ್ ಸ್ಟೈಲ್‌ನಲ್ಲಿ ಪವಿತ್ರಾ ಮಿಂಚಿದ್ದಾರೆ.
ಪವಿತ್ರಾ ಗೌಡ ಲೈಟ್ ಬ್ಲೂ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಆಪ್ತರೊಬ್ಬರು ಮೇಕಪ್ ಮಾಡಿದ್ದಾರೆ. ಸೀರೆ ಸರಿ ಮಾಡುವುದು ಹಾಗೂ ಹೇರ್ ಸ್ಟೈಲ್ ಸೆಟ್ ಮಾಡುತ್ತಿರುವ ಫೋಟೊ ವೈರಲ್ ಆಗುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಇರುವ ರೆಡ್ ಕಾರ್ಪೆಟ್ 777 ಸ್ಟುಡಿಯೋ ಓಪನಿಂಗ್ ಅದ್ಧೂರಿಯಾಗಿ ನಡೆದಿತ್ತು. ಆದರೆ ಈಗ ಮಾಡುತ್ತಿರುವ ರೀ- ಓಪನ್‌ಗೆ ಆಪ್ತರು ಮಾತ್ರ ಭಾಗಿಯಾಗಿದ್ದರು.
ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋಗೆ ಸಾಕಷ್ಟು ಐಟಂಗಳನ್ನು ತರಬೇಕು ಎಂದು ಹೊರ ರಾಜ್ಯಕ್ಕೆ ಪ್ರಯಾಣ ಮಾಡಲು ಕೊರ್ಟ್‌ನಿಂದ ಅನುಮತಿ ಪಡೆದುಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನೀವು ಈ ರೀತಿ ಫೋಟೋ ಹಾಕಬಾರದು. ನಿಮ್ಮಿಂದ ಆಗಿರುವ ಸಮಸ್ಯೆಗಳು ಸಾಕಾಗಿದೆ. ಇನ್ನು ಏನಿದ್ದರೂ ಕೆಲಸದ ಕಡೆ ಹಾಗೂ ಹಣ ಮಾಡುವ ಕಡೆ ಗಮನ ಇರಲಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.