ನಟ ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಸಂಕ್ರಾಂತಿ ವಿಶೇಷವಾಗಿತ್ತು. ಅದಕ್ಕೆ ಕಾರಣ ‘ರಾಬರ್ಟ್’ ಚಿತ್ರದ ಎರಡನೇ ಲುಕ್. ಚಿತ್ರ ತಂಡ ಮೊದಲೇ ಹೇಳಿಕೊಂಡಂತೆ ಸಂಕ್ರಾಂತಿ ಹಬ್ಬಕ್ಕೆ ಬಹು ನಿರೀಕ್ಷೆಯ ‘ ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ಮೊದಲ ಲುಕ್‌ಗಿಂತ ಇಲ್ಲಿ ದರ್ಶನ್ ಅವತಾರ ಫುಲ್ ಡಿಫರೆಂಟ್ ಆಗಿದೆ. ಇಲ್ಲೀಗ ಹನುಮನ ಅವತಾರವೆತ್ತಿದ್ದಾರೆ ದರ್ಶನ್.
ಪುತ್ರನನ್ನೇ ಉದಾಹರಣೆಯಾಗಿಸಿ ಮಕ್ಕಳಿಗೆ ಕನ್ನಡ ಕಲಿಸಿ ಎಂದ ದರ್ಶನ್!
ಹೆಗಲ ಮೇಲೆ ರಾಮನನ್ನು ಕುಳ್ಳಿರಿಸಿಕೊಂಡು ಜೈ ಶ್ರೀರಾಮ್ ಎನ್ನುವಂತಿದೆ ದರ್ಶನ್ ಲುಕ್. ರಾಮಾಯಣದಲ್ಲಿ ರಾಮನ ಬಂಟ ಹನುಮ. ಅಂತೆಯೇ ‘ರಾಬರ್ಟ್’ನಲ್ಲೂ ದರ್ಶನ್ ಆಂಜನೇಯನ ಅವತಾರವೇ ಎನ್ನುವ ಅನುಮಾನ ಮೂಡಿಸುತ್ತಿದೆ ಈ ಲುಕ್. ರಾಬರ್ಟ್ ಎನ್ನುವ ಹೆಸರು, ಆಂಜನೇಯನ ಅವತಾರ ಅದೇನು ಕನೆಕ್ಷನ್ ಎನ್ನುವ ಪ್ರಶ್ನೆ ಹುಟ್ಟು ಹಾಕಿದ್ದು ಸುಳ್ಳಲ್ಲ. ಸದ್ಯಕ್ಕೆ ಪೋಸ್ಟರ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಿಲ್ಲು ಬಾಣ ಹಿಡಿದಿರುವ ರಾಮನನ್ನು ಭುಜದ ಮೇಲೆ ಕೂರಿಸಿಕೊಂಡು ಗದೆ ಹಿಡಿದು ಹನುಮನಾಗಿ ಬಂದಿರುವ ದರ್ಶನ್ ಅವರನ್ನು ನೋಡುತ್ತಿರುವ ಅಭಿಮಾನಿಗಳಿಗೆ ಎರಡನೇ ಲುಕ್ ಸಿಕ್ಕಾಪಟ್ಟೆಕಿಕ್ ಏರುವಂತೆ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.
ದರ್ಶನ್ ಪಾಲಿಗೆ ರಾಬರ್ಟ್ ವಿಶೇಷ ವಾದ ಸಿನಿಮಾ. ಅದಕ್ಕೆ ಕಾರಣ ಇದರಲ್ಲಿ ಮೂರು ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆನ್ನುವುದು. ಈ ಪೈಕಿ ಎರಡನೇ ಶೇಡ್ ಈಗ ಎರಡನೇ ಲುಕ್ ಮೂಲಕ ಅನಾವರಣಗೊಂಡಿದೆ. ಇದು ಸೇರಿದಂತೆ ಈಗಾಗಲೇ ಹೊರ ಬಂದಿರುವ ಎರಡು ಪೋಸ್ಟರ್‌ನಲ್ಲಿ ರಾಬರ್ಟ್ ಮತ್ತು ಸಂಜಯ್ ಪಾತ್ರ ರಿವೀಲ್ ಆದಂತಿದೆ.
ಅಂಬಿ ಮನೆಗೆ ರಾಬರ್ಟ್ ವಿಸಿಟ್; ಕನ್ವರ್ ಲಾಲ್ ಜೊತೆ ಫೋಟೋ ಸೂಪರ್!
ಇಷ್ಟರಲ್ಲೇ ಇನ್ನೊಂದು ಪೋಸ್ಟರ್ ಹೊರಬರುವ ಸಾಧ್ಯತೆ ಯಿದ್ದು, ಅದು ಇನ್ನೊಂದು ಪಾತ್ರವನ್ನು ರಿವೀಲ್ ಮಾಡುವುದು ಖಚಿತ. ಒಟ್ಟಾರೆ ಪೋಸ್ಟರ್ ಮೂಲಕವೇ ತೀವ್ರ ಕುತೂಹಲ ಕೆರಳಿಸುತ್ತಿರುವ ಈ ಚಿತ್ರ ಏಪ್ರಿಲ…ನಲ್ಲಿ ತೆರೆಗೆ ಬರುವುದು ಗ್ಯಾರಂಟಿಯಂತೆ. ಈಗಾಗಲೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆಯಂತೆ.
