ರಾಜೇಂದ್ರ ಸಿಂಗ್‌ ಬಾಬು ನಿರ್ದೇ​ಶಿಸಿ, ರಾಕ್‌​ಲೈನ್‌ ವೆಂಕ​ಟೇಶ್‌ ನಿರ್ಮಾ​ಣದ ಈ ಚಿತ್ರದ ಮೂಲಕ ಚಿತ್ರವಿದು. ​ದು​ರ್ಗದ ಕೋಟೆ ನಾಡಿನ ದೊರೆ ಮದ​ಕರಿ ನಾಯ​ಕನ ಜೀವನ ಪುಟ​ಗ​ಳನ್ನು ಆಧ​ರಿ​ಸಿದ ಸಿನಿಮಾ. ಕತೆ​ಗಾರ ಬಿ ಎಲ್‌ ವೇಣು ಅವರೇ ಕತೆ, ಚಿತ್ರ​ಕತೆ ಹಾಗೂ ಸಂಭಾ​ಷಣೆ ಬರೆ​ದಿ​ದ್ದಾರೆ.

ಒಂದು ವಾರ ಚಿತ್ರೀ​ಕ​ರ​ಣ: ಚಿತ್ರ​ತಂಡ ಪ್ಲಾನ್‌ ಮಾಡಿ​ಕೊಂಡಿ​ರು​ವಂತೆ ಒಂದು ವಾರ ಕೇರ​ಳ​ದಲ್ಲಿ ಚಿತ್ರೀ​ಕ​ರಣ ನಡೆ​ಯ​ಲಿದೆ. ಫೆ.16ರ ಮಧ್ಯ​ರಾ​ತ್ರಿ​ಯಿಂದ ದರ್ಶನ್‌ ಅವರ ಹುಟ್ಟುಹಬ್ಬ ಸಂಭ್ರಮ ಶುರು​ವಾ​ಗ​ಲಿದ್ದು, ಹುಟ್ಟುಹಬ್ಬಕ್ಕೆ ಬೆಂಗ​ಳೂ​ರಿಗೆ ವಾಪಸ್ಸು ಬರ​ಲಿ​ದ್ದಾರೆ.

ದರ್ಶನ್ ಲೈಫಲ್ಲಿ ಎಂದೂ ಮರೆಯದ ದಿನವಿದು!

ಗುರು​ಕು​ಲದ ಸೆಟ್‌: ಮೊದಲ ಹಂತದ ಚಿತ್ರೀ​ಕ​ರ​ಣ​ಕ್ಕಾಗಿ ಕೇರ​ಳ​ದಲ್ಲಿ ಗುರು​ಕು​ಲದ ಸೆಟ್‌ ಹಾಕ​ಲಾ​ಗಿದ್ದು, ಈ ಸೆಟ್‌​ನಲ್ಲೇ ಚಿತ್ರೀ​ಕ​ರಣ ನಡೆ​ಯ​ಲಿದೆ. ಗುರು​ಕುಲ, ಅದಕ್ಕೆ ತಕ್ಕಂತೆ ಗಿರಿ​ಜನರ ಕಾಲೋನಿ, ನೂರಾರು ಕುಟುಂಬ​ಗಳು ವಾಸಿ​ಸುವ ತಾಂಡ, ಅಲ್ಲಿ​ರುವ ಒಂದು ಸಮು​ದಾಯ ಹೀಗೆ ಹಲವು ಅಂಶ​ಗ​ಳನ್ನು ಕ್ರಿಯೇಟ್‌ ಮಾಡಿ​ರುವ ಸೆಟ್‌ ಇದಾ​ಗಿದ್ದು, ಮೊದಲ ಹಂತ​ವಾಗಿ ಐದು ದಿನ​ಗ​ಳ ಚಿತ್ರೀ​ಕ​ರಣ ಪ್ಲಾನ್‌ ಮಾಡಿ​ಕೊಂಡಿ​ದ್ದಾರೆ.

ಗೂಗಲ್‌ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್‌ ಮಾಡ್ತಾರೆ ನೋಡಿ!

ಸಮರ ಕಲಿ​ಯುವ ತಾಣ: ಮದ​ಕರಿ ನಾಯಕ ಸಿಂಹಾ​ಸನ ಏರುವ ಮುನ್ನ ರಾಜ​ನಾ​ಗಲು ಬೇಕಾ​ಗುವ ತಯಾರಿ ಮಾಡಿ​ಕೊ​ಳ್ಳು​ತ್ತಾನೆ. 12 ವರ್ಷಕ್ಕೆ ಮದ​ಕ​ರಿ​ನಾ​ಯಕ ಸಿಂಹಾ​ಸನ ಏರು​ತ್ತಾನೆಂಬುದು ಇತಿ​ಹಾ​ಸದ ಪುಟ​ಗ​ಳು ಹೇಳು​ತ್ತವೆ. ಹಾಗೆ ತೀರಾ ಚಿಕ್ಕ ವಯ​ಸ್ಸಿಗೆ ರಾಜ​ನಾಗಿ, ತನ್ನನ್ನು ತಾನು ರಕ್ಷಿ​ಸಿ​ಕೊ​ಳ್ಳು​ವು​ದಕ್ಕೆ ಮದ​ಕರಿ ನಾಯ​ಕ​ನಿಗೆ ಸಕಲ ವಿದ್ಯೆ​ಗ​ಳನ್ನೂ ಕೇರ​ಳ​ದಲ್ಲಿ ಕಲಿ​ಸಿ​ಕೊ​ಡ​ಲಾ​ಗು​ತ್ತದೆ. ಇದೇ ಭಾಗದ ಚಿತ್ರೀ​ಕ​ರಣ ಕೇರ​ಳದ ಗುರು​ಕುಲ ಸೆಟ್‌​ನಲ್ಲಿ ನಡೆ​ಯು​ತ್ತಿದೆ. ಬಾಲ್ಯ ಮತ್ತು ಯೌವ್ವ​ನದ ದಿನ​ಗಳ ದೃಶ್ಯ​ಗ​ಳನ್ನು ಚಿತ್ರೀ​ಕ​ರಣ ಮಾಡುವ ಯೋಜನೆ ನಿರ್ದೇ​ಶ​ಕ​ರದ್ದು. ‘ಮದ​ಕರಿ ನಾಯಕ ನಾಯ​ಕರ ರಾಜ ಅಲ್ಲ, ಚಿತ್ರ​ದು​ರ್ಗದ ದೊರೆ, ಆಗಿನ ಸಾಮ್ರಾ​ಜ್ಯದ ರಾಜ’ ಎಂದು ಹೇಳುವ ಈ ಚಿತ್ರ​ದಲ್ಲಿ ದರ್ಶನ್‌ ರಾಜ​ವೀರ ಮದ​ಕರಿ ನಾಯ​ಕ​ನಾಗಿ ಹೇಗೆ ಮಿಂಚ​ಲಿ​ದ್ದಾ​ರೆಂಬ ಕುತೂ​ಹಲ ಎಲ್ಲ​ರಿಗೂ ಶುರು​ವಾ​ಗಿದೆ.

"