Valentine's Day ಜೊತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕೃಷ್ಣ-ಮಿಲನಾ ಜೋಡಿ!

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್ ಜೋಡಿ ಡಬಲ್ ಖುಷಿಯಲ್ಲಿದ್ದಾರೆ. ಒಂದು ಕಡೆ ಪ್ರೇಮಿಗಳ ದಿನದ ಸಂತಸವಾದರೆ, ಮತ್ತೊಂದು ಕಡೆ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Love Mocktail 2 Actors Darling Krishna and Milana Nagaraj Celebrate Valentines Day and Wedding Anniversary gvd

ಇಂದು ಪ್ರೇಮಿಗಳ ದಿನಾಚರಣೆ (Valentine's Day). ಇಡೀ ಜಗತ್ತೇ ಈ ದಿನವನ್ನು ಬಲು ಸಂಭ್ರಮದಿಂದ ಆಚರಿಸುತ್ತದೆ. ಅದರಲ್ಲೂ ಪ್ರೇಮಕ್ಕೂ-ಚಿತ್ರರಂಗಕ್ಕೂ ಒಂದು ರೀತಿಯ ನಂಟು. ಯಾವಾಗಲೂ ಚಿತ್ರರಂಗ ಅಂದರೆ ಕೆಲವು ತಾರಾ ಜೋಡಿಗಳ ಲವ್ ಸ್ಟೋರಿಗಳು ಕಣ್ಮುಂದೆ ಬರುತ್ತವೆ. ಇವರ ಪೈಕಿ ಕನ್ನಡ ಚಿತ್ರರಂಗದ ದಿ ಬೆಸ್ಟ್​ ಜೋಡಿ ಎನಿಸಿಕೊಂಡಿರುವ ಮಿಲನಾ ನಾಗರಾಜ್ (Milana Nagaraj)​ ಮತ್ತು ಡಾರ್ಲಿಂಗ್​ ಕೃಷ್ಣ (Darling Krishna) ಅವರದು. ಹೌದು! ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್ ಚಂದನವನದ ಕ್ಯೂಟ್ ಜೋಡಿಗಳಲ್ಲಿ ಒಂದು. ಇದೀಗ ಈ ಜೋಡಿ ಡಬಲ್ ಖುಷಿಯಲ್ಲಿದ್ದಾರೆ. 

ಒಂದು ಕಡೆ ಪ್ರೇಮಿಗಳ ದಿನದ ಸಂತಸವಾದರೆ, ಮತ್ತೊಂದು ಕಡೆ ಮೊದಲ ವಿವಾಹ ವಾರ್ಷಿಕೋತ್ಸವದ (Wedding Anniversary) ಸಂಭ್ರಮ. ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 1 ವರ್ಷ ಕಳೆದಿದೆ. ಕೃಷ್ಣ ಹಾಗೂ ಮಿಲನಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಮನೆಯವರ ಒಪ್ಪಿಗೆಯಂತೆ ಕಳೆದ ವರ್ಷ 2021ರ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಇಬ್ಬರೂ ಹಸೆಮಣೆಯೆರಿದ್ದರು. ಮಾತ್ರವಲ್ಲದೇ ಅದ್ಧೂರಿ ವೇದಿಕೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಆಪ್ತರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. 

ಲವ್ ಮಾಕ್ಟೇಲ್- 2 ಬಗ್ಗೆಇಷ್ಟು ದಿನ ಸುಳ್ಳು ಹೇಳ್ತಿದ್ದೆ ಈಗ ಸತ್ಯ ಹೊರ ಬಂದಿದೆ: Milana Nagaraj

ಡಾರ್ಲಿಂಗ್ ಕೃಷ್ಣಗೆ ವ್ಯಾಲೆಂಟೈನ್ಸ್ ಡೇ ಹಾಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿರುವ ಮಿಲನಾ ನಾಗರಾಜ್, ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸ್ಪೆಷಲ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ 'ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಇದುವರೆಗೆ ಮಾಡಿದ ಅತ್ಯುತ್ತಮ ನಿರ್ಧಾರ. ನೀವೇ ನನ್ನ ಪ್ರಪಂಚ. ಹ್ಯಾಪಿ ಆ್ಯನಿವರ್ಸರಿ ಡಾರ್ಲಿಂಗ್​ ಕೃಷ್ಣ' ಎಂದು ಬರೆದುಕೊಂಡು ಡಾರ್ಲಿಂಗ್ ಕೃಷ್ಣ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಮಿಲನಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ತಿಳಿಸಿದ್ದಾರೆ.

Love Mocktail 2 Actors Darling Krishna and Milana Nagaraj Celebrate Valentines Day and Wedding Anniversary gvd

ಇನ್ನು ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್​ ಜೊತೆಯಾಗಿ ಕಾಣಿಸಿಕೊಂಡಿರುವ 'ಲವ್ ಮಾಕ್ಟೇಲ್ 2'(Love Mocktail 2) ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಇದು ಕೂಡಾ ಈ ಜೋಡಿಯ ಸಂತಸವನ್ನು ಹೆಚ್ಚಿಸಿದೆ. 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದು, ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಕೃಷ್ಣ ಮತ್ತು ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ, ಸೂಸೈಡ್‌ ಯೋಚನೆ ಬರುತ್ತಿತ್ತು: ಡಾರ್ಲಿಂಗ್ ಕೃಷ್ಣ

ಇನ್ನು ಮೊದಲ ಭಾಗಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದರು. ಆದರೆ ಎರಡನೇ ಭಾಗಕ್ಕೆ ರಘು ದೀಕ್ಷಿತ್ ಬದಲಿಗೆ ನಕುಲ್ ಅಭಯಂಕರ್ (Nakul Abhyankar) ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಸಕಲೇಶಪುರ, ಮಡಿಕೇರಿ, ಲಡಾಖ್‌, ಚಿಕ್ಕಮಗಳೂರು ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, 'ದಿಲ್​ ಪಸಂದ್​', 'ಶುಗರ್ ಫ್ಯಾಕ್ಟರಿ', 'ಮಿಸ್ಟರ್ ಬ್ಯಾಚುಲರ್', 'ಲಕ್ಕಿ ಮ್ಯಾನ್' ಹಾಗೂ 'ಲವ್ ಮಿ ಔರ್ ಹೇಟ್ ಮಿ' ಸಿನಿಮಾಗಳು ಅನೌನ್ಸ್ ಆಗಿ ಚಿತ್ರೀಕರಣದ ಹಂತದಲ್ಲಿವೆ.
 

Latest Videos
Follow Us:
Download App:
  • android
  • ios