ಬ್ರಾಹ್ಮಣ್ಯ ಜಾತೀಯತೆ ಮುಂದುವರಿಯುತ್ತಿದೆ; ನಟ ಉಪೇಂದ್ರಗೆ ಟಾಂಗ್ ಕೊಟ್ಟ ಚೇತನ್!
ಕಾಂತಾರಾ ಚಿತ್ರದಿಂದ ಜೋರಾಗಿದೆ ಸ್ಟಾರ್ ವಾರ್. ರಿಯಲ್ ಸ್ಟಾರ್ ಉಪೇಂದ್ರೆಗೆ ಟಾಂಗ್ ಕೊಟ್ಟ ಚೇತನ್ ಕುಮಾರ್. ಏನನ್ನು ನೆಗ್ಲೆಕ್ಟ್ ಮಾಡಬೇಕು? ಯಾರು ನೆಗ್ಲೆಕ್ಟ್ ಮಾಡಬೇಕು ಎಂದು ಹೇಳಿದ ನಟ
ವರದಿ :- ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ ನ.4 : ಕಾಂತಾರಾ ಚಿತ್ರದ ಬಗ್ಗೆ ಕನ್ನಡ ಸೂಪರ್ ಸ್ಟಾರ್ ಗಳ ವಾರ್ ಇನ್ನೂ ಜೋರ್ ಆಗಿದೆ. ನಟ ಚೇತನ್ ಹೇಳಿಕೆಗೆ ಉಪೇಂದ್ರ ಕೊಟ್ಟ ತೀಕ್ಷ್ಣ ಪ್ರತಿಕ್ರಿಯೆ ಬೆನ್ನಲ್ಲೆ ನಟ ಚೇತನ್ ಉಪೇಂದ್ರಗೆ ಸಕತ್ ಟಾಂಗ್ ಕೊಟ್ಟಿದ್ದಾರೆ. ಕಲಬುರಗಿಯಲ್ಲಿಂದು ಏಷ್ಯಾನೇಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಟ ಚೇತನ್, ಉಪೇಂದ್ರಗೆ ಟಾಂಗ್ ಕೊಟ್ಟರು.
ಚೇತನ್ ಮೊದಲು ಹೇಳಿದ್ದು
ಭೂತಕೋಲ ಹಿಂದೂ ಸಂಪ್ರದಾಯ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಇದು ನಿಜವಲ್ಲ, ಬಹುಜನರ ಈ ಸಂಸ್ಕೃತಿ , ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಳೆಯದು ಎಂದು ನಟ ಚೇತನ ಈ ಮೊದಲು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಹಲವರ ಕೆಂಗಣ್ಣಿಗೂ ಗುರಿಯಾಗಿತ್ತು.
ಕಲಬುರಗಿ: ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್: ಕುಟುಂಬಸ್ಥರಿಗೆ ನಟ ಚೇತನ್ ಸಾಂತ್ವಾನ
ಸೂಪರ್ ಸ್ಟಾರ್ ಉಪೇಂದ್ರ ರಿಯಾಕ್ಷನ್
ನಟ ಚೇತನ ಅವರ ಹೇಳಿಕೆಗೆ ಸುಪರ್ ಸ್ಟಾರ್ ಉಪೇಂದ್ರ ಸಹ ಪ್ರತಿಕ್ರಿಯೆ ಕೊಟ್ಟಿದ್ದರು. ಇಂತಹ ವಿಚಾರಗಳನ್ನು ಇಗ್ನೋರ್ ಮಾಡಬೇಕು ಎಂದಿದ್ದರು.
ಕಲಬುರಗಿಯಲ್ಲಿ ಚೇತನ್ ಟಾಂಗ್
ಉಪೇಂದ್ರ ಹೇಳಿಕೆ ಬಗ್ಗೆ ಏಷ್ಯಾನೇಟ್ ಸುವರ್ಣ ನ್ಯೂಸ್ ಜೊತೆ ಕಲಬುರಗಿಯಲ್ಲಿ ಮಾತನಾಡಿದ ನಟ ಚೇತನ್, ಉಪೇಂದ್ರ ಅವರ ಪೂರ್ಣ ಹೇಳಿಕೆ ನಾನು ನೋಡಿಲ್ಲ, ಇಂತಹ ವಿಚಾರ ನಗ್ಲೆಕ್ಟ್ ಮಾಡಬೇಕು ಎಂದಿದ್ದಾರೆ ಎನ್ನುವುದನ್ನು ಕೇಳಿದ್ದೇನೆ. ಈ ಥರದ ವಿಚಾರ ನೆಗ್ಲೆಕ್ಟ್ ಮಾಡುವುದು ಸರಿಯಲ್ಲ. ನೆಗ್ಲೆಟ್ ಮಾಡಿದಷ್ಟು ಸಮಾಜದಲ್ಲಿ ಸಮಸ್ಯೆಗಳು ಬೆಳೆಯುತ್ತಾ ಹೋಗುತ್ತವೆ ಎಂದರು.
ಕನ್ನಡದಲ್ಲಿ ಮೀಟೂ ಇನ್ನೂ ಇದೆ
ಕರಪ್ಶನ್ ಅಂತಹ ವಿಚಾರ ನೆಗ್ಲೆಕ್ಟ್ ಮಾಡಿಬಿಡಬೇಕಾ ? ಕರಪ್ಶನ್ ಮಾಡುವ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ಕೊಡಿಸಬೇಕಲ್ವಾ ? ಕನ್ನಡ ಚಿತ್ರರಂಗದಲ್ಲಿ ಮೀಟು ಸಮಸ್ಯೆ 75 ವರ್ಷಗಳಿಂದ ನಡೆಯುತ್ತಲೇ ಇದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚುತ್ತಿವೆ. ಬ್ರಹ್ಮಣ್ಯ ಜಾತಿ ವ್ಯವಸ್ಥೆ ಸಹ ಇವತ್ತಿಗೂ ಜೀವಂತವಾಗಿದೆ. ಇಂತಹ ಎಲ್ಲವನ್ನ ನಗ್ಲೆಟ್ ಮಾಡಿಬಿಡಬೇಕಾ ? ಎಂದು ಚೇತನ್ ಪ್ರಶ್ನಿಸಿದರು.
ಕಾಂತಾರಾ ಚಿತ್ರ ಕುರಿತು ವಿವಾದಾತ್ಮಕ ಹೇಳಿಕೆ, ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ FIR!
ಬನಶಂಕರಿ ಬಡಾವಣೆಲಿ ಐಶಾರಾಮಿ ಜೀವನ ನಡೆಸುವವರು ನೆಗ್ಲೆಟ್ ಮಾಡಬಹುದು.
ತಾವು ಮಾತ್ರ ಸುಖವಾಗಿ ಇರುವವರು ಇಂಥದ್ದನ್ನ ನೆಗ್ಲೆಟ್ ಮಾಡಿ ಬಿಡಹುದು. ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಐಷಾರಾಮಿ ಬಂಗಲೆಯಲ್ಲಿ ಜೀವನ ನಡೆಸುವವರು , ಐಷಾರಾಮಿ ಕಾರುಗಳಲ್ಲಿ ಓಡಾಡುವವರು ಇಂತಹ ವಿಷಯಗಳನ್ನು ನೆಗ್ಲೆಟ್ ಮಾಡಿ ಬಿಡಬಹುದು. ಜನಸಾಮಾನ್ಯರು ನೆಗ್ಲೆಟ್ ಮಾಡಲು ಆಗುವುದಿಲ್ಲ ಎನ್ನುವ ಮೂಲಕ ಸೂಪರ್ ಸ್ಟಾರ್ ಉಪೇಂದ್ರ ಗೆ ನಟ ಚೇತನ್ ಟಾಂಗ್ ಕೊಟ್ಟರು.
ನೆಗ್ಲೆಕ್ಟ್ ಬದಲು ಸರಿಪಡಿಸಬೇಕು
ವಿಚಾರಗಳನ್ನು ನೆಗ್ಲೆಕ್ಟ್ ಮಾಡುವ ಬದಲು ಇಂಥವುಗಳನ್ನ ಗುರುತಿಸಿ ಅವರ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಸರಿಪಡಿಸಬೇಕು ಎಂದು ನಟ ಚೇತನ್ ಅಭಿಪ್ರಾಯಪಟ್ಟರು.