ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ: ಸಿಎಂ ಆಯ್ಕೆ ಬಿಕ್ಕಟ್ಟಿಗೆ ಸುಲಭ ಪರಿಹಾರ ಕೊಟ್ಟ ನಟ ಚೇತನ್
ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ ಎಂದು ನಟ ಚೇತನ್ ಕುಮಾರ್ ಸಿಎಂ ಆಯ್ಕೆ ಬಿಕ್ಕಟ್ಟಿಗೆ ಸುಲಭ ಪರಿಹಾರ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಕಾಂಗ್ರೆಸ್, ಸರ್ಕಾರ ರಚಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಸಿಎಂ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಲ್ಲಿ ಸಿಎಂ ಯಾರಾಬೇಕು ಎನ್ನುವ ಚರ್ಚೆ ಇನ್ನೂ ನಡೆಯುತ್ತಿದೆ. ಈ ಬಾರಿಯ ಕಾಂಗ್ರೆಸ್ ದೊಡ್ಡ ಗೆಲುವಿಗೆ ಇಬ್ಬರೂ ಶ್ರಮಿಸಿದ್ದಾರೆ. ಹಾಗಾಗಿ ಇಬ್ಬರಲ್ಲಿ ಸಿಎಂ ಯಾರಾಗಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವುದು ತೀರ ಕಷ್ಟವಾಗಿದೆ. ಅನೇಕರು ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ರೆ ಇನ್ನು ಅನೇಕರು ಸಿದ್ಧರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಅನೇಕರು ತಮ್ಮತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಈ ನಡುವೆ ನಟ ಚೇತನ್ ಅಹಿಂಸಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಯಾರು ಸಿಎಂ ಆದರೆ ಉತ್ತಮ ಎಂಬುದನ್ನು ಚೇತನ್ ವಿವರಣೆ ನೀಡಿದ್ದಾರೆ. ಸಿಎಂ ಆಯ್ಕೆ ಬಿಕ್ಕಟ್ಟಿಗೆ ಚೇತನ್ ಸುಲಭ ಪರಿಹಾರ ನೀಡಿದ್ದಾರೆ. ಈ ಬಗ್ಗೆ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ ಎಂದು ಹೇಳಿದ್ದಾರೆ. 'ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕರ್ನಾಟಕದ ಜನತೆಗೆ ಉತ್ತಮ ಸಿಎಂ ಯಾರು?. ನಮ್ಮ ಜನರ ಜೀವನವನ್ನು ಸುಧಾರಿಸುವ ದೃಷ್ಟಿಯಿಂದ ಸಿದ್ದರಾಮಯ್ಯ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅವನತಿ ವಿಚಾರದಲ್ಲಿ (ಪಕ್ಷದ ‘ಗೋರಿ ಅಗಿಯುವುದು’) ಡಿಕೆ ಶಿವಕುಮಾರ್. ಆದ್ದರಿದಂದ, ಅಲ್ಪಾವಧಿಗೆ ಸಿದ್ದರಾಮಯ್ಯ ಕರ್ನಾಟಕಕ್ಕೆ ಉತ್ತಮ. ದೀರ್ಘಾವಧಿಗೆ ಡಿಕೆ ಶಿವಕುಮಾರ್ ಕರ್ನಾಟಕಕ್ಕೆ ಉತ್ತಮ' ಎಂದು ಹೇಳಿದ್ದಾರೆ.
ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಸೀಕ್ರೆಟ್ ಬಾಕ್ಸ್ ಮತ್ತು 4 ಸೂತ್ರಗಳು!
ಚೇತನ್ ಪ್ರತಿಕ್ರಿಯೆಗೆ ಅನೇಕರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚೇತನ್ ಮಾತನ್ನು ಕೆಲವರು ಬೆಂಬಲಿಸಿದ್ರೆ ಇನ್ನೂ ಕೆಲವರು ತರಾಟೆ ತೆಗೆದುಕೊಂಡಿದ್ದಾರೆ. ನಟ ಚೇತನ್ ಯಾವುದೇ ವಿಚಾರಗಳ ಬಗ್ಗೆಯಾದರೂ ತಮ್ಮ ಅಭಿಪ್ರಿಯಾ ಹೊರಹಾಕುತ್ತಿರುತ್ತಾರೆ. ಅನೇಕ ಬಾರಿ ಚೇತನ್ ಮಾತುಗಳು ವಿವಾದಕ್ಕೆ ಸಿಲುಕಿ ಸಂಕಸಷ್ಟಕ್ಕೆ ಸಿಲುಕಿದ್ದು ಇದೆ. ಆದರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಚೇತನ್ ಯಾವತ್ತೂ ಹಿಂಜರಿಯಲ್ಲ. ಇದೀಗ ಸಿಎಂ ಆಯ್ಕೆ ವಿಚಾರವಾಗಿಯೂ ತಮ್ಮದೆ ವಿವರಣೆ ನೀಡಿದ್ದಾರೆ.